‘ಎದೆ ಸೀಳಿದ್ರೆ ಮೂರಕ್ಷರ ಇಲ್ಲ ಆದರೆ ಎದೆ ಮೇಲೆ ಜಾತಿ ಹೆಸರು!’

By Web DeskFirst Published Sep 27, 2018, 7:25 PM IST
Highlights

ಭಾರತದಲ್ಲಿ ಜಾತಿ ರಾಜಕಾರಣ ಹೊಸದೇನೂ ಅಲ್ಲ. ಇದರಿಂದ ಯಾವ ರಾಜಕೀಯ ಪಕ್ಷಗಳು ಹೊರತಾಗಿಲ್ಲ. ಆದರೆ ಇದೀಗ ಪಾಟ್ನಾದಲ್ಲಿ  ಕಾಂಗ್ರೆಸ್  ಬೆಂಬಲಿಗರು ಹಾಕಿರುವ ಬ್ಯಾನರ್ ಒಂದು ಸಖತ್ ಸದ್ದು ಮಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಬೆಂಗಳೂರು[ಸೆ.27]  ಜಾತಿ ರಾಜಕಾರಣದ ವಿಚಾರದಲ್ಲಿ ಹೊರಬರುವ ಹೇಳಿಕೆಗಳು, ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರವಾಗುವ ಸುದ್ದಿಗಳಿಗೂ ಸಂಬಂಧವೇ ಇರುವುದಿಲ್ಲ. ಅಂಥದ್ದೇ ಒಂದು ಸುದ್ದಿ ಇಲ್ಲಿದೆ.

 ಬಿಹಾರದಲ್ಲಿ ಕಾಂಗ್ರೆಸ್ ಪಕ್ಷ ಹಾಕಿದ್ದ ಬ್ಯಾನರ್ ಈ ಸುದ್ದಿಯ ಕೇಂದ್ರ ಬಿಂದು. ರಾಹುಲ್ ಗಾಂಧಿ ಅವರ ಫೋಟೋದ ಮುಂದೆ ಬ್ರಾಹ್ಮಣ ಸಮುದಾಯದ ಪ್ರತಿನಿಧಿ ಎಂದು ಈ ಬ್ಯಾನರ್ ನಲ್ಲಿ ಉಲ್ಲೇಖ ಮಾಡಲಾಗಿದೆ.

ಇದನ್ನೇ ಇಟ್ಟುಕೊಂಡು ಟ್ವೀಟ್ ಮಾಡಿರುವ ಬಿಜೆಪಿ ವಕ್ತಾರೆ ಮಾಳವಿಕ, ರಾಹುಲ್ ಬ್ರಾಹ್ಮಣರಂತೆ,, ಪ್ರತಿದನವೂ ಸಂಧ್ಯಾವಂದನೆ ಮಾಡುತ್ತಾರೆಯೇ?  ಎಂದು ಪ್ರಶ್ನೆ ಎಸೆದಿದ್ದಾರೆ. ರಮ್ಯಾ ಸಹ ನರೇಂದ್ರ ಮೋದಿ ಅವರನ್ನು ಅವಹೇಳನ ಮಾಡಿದ್ದಕ್ಕೆ ಪ್ರಕರಣ ಎದುರಿಸಬೇಕಾಗಿ ಬಂದಿದೆ.

ಒಟ್ಟಿನಲ್ಲಿ ಫೋಟೋ, ಬ್ಯಾನರ್ ಗಳು ಸಹ ಸುದ್ದಿಯಾಗುವ, ವಿವಾದ ಹುಟ್ಟುಹಾಕುವ ಮಟ್ಟಕ್ಕೆ ಬೆಳೆದಿದ್ದನ್ನು ಒಪ್ಪಿಕೊಳ್ಳಲೇಬೇಕು. 

click me!