ಹೇಗಾದ್ರೂ ಮನಸ್ಸು ಬಂತು ಈ ತಾಯಿಗೆ ಕಂದನ ಎಸೆಯಲು?

Published : Jul 12, 2018, 08:12 PM ISTUpdated : Jul 12, 2018, 10:33 PM IST
ಹೇಗಾದ್ರೂ ಮನಸ್ಸು ಬಂತು ಈ ತಾಯಿಗೆ ಕಂದನ ಎಸೆಯಲು?

ಸಾರಾಂಶ

ಹೆಣ್ಣು ಮಗು ಬಿಟ್ಟು ಹೋದ ನಿಷ್ಕರುಣಿ ತಾಯಿ ಪೊದೆಯಲ್ಲಿ 15 ದಿನಗಳ ಹೆಣ್ಣು ಮಗು ಪತ್ತೆ ಆನೇಕಲ್ ನ ಜಿಗಳ ಕ್ರಾಸ್ ಬಳಿ ಮಗು ಪತ್ತೆ ಅಳುತ್ತಿದ್ದ ಕಂದಮ್ಮನನ್ನು ಗಮಿಸಿದ ದಾರಿಹೋಕರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು

ಆನೇಕಲ್(ಜು.12): ತಾಯಿಯೊಬ್ಬಳು ತನ್ನ 15 ದಿನಗಳ ಹೆಣ್ಣು ಮಗುವನ್ನು ಮರದ ಕೆಳಗೆ ಇಟ್ಟು ಹೋದ ಘಟನೆ ಆನೇಕಲ್‌ನಲ್ಲಿ ನಡೆದಿದೆ.


ಆನೇಕಲ್ ತಾಲೂಕಿನ ಜಿಗಳ ಕ್ರಾಸ್ ಬಳಿ ಮರವೊಂದರ ಬಳಿ 15 ದಿನಗಳ ಹೆಣ್ಣು ಮಗು ಪತ್ತೆಯಾಗಿದ್ದು, ಮರದ ಪಕ್ಕದ ಪೊದೆಯಲ್ಲಿ ಅಳುತ್ತಿದ್ದ ಮಗುವನ್ನು ಸಾರ್ವಜನಿಕರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊದೆಯಿಂದ ಮಗುವಿನ ಅಳುವಿನ ಶಬ್ದ ಕೇಳಿದ ದಾರಿಹೋಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  ಸುದ್ದಿ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಕುರಿತು ಅತ್ತಿಬೆಲೆ ಪೊಲೀಸ್ ರಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜರ್ಮನಿಗೆ ತೆರಳಿದ ರಾಹುಲ್ ಗಾಂಧಿ: 6 ತಿಂಗಳಲ್ಲಿ ವಿರೋಧ ಪಕ್ಷದ ನಾಯಕನ 5ನೇ ವಿದೇಶಿ ಪ್ರವಾಸ
ಎದುರುಮನೆ ಹುಡುಗಿಯೊಂದಿಗೆ ಓಡಿಹೋದ ಮಗ; ತಾಯಿಗೆ ಮನಬಂದಂತೆ ಥಳಿಸಿದ ಲೋಕಲ್ ಪೊಲೀಸ್!