ರೋಹಿಂಗ್ಯಾ ಮುಸ್ಲಿಮರ ಮಾಹಿತಿ ಕಲೆ ಹಾಕಿ : ರಾಜ್ಯಗಳಿಗೆ ರಾಜನಾಥ್ ಸೂಚನೆ

By Web DeskFirst Published Sep 27, 2018, 6:16 PM IST
Highlights

ಕೇರಳವೂ ಒಳಗೊಂಡಂತೆ ದೇಶದ  ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ರೋಹಿಂಗ್ಯಾ ಮುಸ್ಲಿಮರ ಬಗ್ಗೆ ಮಾಹಿತಿ ಕಲೆ ಹಾಕಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಬೇಕು. 

ಕೊಚ್ಚಿ[ಸೆ.27]: ದೇಶದಲ್ಲಿರುವ ಎಲ್ಲ ರೋಹಿಂಗ್ಯಾ ಮುಸ್ಲಿಮರು ಅಕ್ರಮ ವಲಸೆಗಾರರಾಗಿದ್ದು ಅವರ ಎಲ್ಲ ಚಲನವಲನ ಹಾಗೂ ಖಾಸಗಿ ಮಾಹಿತಿಗಳನ್ನು ಕಲೆಹಾಕಿ ಕೇಂದ್ರಕ್ಕೆ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಸರ್ಕಾರಿ ಕಾರ್ಯಕ್ರಮದ ಪ್ರಯುಕ್ತ ಕೇರಳಕ್ಕೆ ಆಗಮಿಸಿದ್ದ ಗೃಹ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿ,ಕೇರಳವೂ ಒಳಗೊಂಡಂತೆ ದೇಶದ  ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ರೋಹಿಂಗ್ಯಾ ಮುಸ್ಲಿಮರ ಬಗ್ಗೆ ಮಾಹಿತಿ ಕಲೆ ಹಾಕಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಬೇಕು. ಎಲ್ಲ ಅಕ್ರಮ ವಲಸೆಗಾರರನ್ನು ಮಯನ್ಮಾರ್ ಗೆ ಗಡಿಪಾರು ಮಾಡಲಾಗುವುದು. ವಿರೋಧ ಪಕ್ಷ ಈ ವಿಷಯದ ಬಗ್ಗೆ ರಾಜಕೀಯ ಮಾಡುತ್ತಿದ್ದು, ಅವರ್ಯಾರು ನಿರಾಶ್ರಿತರಲ್ಲ ಎಂದು ತಿಳಿಸಿದ್ದಾರೆ.

ತಾವು ಎಲ್ಲ ರಾಜಕೀಯ ಪಕ್ಷಗಳಿಗೂ ಕೇಳಿಕೊಳ್ಳುವುದೇನೆಂದರೆ  ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಇದೊಂದು ಗಂಭೀರ ವಿಷಯವಾಗಿದ್ದು, ಇದನ್ನು ರಾಜಕೀಯ ವಿಷಯವಾಗಿ ತರಬೇಡಿ. ರೋಹಿಂಗ್ಯಾ ಕೇವಲ ಈಶಾನ್ಯ ರಾಜ್ಯಗಳಲ್ಲಿ ಮಾತ್ರವಿರದೆ ದಕ್ಷಿಣದ ರಾಜ್ಯಗಳಿಗೂ ಆಗಮಿಸಿದ್ದಾರೆ. ಅವರಿಗೆ ಯಾವುದೇ ಕಾರಣಕ್ಕೂ ಭಾರತೀಯ ನಾಗರಿಕರಾಗಲು ಅವಕಾಶ ಮಾಡಿಕೊಡಬಾರದು ಎಂದು ಮನವಿ ಮಾಡಿದರು.

click me!