ಸರ್ಜಿಕಲ್ ದಾಳಿಯಲ್ಲಿ ಹತರಾದವರೆಷ್ಟು? ವಿದೇಶಿ ಮೀಡಿಯಾ ನಂಬಿ ಸಾಕ್ಷಿ ಕೇಳಿದ ಮಮತಾ

By Web DeskFirst Published Feb 28, 2019, 7:24 PM IST
Highlights

ಭಾರತವು ಪಾಕಿಸ್ತಾನದ ಒಳಕ್ಕೆ ನುಗ್ಗಿ ಉಗ್ರರ ಹುಟ್ಟು ಅಡಗಿಸಿ ಬಂದ ನಂತರ ಇಡೀ ದೇಶ ಕೇಂದ್ರ ಸರಕಾರ ಮತ್ತು ವಾಯು ಪಡೆಯ ಸಾಧನೆಯನ್ನು ಕೊಂಡಾಡಿತ್ತು. 

ನವದೆಹಲಿ[ಫೆ.28] ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜತಾಂತ್ರಿಕ ಹೋರಾಟ ಒಂದು ಕಡೆ ಆರಂಭವಾಗಿದ್ದರೆ ಇತ್ತ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬೇರೆಯದೆ ತೆರನಾದ ಹೇಳಿಕೆ ನೀಡಿದ್ದಾರೆ.

ಸರ್ಜಿಕಲ್ ದಾಳಿಯಾದ ನಂತರ ಪ್ರಧಾನಿ ಯಾವುದೇ ಸರ್ವ ಪಕ್ಷ ಸಭೆ ನಡೆಸಿಲ್ಲ. ನಮಗೆ ಆಪರೇಶನ್ ನ ಎಲ್ಲ ವಿವರ ಗೊತ್ತಾಗಬೇಕಿದೆ ಎಂದು ಮಮತಾ ಹೇಳಿದ್ದಾರೆ.

ಅಭಿನಂದನ್ ಬರುತ್ತಿದ್ದಾರೆ: 10 ಕಾರಣಗಳು

ಎಲ್ಲಿ ಬಾಂಬ್ ಎಸೆಯಲಾಯಿತು? ಎಷ್ಟು ಜನ ಹತರಾದರು ಎಂಬ ವಿವರ ನೀಡಬೇಕು ಎಂದು ಆಗ್ರಹಿಸಿರುರುವ ಮಮತಾ ವಿದೇಶಿ ಮಾಧ್ಯಮಗಳನ್ನು ಒಳಕ್ಕೆ ಎಳೆದು ತಂದಿದ್ದಾರೆ. ಕೆಲ ,ಮಾಧ್ಯಮಗಳು ಹೇಳುವಂತೆ ದಾಳಿಯಲ್ಲಿ ಒಬ್ಬರೂ ಹತರಾಗಿಲ್ಲ. ಇನ್ನು ಕೆಲ ಮಾಧ್ಯಮಗಳ ಪ್ರಕಾರ ಒಬ್ಬ ವ್ಯಕ್ತಿ ಸತ್ತಿದ್ದಾನೆ. ಹಾಗಾಗಿ ಇಡೀ ದೇಶಕ್ಕೆ ಸತ್ಯ ಗೊತ್ತಾಗಬೇಕು ಎಂದು ಮಮತಾ ಹೇಳಿದ್ದಾರೆ.

 

 

 

WB CM: After air strike, PM did not hold any all party meet. We want to know details of the operation. Where the bomb was dropped, how many people died. I was reading foreign media and they said that none died and some media houses said one died. We want to know the details. pic.twitter.com/jRSvcpbCTH

— ANI (@ANI)
click me!