
ನವದೆಹಲಿ(ಫೆ.07): ಮಹದಾಯಿ ನದಿ ನೀರು ಹಂಚಿಕೆಯ ಬಗೆಗಿನ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರಗಳ ತಕರಾರಿನ ಬಗ್ಗೆ ಅಂತಿಮ ವಿಚಾರಣೆ ಫೆ.8ರಿಂದ ನಡೆಸುವುದಾಗಿ ಮಹದಾಯಿ ನದಿ ನೀರು ನ್ಯಾಯಾಧಿಕರಣ ಹೇಳಿದೆ.
ಮಂಗಳವಾರ ನ್ಯಾಯಾಧಿಕರಣವು ಫೆ.8ರಿಂದ 22ರವರೆಗೆ ಅಂತಿಮ ವಿಚಾರಣೆ ನಡೆಸುವುದಾಗಿ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಆದರೆ ಪ್ರಕರಣದಲ್ಲಿನ ಭಾಗಿದಾರ ರಾಜ್ಯಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು ವಿವರವಾದ ವಾದ ಮಂಡನೆಗೆ ಇನ್ನಷ್ಟು ಸಮಯ ಬೇಕು ಎಂದು ಎಂದು ಪ್ರತಿಪಾದಿಸಿವೆ. ಆದರೆ ನಾವು ಆ.20ರೊಳಗೆ ತೀರ್ಪು ನೀಡಬೇಕಿದೆ. ಈ ತೀರ್ಪಿಗೆ ಸೂಕ್ತ ಕಾರಣಗಳು, ಆಧಾರಗಳನ್ನು ನೀಡಬೇಕಿದ್ದು ಹೆಚ್ಚುವರಿ ಸಮಯ ನೀಡಲು ಸಾಧ್ಯವಿಲ್ಲ ಎಂದು ನ್ಯಾ.ಜೆ.ಎಂ.ಪಾಂಚಾಳ್ ನೇತೃತ್ವದ ನ್ಯಾಯಾಧಿಕರಣ ಸ್ಪಷ್ಟಪಡಿಸಿದೆ.
ಈ ಮಧ್ಯೆ ಗೋವಾವು ಕರ್ನಾಟಕದ ವಿರುದ್ಧ ಸಲ್ಲಿಸಿರುವ ನ್ಯಾಯಾಂಗ ನಿಂದನೆ ದೂರಿಗೆ ಕರ್ನಾಟಕ ಪ್ರತಿಕ್ರಿಯೆ ಸಲ್ಲಿಸಿತ್ತು.ಇದಕ್ಕೆ ಸಮಯಾವಕಾಶ ಬೇಕಿದೆ ಎಂದು ಗೋವಾದ ಪರ ವಕೀಲ ಆತ್ಮಾರಾಮ ನಾಡಕರ್ಣಿ ನ್ಯಾಯಾಧಿಕರಣವನ್ನು ಕೋರಿದರು.ಈ ಬಗ್ಗೆ ಫೆ.13ರಂದು ವಿಚಾರಣೆ ನಡೆಸುವುದಾಗಿ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.