ಸತತ 3 ಗಂಟೆ ಡೋರ್ ಬೆಲ್ ನೆಕ್ಕಿದ ಭೂಪ: ಏನಾಗಿತ್ತೇನೋ ಪಾಪ?

Published : Jan 09, 2019, 04:22 PM IST
ಸತತ 3 ಗಂಟೆ ಡೋರ್ ಬೆಲ್ ನೆಕ್ಕಿದ ಭೂಪ: ಏನಾಗಿತ್ತೇನೋ ಪಾಪ?

ಸಾರಾಂಶ

3 ಗಂಟೆ ಮನೆಯ ಡೋರ್ ಬೆಲ್ ನೆಕ್ಕಿದ ಆಗುಂತಕ| ಕ್ಯಾಲಿಫೋರ್ನಿಯಾದ ಸಲಿನಾಸ್ ನಲ್ಲಿ ವಿಚಿತ್ರ ಘಟನೆ| ಸತತ ಮೂರು ಗಂಟೆ ಡೋರ್ ಬೆಲ್ ನೆಕ್ಕುತ್ತಾ ನಿಂತಿದ್ದ ಭೂಪ| ಡಂಗನ್ಸ್ ಎಂಬಾತನ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ| ಆಗುಂತಕನ ಹುಡುಕಾಟದಲ್ಲಿ ಕ್ಯಾಲಿಫೋರ್ನಿಯಾ ಪೊಲೀಸರು

ಕ್ಯಾಲಿಫೋರ್ನಿಯಾ(ಜ.09): ಆ ಮನೆಯ ಒಳಗಡೆ ತುಂಬಿದ ಕುಟುಂಬವೊಂದು ಹಾಯಾಗಿ ಮಲಗಿ ನಿದ್ದೆ ಮಾಡುತ್ತಿತ್ತು. ಆದರೆ ಮನೆಯ ಹೊರಗಡೆ ವ್ಯಕ್ತಿಯೋರ್ವ ಸತತ ಮೂರು ಗಂಟೆಗಳ ಕಾಲ ಡೋರ್ ಬೆಲ್ ನೆಕ್ಕುತ್ತಾ ನಿಂತಿದ್ದು ಕಂಡು ಬಂದ ನಿದ್ದೆಯೂ ಹಾರಿ ಹೋಗಿತ್ತು.

ಹೌದು, ಇಲ್ಲಿನ ಸಲಿನಾಸ್ ನಲ್ಲಿರುವ ಡಂಗನ್ಸ್ ಎಂಬಾತನ ಮನೆಗೆ ರಾತ್ರಿ ವೇಳೆ ನುಗ್ಗಿದ ಅಪರಿಚತನೋರ್ವ, ಸತತ ಮೂರು ಗಂಡೆಗಳ ಕಾಲ ಡೊರ್ ಬೆಲ್ ನೆಕ್ಕುತ್ತಾ ನಿಂತಿದ್ದಾನೆ.

ಆಗುಂತಕನೋರ್ವ ಈ ರೀತಿ ವಿಚಿತ್ರ ವರ್ತನೆ ತೋರುತ್ತಿರುವ ದೃಶ್ಯ ಡಂಗನ್ಸ್ ಮನೆಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಡಂಗನ್ಸ್ ಕುಟುಂಬ ನಿಜಕ್ಕೂ ಬೆಚ್ಚಿ ಬಿದ್ದಿದೆ.

ಇನ್ನು ಡಂಗನ್ಸ್ ನೀಡಿದ ದೂರನ್ನು ಸ್ವೀಕರಿಸಿರುವ ಪೊಲೀಸರು ಕ್ಯಾಲಿಫೋರ್ನಿಯಾದಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದ್ದು, ಈತನ ಹುಡುಕಾಟದಲ್ಲಿ ನಿರತರಾಗಿದ್ದಾರೆ. ವ್ಯಕ್ತಿ ಡೋರ್ ಬೆಲ್ ನೆಕ್ಕುತ್ತಿರುವುದನ್ನು ನೋಡಿದರೆ ಆತ ಮಾನಸಿಕ ಕಾಯಿಲೆಯಿಂದ ಬಳಲುತ್ತಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