
ಲಿವರ್‌ಪುಲ್(ಜ.08): ಈ ದಂಪತಿಗೆ ಮಕ್ಕಳಾಗಿ ಬರೋಬ್ಬರಿ 21 ವರ್ಷ ಕಳೆದಿವೆ. ಇಷ್ಟು ವರ್ಷ ಚೆಂದದ ಸಂಸಾರ ನಡೆಸಿದ ಈ ದಂಪತಿ, ಇದೀಗ ಮಕ್ಕಳ ವಿಷಯದಲ್ಲಿ ಕಿತ್ತಾಡಿಕೊಂಡಿದ್ದಾರೆ.
ಹೌದು, ಅಮೆರಿಕದ ಲಿವರ್‌ಪುಲ್‌ನ ಪ್ರಸಿದ್ಧ ಉದ್ಯಮಿ ರಿಚರ್ಡ್ ಮ್ಯಾಸನ್, ಇತ್ತೀಚಿಗಷ್ಟೇ ತಮ್ಮ ಪತ್ನಿ ಕೇಟ್‌ಳಿಗೆ ವಿಚ್ಛೇದನ ನೀಡಿದ್ದಾನೆ. ಆದರೆ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ತನ್ನ ಮೂವರೂ ಮಕ್ಕಳು ನನ್ನವಲ್ಲ ಎಂದು ಹೇಳಿಕೆ ನೀಡಿದ್ದಾನೆ.
ಮ್ಯಾಸನ್ ಪ್ರಕಾರ ಆತ ಈಗಾಗಲೇ ಸಿಸ್ಟಿಕ್ ಫೈಬ್ರೋಸಿಸ್ ಸ್ಥಿತಿಯಲ್ಲಿದ್ದು, ಆತನಿಂದ ಮಕ್ಕಳನ್ನು ಹೊಂದಲು ಸಾಧ್ಯವೇ ಇಲ್ಲ. ಸಿಸ್ಟಿಕ್ ಫೈಬ್ರೋಸಿಸ್ ಅಂದರೆ ಪುರುಷರು ಮಕ್ಕಳನ್ನು ಪಡೆಯದ ಸ್ಥಿತಿ. ಅದರಂತೆ ಮ್ಯಾಸನ್ ಕೂಡ ತನ್ನಿಂದ ಮಕ್ಕಳನ್ನು ಹೊಂದಲು ಸಾಧ್ಯವಿಲ್ಲ, ಆದರೂ ತಮಗೆ ಮೂವರು ಮಕ್ಕಳು ಹೇಗೆ ಹುಟ್ಟಿದ್ದಾರೆ ಎಂದು ಪ್ರಶ್ನಿಸಿದ್ದಾನೆ.
2016ರಲ್ಲೇ ಈ ಕುರಿತು ತನ್ನ ವೈದ್ಯ ಮಾಹಿತಿ ನೀಡಿದ್ದು, ಅದರಂತೆ ಇದೀಗ ತನ್ನ ಮಾಜಿ ಪತ್ನಿ ವಿರುದ್ಧ ಮ್ಯಾಸನ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾನೆ. ಅಂದಹಾಘೆ ರಿಚರ್ಡ್ ಮ್ಯಾಸನ್ ಗೆ 23 ವ಼ರ್ಷದ ಓರ್ವ ಮತ್ತು 19 ವರ್ಷದ ಅವಳಿ ಗಂಡು ಮಕ್ಕಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.