ಅಕ್ಕಪಕ್ಕದವರೆಂದು ಸ್ನೇಹ ಮಾಡ್ಕೊಂಡ, ಆಕೆ ಸ್ನಾನ ಮಾಡುವಾಗ ಫೋಟೋ ತಕ್ಕೊಂಡ. ಫೋಟೋ ತೋರ್ಸಿ ಮಂಚಕ್ಕೆ.ಕರೆದ. ಆಕೆ ಬರಲೊಪ್ಪದಿದ್ದಾಗ ಬೆದರಿಸೋಕೆ ಶುರು ಮಾಡ್ದ. ನಂತರ ಆಕೆಯ ಒಂದೇ ಒಂದು ಕಾಲ್‍ಗೆ ಆಸೆಯಿಂದ ಹರಕೆಯ ಕುರಿಯಂತೆ 300 ಕಿ.ಮೀ. ಹೋದ. ಬರ್ತಿದ್ದವನ ದಾರಿ ಕಾದಿದ್ದು ಮಾತ್ರ ಎರಡು ಹೆಣ್ಣು, ಎರಡು ಗಂಡು. ನಂತರ ನಡೆದಿದ್ದು ಮಾತ್ರ ಭಯಾನಕ.
ಚಿಕ್ಕಮಗಳೂರು, [ನ.13]: ಯುವತಿ ಸ್ನಾನ ಮಾಡೋ ಫೋಟೋ ತೆಗೆದು ಮಂಚಕ್ಕೆ ಕರೆಯುತ್ತಿದ್ದವ ಹೆಣವಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ರುದ್ರಸ್ವಾಮಿ [32] ಹತ್ಯೆಯಾದವ. ಮೂಲತಃ ದಾವಣಗೆರೆಯವನು. ಬೆಂಗಳೂರಲ್ಲಿ ಐಶ್ವರ್ಯ ಕನ್ಸಲ್ಟೆನ್ಸ್ ಇಟ್ಕೊಂಡು ಖಾಸಗಿ ಕೆಲಸ ಕೊಡಿಸ್ತಿದ್ದ. ನೆರೆಯ ಆಶಾ ಎಂಬುವಳ ಸ್ನೇಹ ಮಾಡ್ಕೊಂಡು, ಆಕೆ ಸ್ನಾನ ಮಾಡುವಾಗ ಫೋಟೋ ತೆಕ್ಕೊಂಡು ಹಣ ಹಾಗೂ ದೈಹಿಕ ಸುಖಕ್ಕೆ ಪೀಡಿಸ್ತಿದ್ದ.
ಊರಿಗೆ ಬಂದ ಆಶಾ ವಿಷಯವನ್ನ ಹೆತ್ತವರಿಗೆ ಮುಟ್ಟಿಸಿದ್ಲು. ಅಪ್ಪನ ಮಾತು ಕೇಳಿ ಊರಿಗೆ ಬಾ ಅಂತಲೂ ಕರೆದ್ದಳು. ಅಂತೂ ಹಕ್ಕಿ ಬಲೆಗೆ ಬಿತ್ತು ಎಂದು ರುದ್ರಸ್ವಾಮಿ ಶಾಂತನಾಗಿ ದಾವಣಗೆರೆಯತ್ತ ಕಾರ್ ಹತ್ತೇ ಬಿಟ್ಟ.
ರುದ್ರನ ದಾರಿ ಕಾದಿದ್ದ ಆಶಾ ಮತ್ತು ಅಪ್ಪ-ಅಮ್ಮ ಎಳನೀರು ಕುಡಿಯೋಕೆಂದು ತೋಟಕ್ಕೆ ಕರೆದು ಆತನನ್ನ ಮುಗಿಸೇಬಿಟ್ರು. ನಾಲ್ವರು ಸೇರಿ ಆತನನ್ನ ಬರ್ಬರವಾಗಿ ಹತ್ಯೆಗೈದ್ರು.ಆದ್ರೆ, ಅದನ್ನ ಮುಚ್ಚಿ ಹಾಕೋಕೆ ಮತ್ತೊಂದು ಧೈರ್ಯ ಮಾಡಿದ್ರು.
