ಪತ್ನಿಯಿಂದ ಡಿವೋರ್ಸ್ ಅರ್ಜಿ ಬೆನ್ನಲ್ಲೇ ಪತಿ ನಿಧನ.. ಅಪ್ಪನ ಸಾವಿನ ದೃಶ್ಯವನ್ನ ವಿಡಿಯೋ ಮಾಡಿದ 7 ವರ್ಷದ ಮಗ

Published : Aug 02, 2026, 11:19 AM IST
7 year old son records video

ಸಾರಾಂಶ

ಗುರುಗ್ರಾಮದಲ್ಲಿ MNC ಉದ್ಯೋಗಿಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರ 7 ವರ್ಷದ ಮಗ ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾನೆ. ಇದು ಆತ್ಮ*ತ್ಯೆಯಲ್ಲ, ಪತ್ನಿಯೇ ಮಾಡಿದ ಕೊಲೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದು, ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಗುರುಗ್ರಾಮ: ಹರಿಯಾಣದ ಗುರುಗ್ರಾಮದಲ್ಲಿ ಮನಕಲಕುವ ಮತ್ತು ಅಷ್ಟೇ ಆಘಾತಕಾರಿ ಘಟನೆ ನಡೆದಿದೆ. ಬಹುರಾಷ್ಟ್ರೀಯ ಕಂಪನಿಯೊಂದರ (MNC) ಉದ್ಯೋಗಿಯೊಬ್ಬರು ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಂದೆ ಸಾವಿನ ದವಡೆಯಲ್ಲಿರುವುದನ್ನು ಅವರ 7 ವರ್ಷದ ಪುಟ್ಟ ಮಗ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿದ್ದಾನೆ.

ಮೃತರನ್ನು ಸಂಜೀವ್ ಯಾದವ್ (36) ಎಂದು ಗುರುತಿಸಲಾಗಿದೆ. ಇವರು ಗುರುಗ್ರಾಮದ ಸೂರತ್ ನಗರದಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು. ಘಟನೆ ನಡೆದ ವೇಳೆ ಮನೆಯಲ್ಲಿ ಪತ್ನಿ ಹಾಗೂ ಮಗ ಮಾತ್ರ ಇದ್ದರು ಎನ್ನಲಾಗಿದೆ.

ಪತ್ನಿ ಚೀರಾಟ!

ಪೊಲೀಸರು ನೀಡಿದ ಮಾಹಿತಿಯ ಪ್ರಕಾರ.. ಸಂಜೀವ್ ಯಾದವ್ ಅವರು ನೇಣು ಬಿಗಿದ ಸ್ಥಿತಿಯಲ್ಲಿದ್ದರು. ಈ ಭಯಾನಕ ದೃಶ್ಯವನ್ನು ಕಂಡ ಅವರ 7 ವರ್ಷದ ಮಗ ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಿದ್ದಾನೆ. ಅದೇ ಸಮಯದಲ್ಲಿ ಪತ್ನಿ ಮನ್‌ಪ್ರೀತ್ ಕೌರ್ ಅವರು ಯಾರಾದರೂ ಬಂದು ಸಹಾಯ ಮಾಡಿ ಎಂದು ಜೋರಾಗಿ ಕಿರುಚುತ್ತಿರುವುದು ವಿಡಿಯೋದಲ್ಲಿದೆ. ತಕ್ಷಣವೇ ಈ ವಿಷಯವನ್ನು ಮನ್‌ಪ್ರೀತ್ ತನ್ನ ಪೋಷಕರಿಗೆ ಹಾಗೂ ಸಂಜೀವ್ ಅವರ ಪೋಷಕರಿಗೆ ತಿಳಿಸಿದ್ದಾರೆ.

ಕೊಲೆ ಎಂದ ಕುಟುಂಬಸ್ಥರು

ಸಂಜೀವ್ ಸಾವು ಆತ್ಮ*ತ್ಯೆಯಲ್ಲ, ಇದೊಂದು ವ್ಯವಸ್ಥಿತ ಕೊಲೆ ಎಂದು ಸಂಜೀವ್ ತಂದೆ ರಾಮಸೇವಕ್ ಯಾದವ್ ಮತ್ತು ಸಹೋದರಿ ಕಿರಣ್ ಆರೋಪಿಸಿದ್ದಾರೆ. ಸಂಜೀವ್ ಅವರು 100 ಕೆಜಿಗಿಂತ ಹೆಚ್ಚು ತೂಕವಿದ್ದರು. ಅಷ್ಟು ತೂಕದ ವ್ಯಕ್ತಿ ಫ್ಯಾನ್‌ಗೆ ನೇಣು ಹಾಕಿಕೊಳ್ಳಲು ಹೇಗೆ ಸಾಧ್ಯ? ಫ್ಯಾನ್ ಅದನ್ನು ಹೇಗೆ ತಡೆದುಕೊಳ್ಳುತ್ತದೆ? ಎಂದು ಸಹೋದರಿ ಪ್ರಶ್ನಿಸಿದ್ದಾರೆ. ಪತ್ನಿ ಮನ್‌ಪ್ರೀತ್ ಕೌರ್ ಬೇರೆ ವ್ಯಕ್ತಿಗಳೊಂದಿಗೆ ಸೇರಿಕೊಂಡು ನನ್ನ ಮಗನನ್ನು ಕೊಂದಿದ್ದಾಳೆ ಎಂದು ತಂದೆ ಆರೋಪಿಸಿದ್ದಾರೆ.

ಪ್ರೇಮ ವಿವಾಹ ಮತ್ತು ದಾಂಪತ್ಯ ಕಲಹ

ಮೂಲತಃ ಅಮೃತಸರದವರಾದ ಸಂಜೀವ್ ಮತ್ತು ಅಂಬಾಲಾದ ಮನ್‌ಪ್ರೀತ್ ಕೌರ್ ಅವರು ಗುರುಗ್ರಾಮದ 'ಡೆನ್ಸೊ' ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಪರಿಚಯವಾದ ಇವರು 2018 ರಲ್ಲಿ ಪ್ರೇಮ ವಿವಾಹವಾಗಿದ್ದರು. 2019 ರಲ್ಲಿ ಇವರಿಗೆ ಗಂಡು ಮಗು ಜನಿಸಿತ್ತು. ಆದರೆ ಕಳೆದ ಕೆಲವು ಸಮಯದಿಂದ ಇವರ ನಡುವೆ ದಾಂಪತ್ಯ ಕಲಹ ತಾರಕಕ್ಕೇರಿತ್ತು. ಮನ್‌ಪ್ರೀತ್ ಅವರು ಸಂಜೀವ್‌ನಿಂದ ವಿಚ್ಛೇದನ (Divorce) ಕೋರಿದ್ದರು ಎನ್ನಲಾಗಿದೆ. ಸಂಜೀವ್ ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಪತ್ನಿ ಮನ್‌ಪ್ರೀತ್ ಕೌರ್ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ತುಂಗಾ ಜಲಾಶಯದಿಂದ ನದಿಗೆ 75,000 ಕ್ಯೂಸೆಕ್‌ ನೀರು; ತುಂಗಭದ್ರಾ ಜಲಾಶಯಕ್ಕೆ ಒಳಹರಿವು
ಜಾಬ್‌ ಸಿಗೋದೆ ಕಷ್ಟ.. ಅಂತದ್ರಲ್ಲಿ 20ಕ್ಕೂ ಹೆಚ್ಚು ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಂಡ ಯುವಕನ Success Story Viral