
ತುಮಕೂರು: ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಪರೀಕ್ಷಣೆಯನ್ನು ಕೈಗೆತ್ತಿಕೊಂಡಿತ್ತು. ಇದರ ನಡುವೆಯೇ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ದಾರರಿಗೆ ಶಾಕ್ ಕೊಟ್ಟಿದೆ. ಇದರಂತೆ ಬರೋಬ್ಬರಿ 14 ಸಾವಿರ ಕಾರ್ಡ್‌ಗಳಿಗೆ ಸರ್ಕಾರ ಕೋಕ್ ಕೊಟ್ಟಿದೆ.
ತುಮಕೂರು ಜಿಲ್ಲೆಯೊಂದರಲ್ಲೇ ಮೇಜರ್ ಸರ್ಜರಿ ನಡೆದಿದ್ದು, 14 ಸಾವಿರ ಬಿಪಿಎಲ್ ಕಾರ್ಡ್ ಗಳನ್ನು ಆಹಾರ ಇಲಾಖೆ ಎಪಿಎಲ್ ಕಾರ್ಡ್‌ಗೆ ಕನ್ವರ್ಟ್ ಮಾಡಿದೆ. ಗ್ಯಾರಂಟಿ ಹೊರೆ ತಗ್ಗಿಸಲು ಸರ್ಕಾರದಿಂದ ಮೇಜರ್ ಸರ್ಜರಿಗೆ ಮುಂದಾಗಿದ್ದು, ಐಟಿ ರಿಟರ್ನ್ ಸಲ್ಲಿಸಿರುವ, ಕಾರು ಹೊಂದಿರುವ ಕುಟುಂಬಗಳ ಬಿಪಿಎಲ್ ಕಾರ್ಡ್ ಗಳನ್ನು ಅಪ್‌ಗ್ರೇಡ್ ಮಾಡಲಾಗಿದೆ.
ತುಮಕೂರು ಜಿಲ್ಲೆಯಲ್ಲಿ 6 ಲಕ್ಷ ಪಡಿತರ ಚೀಟಿದಾರರು ಇದ್ದು, ಈ ಪೈಕಿ 14 ಸಾವಿರ ಬಿಪಿಎಲ್ ಕಾರ್ಡ್‌ದಾರರನ್ನು ಹೊರಗೆ ಕಳುಹಿಸಲಾಗಿದೆ. ಬಡತನ ರೇಖೆಗಿಂತ ಹೆಚ್ಚಿನ ಆದಾಯ ಹೊಂದಿದ್ದ ನಕಲಿ ಕಾರ್ಡ್‌ದಾರರನ್ನು ಪತ್ತೆ ಮಾಡಿರುವ ಆಹಾರ ಇಲಾಖೆ, ಕೇಂದ್ರ ಆದಾಯ ತೆರಿಗೆ ಇಲಾಖೆಯಿಂದ ಲಭ್ಯವಾದ ಮಾಹಿತಿ ಆಧಾರದ ಮೇಲೆ ಕಾರ್ಡ್ ಗಳ ವಜಾ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ನ್ಯೂಸ್18 ಕನ್ನಡದೊಂದಿಗೆ ಮಾತನಾಡಿರುವ ಆಹಾರ ಇಲಾಖೆ ಡಿಡಿ ಅರುಣ್ ಕುಮಾರ್ ಸಂಗಾವಿ, ಈಗ ನಮ್ಮ ಪ್ರಸ್ತುತ ಈ ಆಗಸ್ಟ್ ತಿಂಗಳಿನಲ್ಲಿ ನಮ್ಮ ಜಿಲ್ಲೆಯಲ್ಲಿ ಒಟ್ಟು 6 ಲಕ್ಷದ 40 ಸಾವಿರ ಪಡಿತರ ಚೀಟಿಗಳು ಇದೆ. ಈಗಾಗಲೇ ನಾವು