
ಅಹಮದಾಬಾದ್ : ಲೋಕಸಭಾ ಚುನಾವಣಾ ಕಾವು ದೇಶದಲ್ಲಿ ಜೋರಾಗಿದೆ. ವಿವಿಧ ಪಕ್ಷಗಳಲ್ಲಿ ಬಿರಿಸಿನ ಪ್ರಚಾರ ನಡೆಯುತ್ತಿದೆ.
ಇತ್ತ ಗುಜರಾತ್ ನಲ್ಲಿ ಕಾಂಗ್ರೆಸ್ ನಾಯಕನಿಗೆ ವೇದಿಕೆಯಲ್ಲಿಯೇ ಕಪಾಳಮೋಕ್ಷ ಮಾಡಿದ ಘಟನೆಯೊಂದು ನಡೆದಿದೆ.
ಗುಜರಾತಿನ ಸುರೇಂದ್ರ ನಗರದಲ್ಲಿ ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಪಾಟೀದಾರ್ ಸಮಯದಾಯದ ಹೋರಾಟಗಾರ ಹಾರ್ದಿಕ್ ಪಟೇಲ್ ಗೆ ವ್ಯಕ್ತಿಯೋರ್ವ ಬಂದು ಥಳಿಸಿದ್ದಾನೆ.
ಕಾಂಗ್ರೆಸ್ ಜನಾಕ್ರೋಶ ಸಭೆಯಲ್ಲೇ ಕಾರ್ಯಕರ್ತ ಆಕ್ರೋಶ ವ್ಯಕ್ತಪಡಿಸಿ ಏಕಾ ಏಕಿ ಹಾರ್ದಿಕ್ ಪಟೇಲ್ ಕೆನ್ನೆಗೆ ಬಾರಿಸಿದ್ದಾರೆ.
ಏಕಾಏಕಿಯಾಗಿ ನಡೆದ ಈ ಘಟನೆಯಿಂದ ಹಾರ್ದಿಕ್ ಪಟೇಲ್ ದಿಗ್ಭ್ರಮೆಯಾಗಿದ್ದು, ಕಾರ್ಯಕರ್ತರು ಆಗಮಿಸಿ, ತಡೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.