'ತನ್ವೀರ್‌ ಸೇಠ್‌ನಿಂದ ಯಾವುದೇ ಅನುಕೂಲ‌ ಆಗ್ತಿಲ್ಲ, ಅದಕ್ಕೆ ಕೊಲೆ ಯತ್ನ'..!

Published : Nov 18, 2019, 10:42 AM ISTUpdated : Nov 18, 2019, 10:59 AM IST
'ತನ್ವೀರ್‌ ಸೇಠ್‌ನಿಂದ ಯಾವುದೇ ಅನುಕೂಲ‌ ಆಗ್ತಿಲ್ಲ, ಅದಕ್ಕೆ ಕೊಲೆ ಯತ್ನ'..!

ಸಾರಾಂಶ

ಶಾಸಕ ತನ್ವೀರ್ ಸೇಠ್‌ ಮೇಲೆ ಕೊಲೆ ಯತ್ಮ ಮಾಡಿರುವುದು 8 ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದ ವ್ಯಕ್ತಿ ಎಂಬ ವಿಚಾರ ಬೆಳಕಿಗೆ ಬಂದಿದೆ. ಮೈಸೂರಿನ ಕೆ.ಎಂ. ಹಳ್ಳಿ‌ನಿವಾಸಿ ಆರೋಪಿ ಫರಾನ್ ಪಾಷಾನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಬೆಂಗಳೂರು(ನ.18): ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್‌ ಮೇಲೆ ಕೊಲೆ ಯತ್ಮ ಮಾಡಿರುವುದು 8 ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದ ವ್ಯಕ್ತಿ ಎಂಬ ವಿಚಾರ ಬೆಳಕಿಗೆ ಬಂದಿದೆ. ಮೈಸೂರಿನ ಕೆ.ಎಂ ಹಳ್ಳಿ‌ನಿವಾಸಿ ಆರೋಪಿ ಫರಾನ್ ಪಾಷಾನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಶಾಸಕ ತನ್ವೀಸೇಠ್ ಮೇಲೆ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ 26ವರ್ಷ ಫರಾನ್ ಪಾಷಾನನ್ನು ಪೊಲೀಸರು ಬಂಧಿಸಿದ್ದು, ರಾತ್ರಿಪೂರಾ ಆರೋಪಿಯ ವಿಚಾರಣೆ ನಡೆಸಲಾಗಿದೆ. ಮೈಸೂರಿನ ನರಸಿಂಹರಾಜ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ರಾತ್ರಿ ಪೂರ್ತಿ ವಿಚಾರಣೆ ನಡೆಸಿದ್ದಾರೆ.

ಅನುಕೂಲ ಆಗ್ತಿಲ್ಲ ಎಂದು ಕೊಲೆ ಯತ್ನ:

ತನ್ವೀರ್ ಸೇಠ್ ಮೇಲೆ ಅಸಮಾಧಾನದಿಂದ ದಾಳಿ ಮಾಡಿದ್ದಾಗಿ ಆರೋಪಿ ಹೇಳುತ್ತಿದ್ದು, ತನ್ವೀಸೇಠ್ ಅವರಿಂದ ಯಾರಿಗೂ ಯಾವುದೇ ಅನುಕೂಲ‌ ಆಗುತ್ತಿಲ್ಲ. ಆತ ಏನೂ ಮಾಡುತ್ತಿಲ್ಲ, ಹೀಗಾಗಿ ಕೊಲೆಯತ್ನ ಮಾಡಿದೆ ಎಂದು ಹೇಳಿದ್ದಾನೆ.

ಆರೋಪಿಯ ಹೇಳಿಕೆಗಳು ಸಾಕಷ್ಟು ಅನುಮಾನ ಹುಟ್ಟು ಹಾಕುತ್ತಿದ್ದು, ನಿಜವಾದ ಕಾರಣ ಏನೆಂಬುದು ತಿಳಿದುಬಂದಿಲ್ಲ. ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿ ಸತ್ಯ ಬಾಯಿ ಬಿಡಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಶಾಸಕ ತನ್ವೀರ್ ಸೇಠ್‌ಗೆ ಚಾಕು ಇರಿತ: ಆಸ್ಪತ್ರೆಗೆ ದಾಖಲು

ಫರಾನ್ ತನ್ನ 18 ನೇ ವಯಸ್ಸಿನಿಂದ‌ ಎಸ್‌ಡಿಪಿಐನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಆರೋಪಿ ಕಳೆದ 8 ವರ್ಷಗಳಿಂದ ಕಾಂಗ್ರೆಸ್ ‌ನಲ್ಲಿ ಗುರುತಿಸಿಕೊಂಡಿದ್ದ. ಹಿಂದಿನ ಎರಡು ಚುನಾವಣೆಯಲ್ಲಿ ತನ್ವೀಸೇಠ್ ಪರ ಕೆಲಸ ಮಾಡಿದ್ದ. ಆತನೇ ಸೇಠ್‌ ಮೇಲೆ ಕೊಲೆ ಯತ್ನ ಮಾಡಿರುವುದು ಸಾಕಷ್ಟು ಸಂಶಯಗಳಿಗೆ ಡೆಮಾಡಿಕೊಟ್ಟಿದೆ. ಸದ್ಯ ನರಸಿಂಹರಾಜ ಠಾಣೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಟಿಪ್ಪು ಜಯಂತಿ: ಅಧಿಕಾರಿಗಳು ಸರ್ಕಾರದ ಕೈಗೊಂಬೆ ಎಂದ ತನ್ವೀರ್ ಸೇಠ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಾಕ್ಸಿಕ್ ಸಿನಿಮಾ ರಿಲೀಸ್ ಸಮೀಪಿಸುತ್ತಿದ್ದಂತೆ ಐಟಿ ಪ್ರಕರಣದಲ್ಲಿ ನಟ ಯಶ್‌ಗೆ ಹೈಕೋರ್ಟ್ ರಿಲೀಫ್
ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಗೆ ಡಿಜಿ ಐಜಿಪಿ ಡಾ ಸಲೀಂ ಖಡಕ್ ಎಚ್ಚರಿಕೆ