IAF ಕಾರ್ಯಾಚರಣೆ : ಆ 90 ಸೆಕೆಂಡ್ ನಲ್ಲಿ ಎಲ್ಲವೂ ಮುಗಿದಿತ್ತು

Published : Feb 26, 2019, 02:47 PM IST
IAF ಕಾರ್ಯಾಚರಣೆ :  ಆ 90 ಸೆಕೆಂಡ್ ನಲ್ಲಿ ಎಲ್ಲವೂ ಮುಗಿದಿತ್ತು

ಸಾರಾಂಶ

ಪುಲ್ವಾಮದಲ್ಲಿ  ಉಗ್ರರ ದಾಳಿಯಲ್ಲಿ 44 ಭಾರತೀಯ ಯೋಧರು ಹುತಾತ್ಮರಾದ ಕೆಲವೇ ದಿನಗಳಲ್ಲಿ ಭಾರತೀಯ ವಾಯುಪಡೆ ಖಡಕ್ ಪ್ರತಿಕ್ರಿಯೆ ನೀಡಿದೆ. ಕೇವಲ 90 ಸೆಕೆಂಡ್ ಗಳಲ್ಲಿ ಸೇನೆ ತನ್ನ ಕೆಲಸ ಮುಗಿಸಿ ವಾಪಸಾಗಿತ್ತು. 

ನವದೆಹಲಿ :  ಪುಲ್ವಾಮದಲ್ಲಿ ನಡೆದ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ವಾಯುಪಡೆ ಉಗ್ರ ಶಿಬಿರಗಳ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿದೆ.

ಬೆಳ್ಳಂಬೆಳಗ್ಗೆ 3.30ರ ಸುಮಾರಿಗೆ ಭಾರತೀಯ ವಾಯುಪಡೆಯ ಮಿರಾಜ್ 2000 ಯುದ್ಧ ವಿಮಾನ ಕೇವಲ 90 ಸೆಕೆಂಡ್ ಗಳಲ್ಲಿ  ತನ್ನ ಕೆಲಸ ಮುಗಿಸಿ ವಾಪಸಾಗಿತ್ತು. 

ಈ ವೇಳೆ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಉಗ್ರರು ಹತರಾಗಿದ್ದು, ಈ ವೇಳೆ ಜೈಶ್ ಮುಖಂಡ ಮಸೂದ್ ಅಜರ್ ಸಂಬಂಧಿ ಯೂಸುಫ್ ಅಜರ್ ಕೂಡ ಹತನಾಗಿದ್ದಾನೆ. 

ಫೆ.14ರಂದು 44 ಯೋಧರು  ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದು, ವಾರದಲ್ಲೇ ತಕ್ಕ ಉತ್ತರ ನೀಡಲಾಗಿದೆ. 

ಮಿರಾಜ್ 2000 ಯುದ್ಧ ವಿಮಾನವು ದಟ್ಟ ಅರಣ್ಯದ ಪರ್ವತ ಪ್ರದೇಶಕ್ಕೆ ತೆರಳಿ ಉಗ್ರರ ತರಬೇತಿ ಶಿಬಿರಗಳನ್ನು ಕೇವಲ 90 ಸೆಕೆಂಡ್ ಲ್ಲಿ ನಾಶ ಮಾಡಿ ಸಣ್ಣ ಹಾನಿಯೂ ಇಲ್ಲದೇ ಮತ್ತೆ ಮರಳಿತು. ಈ ವೇಳೆ 300 ಉಗ್ರರು ಹತರಾಗಿರುವ ಸಾಧ್ಯತೆ ಇದೆ. 

ಈ ಕ್ಯಾಂಪ್ ಮೂಲಕ ತರಬೇತಿ ನೀಡಿ ಇನ್ನಷ್ಟು ಆತ್ಮಹತ್ಯಾ ದಾಳಿಗೂ ನಡೆದ ಸಂಚನ್ನು ಈ ಮೂಲಕ ನಿರ್ನಾಮ ಮಾಡಲಾಗಿದೆ. 

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!