ಸತ್ತ ಕುರಿಯ ಕತ್ತು ಸೀಳುವಂತೆ ಸತ್ತು ಬಿದ್ದವನ ರುಂಡ ಕತ್ತರಿಸಿದ್ರು. ರುಂಡ ಹಾಗೂ ಮುಂಡವನ್ನ ಬೇರೆ-ಬೇರೆ ಚೀಲದಕ್ಕೆ ಹಾಕಿ ಎರಡೂ ಚೀಲಕ್ಕೂ ಕಲ್ಲು ತುಂಬಿದ್ರು. ರುದ್ರಸ್ವಾಮಿ ಬಂದಿದ್ದ ಕಾರಿನ ಡಿಕ್ಕಿಗೆ ರುಂಡ-ಮುಂಡ ಹಾಕ್ಕೊಂಡು ಬಂದು, ಚನ್ನಗಿರಿಯಿಂದ 80 ಕಿ.ಮೀ. ದೂರದ ಅಜ್ಜಂಪುರದ ಸಮೀಪದ ಬುಕ್ಕರಾಯನಕೆರೆಗೆ ತಂದು ರುಂಡವನ್ನ ಒಂದೆಡೆ, ಮುಂಡವನ್ನ ಒಂದೆಡೆ ಎಸೆದು, ಕಾರನ್ನ ನೀಲಗಿರಿ ಪ್ಲಾಂಟೇಷನ್‍ನಲ್ಲಿ ಬಿಟ್ಟು ಹೋಗಿದ್ದಾರೆ.
ಮೃತನ ತೋಳಿನ ಮೇಲಿದ್ದ ವಾಣಿ ಮತ್ತು ಐಶ್ವರ್ಯ ಎಂಬ ಹೆಸರು, ಕಾರಿನೊಳಗಿದ್ದ ರಕ್ತದಮಯ ಹಾಗೂ ನಂಬರ್ ಪ್ಲೇಟ್‍ನಿಂದ ಮೃತನ ಗುರುತು ಸಿಕ್ಕಿದ್ದು, ಆಶಾ ಸೇರಿದಂತೆ ತಂದೆ-ತಮ್ಮ ಪೊಲೀಸರ ಅತಿಥಿಯಾಗಿದ್ದರೆ, ಅಮ್ಮ ಮಾತ್ರ ನಾಪತ್ತೆಯಾಗಿದ್ದಾಳೆ.
ಒಟ್ಟಾರೆ, ಮೃತ ರುದ್ರಸ್ವಾಮಿ ಹಾಗು ಆಶಾಳಿಗೂ ಸಂಬಂಧವಿತ್ತು. ಆಶಾ ಕುಟುಂಬ ಆರ್ಥಿಕವಾಗಿ ಸಬಲರಾಗಿದ್ದೇ ರುದ್ರಸ್ವಾಮಿಯಿಂದ ಅಂತೆಲ್ಲಾ ಊಹಾಪೋಹಗಳು ಹರಿದಾಡ್ತಿವೆ.
ಆದ್ರೆ, ಯಾವುದಕ್ಕೂ ಸಾಕ್ಷಿ ಇಲ್ಲ. ಆಶಾ ಪೊಲೀಸರ ಬಳಿ ಹೇಳಿರೋ ಹೇಳಿಕೆಗಳೋ ಸತ್ಯವೋ ಅಥವ ಪೊಲೀಸರಿಗೂ ದಾರಿ ತಪ್ಪಿಸಿದ್ದಾಳೋ ಗೊತ್ತಿಲ್ಲ. ಆದ್ರೆ, ಪರಸಂಘಕ್ಕಾಗಿ ತೆಗೆದ ಒಂದು ಫೋಟೋ ಒಂದು ಜೀವವನ್ನೇ ಬಲಿ ಪಡೆದಿದ್ದು ಮಾತ್ರ ದುರಂತ.