
ಮುಂಬೈ, [ಅ.24]: ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭಾ ಚುನಾವಣೆಯ ರಿಸಲ್ಟ್ ಹೊರಬಿದ್ದಿದ್ದು, ಮಹಾರಾಷ್ಟ್ರದಲ್ಲಿ ನಿರೀಕ್ಷೆಯಂತೆ ಶಿವಸೇನೆ ಜತೆ ಸೇರಿಕೊಂಡು ದೊಡ್ಡ ಪಕ್ಷವಾಗಿ ಹೊರಮ್ಮಿದೆ. ಆದ್ರೆ, ಮೈತ್ರಿ ಮಾಡಿಕೊಂಡಿದ್ದ ಶಿವಸೇನಾ ಹಾಗೂ ಬಿಜೆಪಿ ನಡುವೆ ಸಿಎಂ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದೆ.
ಮತ್ತೊಂದೆಡೆ ಬಿಜೆಪಿ ನಾಯಕಿ ಹಾಗೂ ಸಿಎಂ ದೇವೇಂದ್ರ ಫಡ್ನಾವೀಸ್ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ಸಚಿವರಾಗಿದ್ದ ಪಂಕಜ ಮುಂಡೆ ಅವರು ಸೋಲುಕಂಡಿದ್ದಾರೆ.
ಶಿವಸೇನೆ'ಮಹಾ'ಬೇಡಿಕೆ: ಸಾಧ್ಯನಾ ಆದಿತ್ಯ ಠಾಕ್ರೆ ಸಿಎಂ ಆಗೋಕೆ?
ಇಂದು [ಗುರುವಾರ] ಹೊರಬಿದ್ದ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಪಂಕಜ್ ಮುಂಡೆ ಹೀನಾಯ ಸೋಲನ್ನು ಅನುಭವಿಸಿದ್ದಾರೆ. ವಿಪರ್ಯಾಸವೆಂದರೆ, ಪರ್ಲಿ ಕ್ಷೇತ್ರದಿಂದ ಎನ್ಸಿಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸೋದರ ಸಂಬಂಧಿ ಧನಂಜಯ್ ಮುಂಡೆ ಎದುರು ಬರೋಬ್ಬರಿ 30,000 ಮತಗಳ ಅಂತರದಿಂದ ಪಂಕಜ್ ಮುಂಡೆ ಮಂಡಿಯೂರಿದ್ದಾರೆ. ಈ ಸೋಲನ್ನು ಸಹಿಸಿಕೊಳ್ಳಲಾಗದೇ ಪಂಕಜ್ ಮುಂಡೆ ಅವರು ಬಿಕ್ಕಿ ಬಿಕ್ಕಿ ಅತ್ತರ.
ಚುನಾವಣೆಯಲ್ಲಿ BJP ಮಂದಹಾಸ; ಬಾಂಗ್ಲಾ ಸರಣಿಗೆ ತಂಡ ಪ್ರಕಟ; ಅ.24ರ ಟಾಪ್ 10 ಸುದ್ದಿ!
ಸೋಲಿನ ಬಗ್ಗೆ ಪ್ರಿತಿಕ್ರಿಯಿಸಿದ ಪಂಕಜ ಮುಂಡೆ, ನನ್ನ ಅವಧಿಯಲ್ಲಿ ಕ್ಷೇತ್ರಕ್ಕಾಗಿ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ನನ್ನ ಸೋಲಿಗೆ ನಾನೇ ಹೊಣೆಯಾಗಿದ್ದು, ನನ್ನ ಕ್ಷೇತ್ರ ಹಾಗೂ ಜನರಿಗಾಗಿ ನನ್ನ ಹೋರಾಟ ಹೀಗೆ ಮುಂದುವರಿಯಲಿದೆ ಎಂದು ಹೇಳಿದರು.
ಬಿಎಸ್‌ವೈ ನೀರು ಕೊಡ್ತಿನಿ ಎಂದಿದ್ದ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು!
ಇನ್ನು ಮಹಾರಾಷ್ಟ್ರದ ಸದ್ಯ ಫಲಿತಾಂಶದ ನೋಡುವುದಾದರೇ 288 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 103 ಹಾಗೂ ಶಿವಸೇನಾ 56 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ 46, ಎನ್ಸಿಪಿ 54 ಹಾಗೂ ಇತರೆ 30 ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.
ಬಹುತೇಕ ಶಿವಸೇನೆ ಹಾಗೂ ಬಿಜೆಪಿ ಸೇರಿಕೊಮಡು ಸರ್ಕಾರ ರಚನೆ ಮಾಡುವುದು ಖಚಿತವಾಗಿದೆ. ಈ ಬಗ್ಗೆ ಇನ್ನೇನು ಕೆಲವೇ ನಿಮಿಷಗಳಲ್ಲಿ ರಿಸಲ್ಟ್ ಕ್ಲಿಯರ್ ಆಗಿ ತಿಳಿಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.