
ಬೆಂಗಳೂರು(ಸೆ.13): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ತೀವ್ರಗೊಂಡಿದೆ. ವಿವಿಧ ಆಯಾಮಗಳಿಂದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ಹಂತಕರ ಬಗ್ಗೆ ಸ್ಪೋಟಕ ಮಾಹಿತಿಯೊಂದನ್ನ ಕಲೆ ಹಾಕಿದ್ದಾರೆ.
ಸೆಪ್ಟೆಂಬರ್ ಐದರಂದು ಗೌರಿ ಲಂಕೇಶ್ ಮೇಲೆ ಗುಂಡು ಹಾರಿಸಿದ್ದ ಹಂತಕರ ಬಗ್ಗೆ ತನಿಖಾ ತಂಡಕ್ಕೆ ಮಹತ್ವದ ಮಾಹಿತಿಯೊಂದು ದೊರೆತಿದೆ. ಕೊಲೆಯಾದ ದಿನವೇ, ಹಂತಕ ಮೂರು ಬಾರಿ ಗೌರಿ ನಿವಾಸಕ್ಕೆ ಬಂದಿದ್ದು ಖಚಿತವಾಗಿದೆ. ಮಧ್ಯಾಹ್ನ, ಮೂರು ಗಂಟೆಗೆ , ಸಂಜೆ ಏಳು ಗಂಟೆ 15 ನಿಮಿಷಕ್ಕೆ ಎರಡು ಬಾರಿ ಆಗಮಿಸುವ ಹಂತಕನೊಬ್ಬ ಅದೇ ದಿನ ರಾತ್ರಿ 8 ಗಂಟೆ ಹತ್ತು ನಿಮಿಷಕ್ಕೆ ಗೌರಿ ಅವರ ಮೇಲೆ ದಾಳಿ ನಡೆಸಿ ಮತ್ತೊಬ್ಬನ ಜೊತೆ ಪರಾರಿಗುತ್ತಾನೆ. ಈ ಮೂಲಕ ಹಂತಕ ಹೊಂಚು ಹಾಕಿ, ಗೌರಿ ಮೇಲೆ ದಾಳಿ ನಡೆಸಿರುವುದು ಎಸ್ಐಟಿ ತನಿಖೆಯಲ್ಲಿ ಬಯಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.