
ಬೆಂಗಳೂರು(ನ.20): ದುಡ್ಡಿಗಾಗಿ ಹೆಣ್ಣುಮಕ್ಕಳ ಬಾಳನ್ನ ಹಾಳು ಮಾಡುವ ಲಂಪಟನ ಕಥೆ ಇದು. ಆತ ಮದುವೆ ಆಗಿರುವುದು ಮೂವರನ್ನು. ಒಬ್ಬಳಿಗೆ ಮೋಸ ಮಾಡಿ ಅವಳ ಹಣ, ಆಸ್ತಿ ಲಪಟಾಯಿಸಿ ಮತ್ತೊಬ್ಬಳಿಗೆ ಬಾಳು ಕೊಡುವುದೇ ಈತನ ಫುಲ್ ಟೈಂ ಕೆಲಸ. ಇಂತವನನ್ನು ನಂಬಿ ಮದುವೆಯಾದ ಹೆಣ್ಣು ಮಗಳು ಈಗ ಬೀದಿಯಲ್ಲಿ ನಿಂತಿದ್ದಾಳೆ.
ನಾಗಾಚಾರ್ ಎಂಬಾತನೇ ಇವಳನ್ನು ಬಿಟ್ಟು ಅವಳು, ಅವಳನ್ನು ಬಿಟ್ಟು ಮತ್ತೊಬ್ಬಳು ಎನ್ನುವ ಕಣ್ಣಾ ಮುಚ್ಚಾಲೆ ಆಟವಾಡಿದವನು. ಇಬ್ಬರನ್ನು ಮದುವೆಯಾಗಿ, ಈಗ ಮೂರನೇವಳ ಜೊತೆ ಪರಾರಿಯಾಗಿದ್ದಾನೆ. ಅದಕ್ಕೆ ರೊಚ್ಚಿಗೆದ್ದ ಎರಡನೇ ಪತ್ನಿ ವೇದಾವತಿ ಆತನ ಮನೆಗೆ ನ್ಯಾಯ ಕೇಳಲು ಬಂದರೆ ಆತನ ಹೆತ್ತವರು ಆಕೆಗೇ ಧಮ್ಕಿ ಹಾಕಿದ್ದಾರೆ.
ನಾಗರಾಚಾರ್ ವೃತ್ತಿಯಲ್ಲಿ ಚಿನ್ನದ ವ್ಯಾಪಾರಿ. ಹೆಣ್ಮಕ್ಕಳಿಗೆ ಚಿನ್ನ, ರನ್ನ ಎಂದು ನಂಬಿಸಿ ಮದುವೆಯಾಗಿ ವಂಚಿಸಿದ್ದಾನೆ. ಮೊದಲ ಪತ್ನಿ ಸಾವನ್ನಪ್ಪಿದ ನಂತರ ಆ ವಿಷಯ ಮುಚ್ಚಿಟ್ಟು ಎರಡನೇಯವಳಾದ ವೇದಾವತಿಗೆ ತಾಳಿ ಕಟ್ಟಿದ್ದಾನೆ. ಈಗ ವೇದಾ ಮನೆಯಲ್ಲಿ ಸಾಕಿಕೊಂಡಿದ್ದ ನಾಗವೇಣಿ ಎಂಬ ಹುಡುಗಿಯೊಂದಿಗೆ ಪರಾರಿಯಾಗಿದ್ದಾನೆ.
5 ವರ್ಷಗಳ ಹಿಂದೆ ಶಿಲ್ಪ ಎಂಬಾಕೆಯನ್ನು ಮದುವೆಯಾಗಿದ್ದ ಈತನಿಗೆ ಇಬ್ಬರು ಮಕ್ಕಳಿದ್ದಾರೆ. ವರ್ಷದ ಹಿಂದೆ ಕೌಟುಂಬಿಕ ಕಲಹದಿಂದ ಶಿಲ್ಪಾ ಆತ್ಮಹತ್ಯೆಗೆ ಶರಣಾದ ಬಳಿಕ ವಿಷಯ ಮುಚ್ಚಿಟ್ಟು ಕುಂಬಳಗೋಡಿನ ವೇದಾಳನ್ನು ಮದುವೆಯಾಗಿದ್ದ. ವರದಕ್ಷಿಣೆಯಾಗಿ ಚಿನ್ನದಂಗಡಿಯನ್ನೇ ಪಡೆದಿದ್ದ. ಆದರೆ ವೇದಾಗ ಈತನ ಮೊದಲ ಮದುವೆ ವಿಷಯ ಗೊತ್ತಾಗಿ, ಗಂಡನನ್ನು ಪ್ರಶ್ನಿಸಿದಾಗ ಜಗಳ ವಾಗಿತ್ತಂತೆ.
ಈಗ ನಾಗರಾಚಾರ್ ಚಿನ್ನದಂಗಡಿ ಮೇಲೆ ಮೂವತ್ತು ಲಕ್ಷ ಲೋನ್ ತೆಗೆದು. ವೇದಾಳ ಮನೆಯ ಸಾಕು ಮಗಳೊಂದಿಗೆ ಪರಾರಿಯಾಗಿದ್ದಾನೆ. ಈ ಚಲಪಲ ಚೆನ್ನಿಗನ ಕರೆತಂದು ವೇದಾವತಿಗೆ ನ್ಯಾಯ ಕೊಡಿಸೋ ಜವಾಬ್ದಾರಿ ಕುಂಬಳಗೋಡು ಪೊಲೀಸರ ಹೆಗಲೇರಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.