ಯಡ್ಯೂರಪ್ಪ ಸರಕಾರಕ್ಕೂ 8 ತಿಂಗಳೇ ಆಯಸ್ಸು: ಜ್ಯೋತಿಷಿ ಭವಿಷ್ಯ

By Web Desk  |  First Published Jul 24, 2019, 11:48 AM IST

ರಾಜ್ಯದಲ್ಲಿ ನಡೆದ ಬೃಹತ್ ನಾಟಕ ಒಂದು ಕೊನೆಯಾಗಿದೆ. ವಿಶ್ವಾಸಮತದಲ್ಲಿ ದೋಸ್ತಿ ಪಡೆ ವಿಶ್ವಾಸ ಕಳೆದುಕೊಂಡು ಬಿಜೆಪಿ ಸರ್ಕಾರ ರಚಿಸಲು ಸಿದ್ಧವಾಗಿದೆ. ಇದೇ ವೇಳೆ ಭವಿಷ್ಯವೊಂದು ಬಿಜೆಪಿ ಮನದಲ್ಲಿ ಆತಂಕ ತಂದಿದೆ. ಅಷ್ಟಕ್ಕೂ ಜ್ಯೋತಿಷಿ ಹೇಳಿದ್ದೇನು?


ಬೆಂಗಳೂರು [ಜು.24] : ರಾಜ್ಯದಲ್ಲಿ 18 ದಿನಗಳ ಕಾಲ ನಡೆದ ನಡೆದ ಹೈ ಡ್ರಾಮಾ ಕೊನೆಗೊಂಡು, ಬಿಜೆಪಿ ವಿಶ್ವಾಸಮತದಲ್ಲಿ ಗೆಲುವು ಸಾಧಿಸಿ ಸರ್ಕಾರ ರಚನೆಯ ಉತ್ಸಾಹದಲ್ಲಿದೆ. ಆದರೆ ಇದೇ ವೇಳೆ ಭವಿಷ್ಯವೊಂದು ಬಿಜೆಪಿ ನಾಯಕರಿಗೆ ಆತಂಕ ಉಂಟು ಮಾಡುವಂತಿದೆ. 

ನೂತನ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದರೂ ಕೇವಲ 8 ತಿಂಗಳೇ ಆಯಸ್ಸೆಂದು ಶ್ರೀಕ್ಷೇತ್ರ ಮೈಲಾರದ ಕಾರಣೀಕ ಭವಿಷ್ಯ ಹೇಳಿದೆ. ಸಾಮಾನ್ಯವಾಗಿ ಈ ಭವಿಷ್ಯವನ್ನು ರಾಜಕಾರಣಿಗಳು ನಂಬುತ್ತಾರೆ. ಆದ್ದರಿಂದ ಬಿಜೆಪಿ ಮನದಲ್ಲಿ ಇದು ಆತಂಕ ಹುಟ್ಟು ಹಾಕಿರುವುದು ಸುಳ್ಳಲ್ಲ. ಬಹುತೇಕ ರಾಜಕಾರಣಿಗಳು ಪ್ರತಿ ಹೆಜ್ಜೆ ಇಡುವಾಗಲೂ ಈಗೀಗ ಜ್ಯೋತಿಷಿಗಳ ಪರ್ಮಿಷನ್ ಕೇಳುವುದು ಕಾಮನ್ ಆಗುತ್ತಿರುವ ಈ ಸಂದರ್ಭದಲ್ಲಿ ಸರಕಾರ ರಚನೆಯಾಗುವ ಮುನ್ನವೇ ಬಿಜೆಪಿಗೆ ಗೊರವಯ್ಯನ ಜ್ಯೋತಿಷ್ಯ ಆತಂಕ ತಂದಿದೆ. 

Tap to resize

Latest Videos

ಕಳೆದ ಫೆ. 22 ರಂದು ಶ್ರೀ ಕ್ಷೇತ್ರ ಮೈಲಾರದ ಧರ್ಮಾಧಿಕಾರಿ ರಾಮಣ್ಣ ಗೊರವಯ್ಯ ಕಾರಣೀಕ ನುಡಿದಿದ್ದರು. ಕಾರಣೀಕದ ಸತ್ವ ಒಂದು ವರ್ಷದವರೆಗೂ ಇರಲಿದ್ದು, ಮುಂದಿನ ಕಾರಣೀಕ ನುಡಿಯುವವರೆಗೂ ಅನ್ವಯವಾಗುತ್ತದೆ. 

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

'ಕಬ್ಬಿಣದ ಸರಪಳಿಯ ಕೊಂಡಿಯನ್ನ ಪ್ರೀತಿಯಿಂದ ಬೆಸೆಯಬೇಕು. ಇಲ್ಲವಾದಲ್ಲಿ 8 ತಿಂಗಳ ಒಳಗೇ ಮುಂದಿನ ಸರ್ಕಾರಕ್ಕೂ ಕಂಟಕ. ಸಿಎಂ ಆದವರು ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಸರ್ಕಾರ ನಡೆಸಬೇಕು,' ಎಂದು ಗೊರವಯ್ಯ ಕಿವಿ ಮಾತು ಹೇಳಿದ್ದರು. ಅದೀಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಉರುಳುವ ಮೂಲಕ ಸತ್ಯವಾಗಿದೆ. 

ಅದರಂತೆ ಶ್ರೀ ಕ್ಷೇತ್ರ ಮೈಲಾರದ ಕಾರಣಿಕ ಮತ್ತೆ ಸತ್ಯವಾದರೆ, ನೂತನ ಸರ್ಕಾರಕ್ಕೂ ಕಂಟಕ ಎದುರಾಗುತ್ತಾ ಎಂಬ ಆತಂಕ ಕಾಡಿದೆ. 

click me!