
ತಿರುವನಂತಪುರಂ(ಡಿ.18): ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆ ಎಂಬ ಆರೋಪದ ಮೇಲೆ ಮಲಯಾಳಂ ಲೇಖಕ, ನಾಟಕ ಕಲಾವಿದ ಕಮಲ್ ಸಿ ಚವಾರ ಅಲಿಯಾಸ್ ಕಮಲ್ಸಿ ಅವರನ್ನು ನಾಡಕಾವು ಪೊಲೀಸರು ಬಂಧಿಸಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಚವಾರ ವಿರುದ್ಧ ಕರುಣಾಗಾಲಪಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಇಂದು ಕೋಯಿಕೋಡ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
‘‘ಚವಾರ ವಿರುದ್ಧ ಐಪಿಸಿ ಸೆಕ್ಷನ್ 124(ಎ)ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅವರನ್ನು ಕರುಣಾಗಪಲ್ಲಿ ಠಾಣಾ ಪೊಲೀಸರಿಗೆ ಹಸ್ತಾಂತರಿಸಲಾಗುವುದು,’’ ಎಂದು ಕೋಯಿಕೋಡ್ ಠಾಣೆಯ ಉಪ ಆಯುಕ್ತ ಪೃಥ್ವಿರಾಜ್ ಹೇಳಿದ್ದಾರೆ.
ಕಮಲ್ ಅವರ ಫೇಸ್‌ಬುಕ್ ವಾಲ್‌ನ'ಲ್ಲಿ ಅವರು ಪ್ರಕಟಿಸಿಕೊಂಡಿದ್ದ ‘ಸ್ಮಶಾನಂಗಳುದೆ ನೋಟೆಪುಸ್ತಕಂ’ ಕಾದಂಬರಿಯಲ್ಲಿನ ಕೆಲವು ಅಂಶಗಳು ರಾಷ್ಟ್ರಗೀತೆಗೆ ಅವಮಾನ ತರುತ್ತಿವೆ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾ ದೂರು ನೀಡಿತ್ತು. ಕಮಲ್ ಅವರ ಬಂಧನಕ್ಕೆ ಹಲವು ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.