
ಮುಂಬೈ: ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗಿರುವ ಗಣಿತವನ್ನು 10ನೇ ತರಗತಿಯಲ್ಲಿ ಆಯ್ಕೆಯ (ಆಪ್ಷನಲ್) ವಿಷಯವನ್ನಾಗಿ ಮಾಡುವ ಕುರಿತು ಪರಿಶೀಲಿಸಿ ಎಂದು ಬಾಂಬೆ ಹೈಕೋರ್ಟ್, ರಾಜ್ಯದ ಶಿಕ್ಷಣ ಮಂಡಳಿಗೆ ಸಲಹೆ ನೀಡಿದೆ.
ಶಾಲೆ ಮಟ್ಟದಲ್ಲಿ ಕಲಿಕಾ ನ್ಯೂನತೆ ಇರುವ ವಿದ್ಯಾರ್ಥಿಗಳಿಗೆ ನೆರವಾಗುವ ದೃಷ್ಟಿಯಿಂದ ಖ್ಯಾತ ಮನೋವೈದ್ಯ ಹರೀಶ್ ಶೆಟ್ಟಿ ಎನ್ನುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಈ ಸಲಹೆ ನೀಡಿದೆ.
ಕಲಾ ವಿಭಾಗದಲ್ಲಿ ಪದವಿ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಗಣಿತ ವಿಷಯದ ಅಗತ್ಯತೆ ಇಲ್ಲ. ಜೊತೆಗೆ ಇತರೆ ವೃತ್ತಿಪರ ತರಗತಿಗಳಿಗೂ ಗಣಿತದ ಅವಶ್ಯಕತೆ ಇರುವುದಿಲ್ಲ. ಹೀಗಾಗಿ ಒಂದು ವೇಳೆ ಗಣಿತವನ್ನು ಆಯ್ಕೆಯ ವಿಷಯವನ್ನಾಗಿ ಮಾಡಿದರೆ ಅವರು ಡಿಗ್ರಿಯನ್ನು ಪೂರ್ಣಗೊಳಿಸಲು ನೆರವಾಗುತ್ತದೆ. ಗಣಿತದ ವಿಷಯದಲ್ಲಿ ತೇರ್ಗಡೆಯಾಗಲು ಸಾಧ್ಯವಾಗದೇ ಇತರ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳೂ 10ನೇ ತರಗತಿಗೇ ಓದಿನಿಂದ ಹಿಂದೆ ಸರಿಯುತ್ತಿದ್ದಾರೆ ಎಂದು ಹೈಕೋರ್ಟ್ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.