
ಲಕ್ನೋ(ಸೆ. 10): ಪ್ರಧಾನಿ ನರೇಂದ್ರ ಮೋದಿ ಮತ್ತು ಉ.ಪ್ರ. ಸಿಎಂ ಯೋಗಿ ಆದಿತ್ಯನಾಥ್ ಅವರ ಚಿತ್ರಗಳನ್ನು ಪೇಂಟಿಂಗ್'ನಲ್ಲಿ ಬಿಡಿಸಿದ ಮಹಿಳೆಯೊಬ್ಬಳನ್ನು ಆಕೆಯ ಪತಿ ಮನೆಯಿಂದ ಹೊರಹಾಕಿದ ಘಟನೆ ಉತ್ತರಪ್ರದೇಶದ ಬಾಲ್ಲಿಯಾ ಜಿಲ್ಲೆಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಬಾಲ್ಲಿಯಾ ಜಿಲ್ಲೆಯ ಸಿಕಂದರ್'ಪುರ್ ತಾಲೂಕಿನ ಬಸಾಕಿರ್'ಪುರ್ ಗ್ರಾಮದಲ್ಲಿ ನಗ್ಮಾ ಪರ್ವೀನ್ ಅವರನ್ನು ಪತಿ ಪರ್ವೇಜ್ ಖಾನ್ ಚೆನ್ನಾಗಿ ಥಳಿಸಿದ್ದಲ್ಲೆ, ತನ್ನ ಮನೆಯಿಂದ ಹೊರದಬ್ಬಿದ್ದಾನೆನ್ನಲಾಗಿದೆ. ಮಹಿಳೆಯ ಕುಟುಂಬದವರು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಪೊಲೀಸರು ಹೇಳುವ ಪ್ರಕಾರ, ಪೇಂಟಿಂಗ್'ನಲ್ಲಿ ಆಸಕ್ತಿ ಇದ್ದ ನಗ್ಮಾ ಪರ್ವೀನ್ ಅವರು ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರ ಚಿತ್ರಗಳನ್ನು ಬಿಡಿಸಿ ತನ್ನ ಪತಿಗೆ ತೋರಿಸಿದ್ದಾರೆ. ಆಗ ಪತಿ ಪರ್ವೇಜ್ ಖಾನ್ ಅವರು ಪತ್ನಿಗೆ ಚೆನ್ನಾಗಿ ಹೊಡೆದುಬಡಿದಿದ್ದಾನೆ. ನಗ್ಮಾ ಪರ್ವೀನ್ ತನ್ನ ತಂದೆಗೆ ಈ ವಿಷಯ ತಿಳಿಸುತ್ತಾರೆ. ಮಹಿಳೆಯ ತಂದೆಯು ಮನೆಗೆ ಬಂದು ಅಳಿಯನನ್ನು ವಿಚಾರಿಸುತ್ತಾರೆ. "ನಗ್ಮಾಗೆ ಹುಚ್ಚು ಹಿಡಿದಿದೆ. ಮೋದಿ, ಆದಿತ್ಯನಾಥ್ ಅವರ ಚಿತ್ರಗಳನ್ನು ಬಿಡಿಸಿದವಳನ್ನು ಮನೆಯಲ್ಲಿ ಹೇಗೆ ಇಟ್ಟುಕೊಳ್ಳುವುದು?" ಎಂದು ಆಕೆಯ ತಂದೆಯನ್ನೇ ತರಾಟೆಗೆ ತೆಗೆದುಕೊಳ್ಳುತ್ತಾರೆ.
ನಗ್ಮಾ ಹಾಗೂ ಆಕೆಯ ಕುಟುಂಬದವರು ಇದು ವರದಕ್ಷಿಣೆ ಕಿರುಕುಳವೆಂದೂ ಆರೋಪಿಸಿದ್ದಾರೆ. ಪರ್ವೇಜ್ ಖಾನ್ ಹಾಗೂ ಆತನ ಮನೆಯವರು ತನಗೆ ನಿತ್ಯ ವರದಕ್ಷಿಣೆಗಾಗಿ ಪೀಡಿಸುತ್ತಿದ್ದರೆಂದು ನಗ್ಮಾ ಪರ್ವೀನ್ ದೂರಿದ್ದಾಳೆ. ಪೊಲೀಸರು ಸದ್ಯದಲ್ಲೇ ಎಫ್'ಐಆರ್ ದಾಖಲಿಸಿಕೊಳ್ಳಲಿದ್ದಾರೆನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.