ದುಬಾರಿ ಕಾರು ಕದ್ದ : ಪೆಟ್ರೋಲ್ ಹಾಕಿಸಲು ದುಡ್ಡಿಲ್ಲದೇ ಸಿಕ್ಕಿಬಿದ್ದ

Published : Dec 04, 2017, 02:10 PM ISTUpdated : Apr 11, 2018, 12:39 PM IST
ದುಬಾರಿ ಕಾರು ಕದ್ದ : ಪೆಟ್ರೋಲ್ ಹಾಕಿಸಲು ದುಡ್ಡಿಲ್ಲದೇ ಸಿಕ್ಕಿಬಿದ್ದ

ಸಾರಾಂಶ

ದುಬಾರಿ ಕಾರಿಗೆ ಪೆಟ್ರೋಲ್ ಹಾಕಿಸಲು ದುಡ್ಡಿಲ್ಲದೆ, ದುಡ್ಡಿಗಾಗಿ ಬೇಡುತ್ತಿದ್ದ ವೇಳೆ ಕೆಲವರು ಸಂಶಯಗೊಂಡು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಆತ ಕೊನೆಗೂ ಸಿಕ್ಕಿ ಬಿದ್ದಿದ್ದಾನೆ.

ಕ್ಯಾಲಿ-ಫೋರ್ನಿಯಾ(ಡಿ.4): ಹಾಸಿಗೆ ಇದ್ದಷ್ಟೇ ಕಾಲು ಚಾಚು ಅನ್ನುತ್ತಾರೆ. ಆದರೆ, ಇಲ್ಲೊಬ್ಬ ಐಷಾರಾಮಿ ಜೀವನಕ್ಕಾಗಿ ಬಹುಕೋಟಿ ಬೆಲೆ ಬಾಳುವ - ಫೆರಾರಿ ಕಾರು ಕದ್ದು, ಅದಕ್ಕೆ ಪೆಟ್ರೋಲ್ ಹಾಕಿಸಲು ದುಡ್ಡಿಗಾಗಿ ಪರದಾಡುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾನೆ.

ಕ್ಯಾಲಿ-ಫೋರ್ನಿಯಾದ ಸಾಂತಾ ಅನಾದಲ್ಲಿ ಓರ್ವ 1.93 ಕೋಟಿ ಬೆಲೆ ಬಾಳುವ -ಫೆರಾರಿ ಕಾರನ್ನು ಕದ್ದಿದ್ದಾನೆ. ದುಬಾರಿ ಕಾರಿನ ಚಾಲನೆಯೂ ಸರಿಯಾಗಿ ಗೊತ್ತಿಲ್ಲದೆ, ಗೇರ್ಬಾಕ್ಸ್, ಎಂಜಿನ್, ಲೋಗೊಗೆಹಾನಿ ಮಾಡಿದ್ದಾನೆ. ಇಷ್ಟೇ ಆಗಿದ್ದರೆ ಏನಾಗುತ್ತಿರಲಿಲ್ಲ.

ಆದರೆ ಇಂತಹ ದುಬಾರಿ ಕಾರಿಗೆ ಪೆಟ್ರೋಲ್ ಹಾಕಿಸಲು ದುಡ್ಡಿಲ್ಲದೆ, ದುಡ್ಡಿಗಾಗಿ ಬೇಡುತ್ತಿದ್ದ ವೇಳೆ ಕೆಲವರು ಸಂಶಯಗೊಂಡು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಆತ ಕೊನೆಗೂ ಸಿಕ್ಕಿ ಬಿದ್ದಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

EPF ಬಡ್ಡಿದರದಲ್ಲಿ ಭಾರಿ ಬದಲಾವಣೆ? ಉದ್ಯೋಗಿಗಳಿಗೆ ಬಿಗ್​ ಶಾಕ್​ ಕೊಡಲಿದ್ಯಾ ಸರ್ಕಾರ? ಏನಿದು ಸುದ್ದಿ?
2014ರಲ್ಲಿ ಸೋನಿಯಾ ನಾನು ಸಿಎಂ ಆಗಬೇಕೆಂದು ಬಯಸಿದ್ದರು ಆದರೆ ರಾಹುಲ್ ಅಡ್ಡಿಯಾದರು : ಅಸ್ಸಾಂ ಸಿಎಂ