
ನವದೆಹಲಿ[ಏ.19]: ಕೇಂದ್ರ ಲೋಕಸೇವಾ ಆಯೋಗ ನಡೆಸಿದ್ದ 2018ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ಅಂಕಪಟ್ಟಿಬಿಡುಗಡೆ ಮಾಡಲಾಗಿದೆ. ಅಗ್ರ ಶ್ರೇಯಾಂಕ ಪಡೆದ ಕನಿಷ್‌್ಕ ಕಟಾರಿಯಾ ಶೇ.55.35 ಅಂಕ ಪಡೆದುಕೊಂಡಿದ್ದಾರೆ.
ಬಾಂಬೆ ಐಐಟಿಯ ಬಿ.ಟೆಕ್ ವಿದ್ಯಾರ್ಥಿ ಆಗಿರುವ ಕನಿಷ್‌್ಕ ಒಟ್ಟು 2,025 ಅಂಕಗಳಿಗೆ 1,121 ಅಂಕಗಳನ್ನು ಪಡೆದುಕೊಂಡಿದ್ದಾರೆ. ಅವರು ಲಿಖಿತ ಪರೀಕ್ಷೆಯಲ್ಲಿ 942 ಅಂಕ, ಸಂದರ್ಶನದಲ್ಲಿ 179 ಅಂಕಗಳನ್ನು ಪಡೆದುಕೊಂಡಿದ್ದಾರೆ. 1,750 ಅಂಕಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನಕ್ಕೆ 275 ಅಂಕಗಳನ್ನು ನಿಗದಿಪಡಿಸಲಾಗಿತ್ತು. ಎರಡನೇ ರ‍್ಯಾಂಕ್ ಗಳಿಸಿದ ಅಕ್ಷತ್ ಜೈನ್ ಶೇ.53.3 ಅಂಕ ಪಡೆದಿದ್ದಾರೆ.
UPSC ಟಾಪರ್‌ಗಳ ಯಶಸ್ಸಿನ ಗುಟ್ಟು ರಟ್ಟು!
ಯುಪಿಎಸ್‌ಸಿ ಫಲಿತಾಂಶ ಏ.5ರಂದು ಪ್ರಕಟಗೊಂಡಿದ್ದು, 759 ಅಭ್ಯರ್ಥಿಗಳು ತೇರ್ಗಡೆಯಾಗಿದ್ದರು. 759ನೇ ರಾರಯಂಕ್ ಪಡೆದ ಬಿಭುತಿ ಭೂನ್ ನಾಯಕ್ ಶೇ.35.45 ಅಂಕ (718 ಅಂಕ) ಪಡೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.