
ಚೆನ್ನೈ (ಏ. 09): ಚೆನ್ನೈನ ಅಣ್ಣಾ ಸಲೈಯಲ್ಲಿ ಭೂಮಿಯು ಏಕಾಏಕಿ ಬಿರುಕು ಬಿಟ್ಟಿದ್ದು, ಒಂದು ಬಸ್ ಹಾಗೂ ಕಾರ್ ಅದರೊಳಗೆ ಬಿದ್ದಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಚೆನ್ನೈ ಮೆಟ್ರೋ ರೈಲಿನ ಮಾರ್ಗಕ್ಕಾಗಿ ಸುರಂಗ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಸುಮಾರು 1.30 ಗಂಟೆ ಹೊತ್ತಿನಲ್ಲಿ ಥೌಸಂಡ್ ಲೈಟ್ಸ್ ಮಸೀದಿ ಬಳಿ ಭೂಮಿಯು ಬಿರುಕು ಬಿಟ್ಟಿದೆ. ಬಸ್ಸಿನಲ್ಲಿದ್ದ 35 ಪ್ರಯಾಣಿಕರನ್ನು ಕೂಡಲೇ ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರು ಹಾಗೂ ಬಸ್ಸನ್ನು ಕ್ರೇನ್ ಸಹಾಯದಿಂದ ಮೇಲೆತ್ತಿದ್ದಾರೆ.
ಬಹಳ ದಿವಸಗಳಿಂದ ಪ್ರದೇಶದಲ್ಲಿ ಮೆಟ್ರೋ ರೈಲಿಗಾಗಿ ಸುರಂಗ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಒಂದು ವಾರದ ಮುಂಚೆ ಅಲ್ಲೇ ಪಕ್ಕದಲ್ಲಿ ನೊರೆ ಸೋರಿಕೆಯುಂಟಾಗಿತ್ತು ಎಂದು ಹೇಳಲಾಗಿದೆ.
(ಚಿತ್ರಕೃಪೆ: ಏಐಆರ್)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.