
ಲಂಡನ್ [ಜೂ. 27] ಇದೊಂದು ವಿಚಿತ್ರ ಸುದ್ದಿ. ಆದರೆ ವಿಜ್ಞಾನ, ವೈದ್ಯಕೀಯ ಪ್ರಪಂಚದಲ್ಲಿ ಅತಿ ದೊಡ್ಡ ಸಾಧನೆಯೆ ಸರಿ. 44 ವರ್ಷದ ಬ್ರಿಟನ್ ಪುರುಷನೊಬ್ಬ ಇದೇ ಮೊದಲ ಬಾರಿಗೆ ಲೈಂಗಿಕ ಕ್ರಿಯೆ ನಡೆಸಲು ಶಕ್ತನಾಗಿದ್ದಾನೆ. ಹೌದು ಮದುವೆ ಗಂಡಿಗೆ ಅದೇ ಇಲ್ಲ ಎಂಬ ಗಾದೆಯಂತೆ ಪುರುಷ ಜನನೇಂದ್ರಿಯವೇ[ಶಿಶ್ನ] ಇಲ್ಲದ ಜನಿಸಿದ್ದ ಈತ ಇದೀಗ 50 ಸಾವಿರ ಪೌಂಡ್ ಅಂದರೆ ಬರೋಬ್ಬರಿ 46 ಲಕ್ಷ ರೂ. ವ್ಯಯಿಸಿ ತನ್ನ ಗಂಡಸ್ತನ ಪಡೆದುಕೊಂಡಿದ್ದಾನೆ. ಗೆಳತಿಯೊಂದಿಗೆ ಸೆಕ್ಸ್ ಮಾಡಲು ಕಾತರನಾಗಿದ್ದಾನೆ.
ಕೃತಕ ಜನನೇಂದ್ರಿಯವನ್ನು ಅಳವಡಿಸಿಕೊಂಡಿರುವ [bionic manhood] ಆಂಡ್ರ್ಯೂ ವಾರ್ಡಲ್ ತನ್ನ ವರ್ಜಿನಿಟಿ ಕಳೆದುಕೊಳ್ಳಲು ಉತ್ಸುಕನಾಗಿದ್ದಾನೆ. ಇನ್ನು 10 ದಿನಗಳ ಒಳಗೆ ಆಂಡ್ರ್ಯೂ ಮೊದಲ ಸಾರಿಗೆ ಪುರುಷತ್ವದ ಅನುಭವ ಪಡೆದುಕೊಳ್ಳಲಿದ್ದು ಆರು ತಿಂಗಳೊಳಗೆ ತನ್ನ ಪ್ರಿಯತಮೆ ಫೆಡ್ರಾ ಜತೆ ಸೆಕ್ಸ್ ಮಾಡಲು ಶಕ್ತನಾಗುತ್ತಾನೆ ಎಂದು ಲಂಡನ್‌ನ ಯುನಿವರ್ಸಿಟಿ ಕಾಲೆಜ್ ಹಾಸ್ಪಿಟಲ್ ವೈದ್ಯರು ತಿಳಿಸಿದ್ದಾರೆ.
ಆಂಡ್ರ್ಯೂ ವಿಚಿತ್ರ ರೀತಿಯಲ್ಲಿ ಜನ್ಮ ತಾಳಿದ್ದವ. ಆತನಿಗೆ ವೃಷಣಗಳಿದ್ದರೂ ಜನನೇಂದ್ರಿಯ ಇರಲಿಲ್ಲ. ಆತನ ತೊಳಿನ ಚರ್ಮ ಮತ್ತು ಮಾಂಸ ಬಳಕೆ ಮಾಡಿ ಕೃತಕ ಜನನೇಂದ್ರಿಯ ಜೋಡಣೆ ಕೆಲಸವನ್ನು ಕಳೆದ ನಾಲ್ಕು ವರ್ಷದಿಂದ ವೈದ್ಯರು ಮಾಡಿಕೊಂಡು ಬಂದಿದ್ದದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.