ಮಣ್ಣಾಗಲಿದ್ದ ವ್ಯಕ್ತಿ ಫಿನಿಕ್ಸ್‌ನಂತೆ ಎದ್ದು ಬಂದ!

Published : Jul 12, 2018, 08:58 PM IST
ಮಣ್ಣಾಗಲಿದ್ದ ವ್ಯಕ್ತಿ ಫಿನಿಕ್ಸ್‌ನಂತೆ ಎದ್ದು ಬಂದ!

ಸಾರಾಂಶ

ಸತ್ತಿದ್ದಾನೆಂದು ಭಾವಿಸಿ ವ್ಯಕ್ತಿಯ ಅಂತ್ಯಕ್ರೀಯೆ ಅಂತ್ಯಕ್ರೀಯೆ ವೇಳೆ ಎದ್ದು ಬಂದ ಈಶ್ವರ್ ಸೋಲಾಪುರದ ಸರ್ಕಾರಿ ವೈದ್ಯರ ಯಡವಟ್ಟು ಈಶ್ವರ್ ಸತ್ತಿದ್ದಾನೆಂದು ಘೋಷಿಸಿದ್ದ ವೈದ್ಯರು ಅಂತ್ಯಕ್ರೀಯೆ ವೇಳೆ ಬದುಕಿರುವ ಸಂಗತಿ ಬಯಲು  

ಕಲಬುರ್ಗಿ(ಜು12): ವ್ಯಕ್ತಿ ಸತ್ತಿದ್ದಾನೆಂದು ಭಾವಿಸಿ ಆತನನ್ನು ಮಣ್ಣು ಮಾಡಲು ಹೋದಾಗ ಆತ ಬದುಕಿರುವ ಸಂಗತಿ ಗೊತ್ತಾಗಿರುವ ಘಟನೆ ಅಫಜಲಪುರ್‌ನಲ್ಲಿ ನಡೆದಿದೆ.

ಇಲ್ಲಿನ ಸ್ಟೇಷನ್ ಗಾಣಗಾಪುರದ ಈಶ್ವರ್ ವಾವಡೆ ಎಂಬ ವ್ಯಕ್ತಿ ಅನಾರೋಗ್ಯದ ಕಾರಣ ಸೋಲಾಪುರದ ಆಸ್ಪತ್ರೆಗೆ ದಾಖಲಾಗಿದ್ದ. ಕೆಲ ದಿನಗಳ ಬಳಿಕ ಈಶ್ವರ್ ಸಾವನ್ನಪ್ಪಿದ್ದಾನೆ ಎಂದು ಸೋಲಾಪುರದ ಸರ್ಕಾರಿ ಆಸ್ಪತ್ರೆ  ವೈದ್ಯರು ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಈಶ್ವರ್ ಮೃತದೇಹವನ್ನು ಸ್ವಗ್ರಾಮಕ್ಕೆ ಕರೆತಂದು ಮಣ್ಣು ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿತ್ತು. ಆದರೆ ಅಂತ್ಯಕ್ರೀಯೆ ಸಂದರ್ಭದಲ್ಲಿ ಈಶ್ವರ್ ಬದುಕಿರುವ ಸಂಗತಿ ಗೊತ್ತಾಗಿದೆ.

ಕೂಡಲೇ ಈಶ್ವರ್‌ನನ್ನು ಕಲಬುರ್ಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು,  ಅಲ್ಲಿ ಆತನಿಗೆ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

62 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಡೆಸಿ ಗೆದ್ದ 82ರ ವೃದ್ಧ
ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನಿತಿನ್‌ ನಬೀನ್‌ ನೇಮಕ: ರಾಜಕೀಯ ವಲಯದಲ್ಲಿ ಅಚ್ಚರಿ