ಹೇಳಿದಂತೆ, ಆಯುಕ್ತರ ಕಚೇರಿಯಿಂದ ನಮಗೆ 32 ಸಾವಿರ ಕಾರ್ಡ್‌ಗಳ ಪಟ್ಟು ಬಂದಿತ್ತು. ಅವುಗಳನ್ನು ಪರಿಶೀಲನೆ ನಡೆಸಿ ಸಂದರ್ಭದಲ್ಲಿ ನಮಗೆ ಸುಮಾರು 14 ಸಾವಿರ ಕಾರ್ಡ್ ಗಳು ಅನರ್ಹ ಎಂದು ಕಂಡು ಬಂದಿದೆ. ಆದ್ದರಿಂದ ನಾವು ಅವುಗಳನ್ನು ಕನ್ವರ್ಟ್ ಮಾಡಿದ್ದೇವೆ. ಈ 14 ಸಾವಿರ ಕಾರ್ಡ್‌ದಾರರಲ್ಲಿ ನಾವು ಯಾರಾದರೂ ಬಿಪಿಎಲ್ ಕಾರ್ಡ್‌ಗಳಿಗೆ ಅರ್ಹರಿದ್ದೇವೆ ಎಂದು ಹೇಳಿದರೆ ಅವುಗಳ ಮರುಪರಿಶೀಲನೆಗೂ ಅವಕಾಶ ಇದೆ.
ಮತ್ತೆ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಏನು ಮಾಡಬೇಕು?
ಅರ್ಹರು ಅಗತ್ಯ ದಾಖಲೆಗಳೊಂದಿಗೆ ತಹಶೀಲ್ದಾರ್ ಕಚೇರಿಗೆ ಮನವಿಯನ್ನು ಸಲ್ಲಿಕೆ ಮಾಡಬಹುದು. ಅಂತಹ ಅರ್ಜಿಗಳನ್ನು ಸ್ವೀಕಾರ ಮಾಡಿ ನಮ್ ಆಹಾರ ನಿರೀಕ್ಷಕರು, ತಹಶೀಲ್ದಾರ್ ಅವರು ಸ್ಥಳ ಪರಿಶೀಲನೆ ನಡೆಸಿ ನಮಗೆ ವರದಿಯನ್ನು ನೀಡುತ್ತಾರೆ. ಅಂತಹ ಅರ್ಹತೆಗಳು ಕಂಡು ಬಂದರೆ ಮತ್ತೆ ಕಾರ್ಡ್‌ಗಳನ್ನ ಮರುಸ್ಥಾಪನೆ ಮಾಡುವ ಅವಕಾಶವಿದೆ ಎಂದು ವಿವರಿಸಿದ್ದಾರೆ.
ಕೆಲವರು ಇನ್ಕಮ್ ಟ್ಯಾಕ್ಸ್ ಪೇ ಮಾಡಿರುತ್ತಾರೆ. ಅವರು ಆದಾಯ ತೆರಿಗೆ ಪಾವತಿ ಮಾಡಿರುವವರ ಮಾಹಿತಿಯನ್ನು ಆಯುಕ್ತರು ನಮಗೆ ನೀಡ್ತಾರೆ. ಸ್ವತಃ ನಾಲ್ಕು ಚಕ್ರದ ವಾಹನ ಹೊಂದಿದ್ದರೆ. ಜೊತೆಗೆ ಯಾರಾದರೂ ಏಳೂವರೆ ಎಕರೆಗಿಂತ ಹೆಚ್ಚಿನ ಜಮೀನು ಹೊಂದಿದ್ದರೆ, ಇಂತಹ ಅವರನ್ನು ಪಟ್ಟಿಯಲ್ಲಿ ಗುರುತಿಸಿ ಅವರ ಕಾರ್ಡ್‌ಗಳನ್ನು ನಾವು ಕನ್ವರ್ಟ್ ಮಾಡಿದ್ದೇವೆ ಎಂದು ಆಹಾರ ಇಲಾಖೆ ಡಿಡಿ ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.