ಉಗ್ರ ಶಿಬಿರಗಳ ಧ್ವಂಸ : ಮಮತಾ ಪ್ರತಿಕ್ರಿಯೆ ಇದು

By Web DeskFirst Published Feb 26, 2019, 3:59 PM IST
Highlights

ಭಾರತೀಯ ವಾಯುಪಡೆ  ಜೈಶ್ ಇ ಮೊಹಮ್ಮದ್ ಉಗ್ರ ಶಿಬಿರಗಳ ಮೇಲೆ ದಾಳಿ ನಡೆಸಿದ್ದು, ಸಂಪೂರ್ಣ ಅಡ್ಡಾ ಧ್ವಂಸ ಮಾಡಲಾಗಿದೆ. ಇದಕ್ಕೆ ಹಲವು ನಾಯಕರು ಭಾರತೀಯ ಸೇನೆಯನ್ನು ಪ್ರಶಂಸಿದ್ದಾರೆ. 

ಕೋಲ್ಕತಾ : ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾರತೀಯ ವಾಯುಪಡೆ  ಉಗ್ರ ಶಿಬಿರಗಳ ಮೇಲೆ ನಡೆಸಿದ ದಾಳಿಯನ್ನು ಪ್ರಶಂಸಿಸಿದ್ದಾರೆ. 

ಭಾರತೀಯ ವಾಯುಪಡೆಯು ಭಾರತದ ಹೆಮ್ಮೆ ಜೈ ಹಿಂದ್ ಎಂದು ಮಮತಾ ಟ್ವೀಟ್ ಮಾಡಿದ್ದಾರೆ. 

ಹಹ್ಹಹ್ಹಾ... ಪಾಕ್‌ ಜನರೇ ಸರ್ಕಾರ, ಸೈನ್ಯದ ಬೆಂಬಲಕ್ಕಿಲ್ಲ!

ಮಂಗಳವಾರ ಬೆಳ್ಳಂಬೆಳಗ್ಗೆ  3.30ರ ಸುಮಾರಿಗೆ ದಾಳಿ ನಡೆಸಿದ್ದು, 300ಕ್ಕೂ ಹೆಚ್ಚು ಉಗ್ರರು ಹತರಾಗಿರುವ ಸಾಧ್ಯತೆ ಇದೆ. 

ಮಿರಾಜ್ 2000 ಯುದ್ಧ ವಿಮಾನ ಬಾಲಾಕೋಟ್ ಉಗ್ರರ ನೆಲೆಯಲ್ಲಿ 1000 ಕೆಜಿ ಬಾಂಬ್ ದಾಳಿ ನಡೆಸಿ ಉಗ್ರರ ಶಿಬಿರಗಳನ್ನು ಧ್ವಂಸ ಮಾಡಿದೆ. 

ಹೀಗಿತ್ತು ಜೋಷ್: ದಾಳಿಗೆ ಹೊರಟಾಗ ಎಲ್ಲಿದ್ರು ಪ್ರಧಾನಿ ಮೋದಿ?

ಫೆ. 14 ರಂದು ಪುಲ್ವಾಮದಲ್ಲಿ ಭಾರತೀಯ ಸೇನಾ ಪಡೆ ಮೇಲೆ ಜೈಶ್ ಇ ಮೊಹಮ್ಮದ್ ಸಂಘಟನೆ ಉಗ್ರರ ಆತ್ಮಹತ್ಯಾ ದಾಳಿಯಲ್ಲಿ 44 ಭಾರತೀಯ ಯೋಧರು ಹುತಾತ್ಮರಾಗಿದ್ದು, ಇದಕ್ಕೆ ಭಾರತೀಯ ವಾಯುಪಡೆ ಪ್ರತ್ಯುತ್ತರ ನೀಡಿದೆ. 

 

IAF also means India's Amazing Fighters. Jai Hind

— Mamata Banerjee (@MamataOfficial)
click me!