
ನವದೆಹಲಿ(ನ.20): ಕೇಂದ್ರ ಸರ್ಕಾರ ನೋಟ್ ಬ್ಯಾನ್ ಮಾಡಿ ಇವತ್ತಿಗೆ 12 ದಿನಗಳು ಪೂರ್ಣಗೊಂಡಿವೆ. ಇದರಿಂದ ದೇಶದಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ, ಅತಿ ಹೆಚ್ಚು ಹಣ ವಿನಿಮಯ ಮಾಡಿದವರಿಗೆ, ಕೇಂದ್ರ ಸರ್ಕಾರ ಏನು ಮಾಡಲು ಹೊರಟಿದೆ. ಜೊತೆಗೆ ನಮ್ಮ ಬ್ಯಾಂಕ್ ಸಿಬ್ಬಂದಿಯ ಸ್ಥಿತಿ ಗತಿ ಏನಾಗಿದೆ ಎನ್ನುವುದರ ಸಂಪೂರ್ಣ ವಿವರ.
ಮೋದಿ ಮಾಸ್ಟರ್ ಸ್ಟ್ರೋಕ್ ಪರಿಣಾಮ ಅವಲೋಕನಕ್ಕೆ ಟೀಂ ರೆಡಿ
ನೋಟ್ ಬ್ಯಾನ್ನಿಂದ ಕೆಲವರು ಸಿಕ್ಕಾಪಟ್ಟೆ ಸಮಸ್ಯೆಯಾದರೆ ಇನ್ನು ಕೆಲವರು ಇದು ಒಳ್ಳೆಯದು ಎನ್ನುತ್ತಿದ್ದಾರೆ. ವಿಪಕ್ಷಗಳಂತೂ ಕೇಂದ್ರದ ವಿರುದ್ಧ ಮುಗಿಬಿದ್ದಿವೆ. ಹೀಗಾಗಿಯೇ ಪ್ರಧಾನಿ ನರೇಂದ್ರ ಮೋದಿ ಈಗ ಪರಿಸ್ಥಿತಿ ಅವಲೋಕನಕ್ಕೆ ತಂಡ ಕಳುಹಿಸುತ್ತಿದ್ದಾರೆ. ನೋಟ್ ಬ್ಯಾನ್'ನಿಂದ ದೇಶದಲ್ಲಾಗಿರುವ ಪರಿಣಾಮದ ಬಗ್ಗೆ ಸಂಪುಟ ಕಾರ್ಯದರ್ಶಿ ಪ್ರದೀಪ್ ಕುಮಾರ್ ಸಿನ್ಹಾ ನೇತೃತ್ವದ 27 ತಂಡಗಳು ಅಧ್ಯಯನ ನಡೆಸಲಿವೆ. ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲೂ ಪರಿಸ್ಥಿತಿ ಅವಲೋಕಿಸಿ ನವೆಂಬರ್ 25ರೊಳಗೆ ಕೇಂದ್ರಕ್ಕೆ ವರದಿ ಸಲ್ಲಿಸಲಿವೆ.
12 ದಿನಗಳ ನಂತರ ಬ್ಯಾಂಕ್ ಸಿಬ್ಬಂದಿ ರಿಲ್ಯಾಕ್ಸ್
ರಾಜ್ಯದಲ್ಲಿ ಕನಕ ಜಯಂತಿಗೂ ರಜೆ ರದ್ದು ಸೇರಿದಂತೆ ಸತತ 12 ದಿನಗಳಿಂದ ಬ್ಯಾಂಕ್ ಸಿಬ್ಬಂದಿ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಆದರೆ ಇಂದು ಇವರಿಗೆಲ್ಲ ರಿಲ್ಯಾಕ್ಸ್. ಎಲ್ಲಾ ಬ್ಯಾಂಕ್'ಗಳಿಗೆ ಇಂದು ರಜೆ ಇದ್ದು, ಎಟಿಎಂಗಳು ಮಾತ್ರ ಎಂದಿನಂತೆ ಕಾರ್ಯನಿರ್ವಹಿಸಲಿವೆ.
ಸರಿಯಾಗಿ ಮಾಹಿತಿ ನೀಡದ 100ಕ್ಕೂ ಹೆಚ್ಚು ಮಂದಿಗೆ ನೋಟಿಸ್
2.5 ಲಕ್ಷಕ್ಕೂ ಅಧಿಕ ಹಣವನ್ನು ಯಾರೇ ತಮ್ಮ ಖಾತೆಗೆ ಜಮಾ ಮಾಡಿದ್ದರೂ ಸೂಕ್ತ ದಾಖಲೆ ನೀಡಬೇಕು. ಒಂದು ವೇಳೆ ಆ ದಾಖಲೆಗಳಲ್ಲಿ ಲೋಪವಿದ್ದಲ್ಲಿ ಆದಾಯ ತೆರಿಗೆ ಕಾಯಿದೆ 133 (6) ಅಡಿ ನೋಟಿಸ್ ನಿಡಲಾಗುತ್ತದೆ. ಇದುವರೆಗೂ ಸುಮಾರು 100ಕ್ಕೂ ಹೆಚ್ಚು ಮಂದಿಗೆ ನೋಟಿಸ್ ನೀಡಲಾಗಿದೆ.
ಇನ್ನೂ ನೋಟ್ ಬ್ಯಾನ್'ನಿಂದ ದೇಶದಲ್ಲಿ ಸಾಕಷ್ಟು ಸಮಸ್ಯೆಗಳಾಗಿವೆ. ಆದರೆ, ನೋಟ್ ಬ್ಯಾನ್ ಬಳಿಕ ಜಮ್ಮು ಕಾಶ್ಮೀರದಲ್ಲಿ ಹಿಂಸಾಚಾರ ಕೂಡ ಕಡಿಮೆಯಾಗಿದೆ ಎನ್ನುವುದು ಗಮನಾರ್ಹ. ಒಟ್ಟಿನಲ್ಲಿ ನವೆಂಬರ್ 8ರ ಬಳಿಕ ದೇಶಾದ್ಯಂತ ನೋಟಿನದ್ದೇ ಸುದ್ದಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.