ಸೇನಾ ಮುಖ್ಯಸ್ಥರ ನೇಮಕಾತಿ: ಇಂದಿರಾ ಹಾದಿ ತುಳಿದ ಮೋದಿ

Published : Dec 18, 2016, 12:07 PM ISTUpdated : Apr 11, 2018, 01:08 PM IST
ಸೇನಾ ಮುಖ್ಯಸ್ಥರ ನೇಮಕಾತಿ: ಇಂದಿರಾ ಹಾದಿ ತುಳಿದ ಮೋದಿ

ಸಾರಾಂಶ

ಭೂಸೇನೆಗೆ ಮುಖ್ಯಸ್ಥರನ್ನು ನೇಮಿಸುವಾಗ ಅಧಿಕಾರಿಯ ಸೇವಾ ಹಿರಿತನಕ್ಕೆ ಆದ್ಯತೆ ನೀಡುವುದು ದಶಕಗಳಿಂದ ನಡೆದು ಬಂದ ಸಂಪ್ರದಾಯ. ಆದರೆ ಲೆ|ಜ| ಬಿಪಿನ್ ರಾವತ್ ಅವರನ್ನು ನೇಮಿಸುವಾಗ  ಕೇಂದ್ರ ಸರ್ಕಾರ ಲೆ|ಜ| ಬಕ್ಷಿ ಹಾಗೂ ಲೆ|ಜ| ಪಿಏ ಹಾರಿಜ್ ಅವರ ಸೇವಾ ಹಿರಿತನವನ್ನು ಕಡೆಗಣಿಸಿದೆ.

ನವದೆಹಲಿ (ಡಿ.18): ಭೂಸೇನೆಗೆ ನೂತನ ಮುಖ್ಯಸ್ಥರನ್ನು ನೇಮಿಸಿರುವ ಕೇಂದ್ರ ಸರ್ಕಾರದ ಕ್ರಮವು ವಿವಾದವನ್ನು ಹುಟ್ಟುಹಾಕಿದೆ. ನೇಮಕ ಪ್ರಕ್ರಿಯೆಯಲ್ಲಿ ದೇಶದಲ್ಲಿ ನಡೆದು ಬಂದ ಸಂಪ್ರದಾಯವನ್ನು ಪಾಲಿಸಲಾಗಿಲ್ಲವೆಂಬ ಆರೋಪ ಕೇಳಿಬಂದಿದೆ.

ಭೂಸೇನೆಗೆ ಮುಖ್ಯಸ್ಥರನ್ನು ನೇಮಿಸುವಾಗ ಅಧಿಕಾರಿಯ ಸೇವಾ ಹಿರಿತನಕ್ಕೆ ಆದ್ಯತೆ ನೀಡುವುದು ದಶಕಗಳಿಂದ ನಡೆದು ಬಂದ ಸಂಪ್ರದಾಯ. ಆದರೆ ಲೆ|ಜ| ಬಿಪಿನ್ ರಾವತ್ ಅವರನ್ನು ನೇಮಿಸುವಾಗ  ಕೇಂದ್ರ ಸರ್ಕಾರ ಲೆ|ಜ| ಬಕ್ಷಿ ಹಾಗೂ ಲೆ|ಜ| ಪಿಏ ಹಾರಿಜ್ ಅವರ ಸೇವಾ ಹಿರಿತನವನ್ನು ಕಡೆಗಣಿಸಿದೆ.

ಆದರೆ ಸೇವಾ ಹಿರಿತನವನ್ನು ನಿರ್ಲಕ್ಷಿಸಿ ಸೇನೆಯ ಮುಖ್ಯಸ್ಥರನ್ನು ನೇಮಿಸಿರುವುದು ಮೊದಲ ಬಾರಿಯಲ್ಲ. 1983ರಲ್ಲಿ, ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಲೆ|ಜ| ಎಸ್.ಕೆ ಸಿನ್ಹಾ ಅವರ ಸೇವಾ ಹಿರಿತನ ಪರಿಗಣಿಸದೇ ಲೆ|ಜ| ಏ.ಎಸ್.ವೈದ್ಯ ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ನೇಮಿಸಿದ್ದರು. ಅದನ್ನು ಪ್ರತಿಭಟಿಸಿ ಲೆ|ಜ| ಎಸ್.ಕೆ ಸಿನ್ಹಾ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದರು.

1972ರಲ್ಲಿ ಇಂದಿರಾ ಗಾಂಧಿಯವರಿಂದಾಗಿ ವಿಶ್ವಯುದ್ಧ-2ರಲ್ಲಿ ವಿಕ್ಟೋರಿಯಾ ಕ್ರಾಸ್ ಗೌರವಕ್ಕೆ ಪಾತ್ರರಾಗಿದ್ದ ಲೆ|ಜ| ಪಿ.ಎಸ್.ಭಗತ್ ಅವರಿಗೆ ಭೂಸೇನಾ ಮುಖ್ಯಸ್ಥ ಹುದ್ದೆ ಕೈತಪ್ಪಿತ್ತು. ಲೆ|ಜ| ಜಿ.ಜಿ. ಬೇವೂರ್ ಅವರ ಸೇವೆಯನ್ನು ಒಂದು ವರ್ಷ ವಿಸ್ತರಿಸುವ ಮೂಲಕ, ಜ| ಸ್ಯಾಮ್ ಮಾಣೆಕ್ ಶಾ (ಫೀಲ್ಡ್ ಮಾರ್ಶಲ್) ಬಳಿಕ ಅವರು ಸೇನೆಯ ಸಾರಥ್ಯ ವಹಿಸಿದರು. ಸೇವಾ ಹಿರಿತನದ ಆಧಾರದಲ್ಲಿ ಮುಖ್ಯಸ್ಥರಾಗಬೇಕಾಗಿದ್ದ ಲೆ|ಜ| ಪಿ.ಎಸ್.ಭಗತ್  ಅದೇ ವರ್ಷ ನಿವೃತ್ತರಾದುದರಿಂದ ಮುಖ್ಯಸ್ಥನ ಹುದ್ದೆ ಅವರ ಕೈತಪ್ಪಿದಂತಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

8 ತಿಂಗಳಲ್ಲೇ ದೇವನಹಳ್ಳಿ ಪ್ಲ್ಯಾಂಟ್‌ನಲ್ಲಿ 30 ಸಾವಿರ ಉದ್ಯೋಗಿಗಳ ನೇಮಿಸಿಕೊಂಡ ಫಾಕ್ಸ್‌ಕಾನ್‌!
ರಷ್ಯಾದಲ್ಲಿ ಬೀದಿ ಗುಡಿಸುವ ಭಾರತೀಯ ಟೆಕ್ಕಿ: ಈ ಕೆಲಸಕ್ಕೆ ನೇಮಕಗೊಂಡ ಭಾರತೀಯ ಕಾರ್ಮಿಕರ ವೇತನ ಎಷ್ಟು ಗೊತ್ತಾ?