ಪುದುಚೇರಿ ಸರ್ಕಾರದಲ್ಲಿ ಕಿರಣ್‌ ಬೇಡಿ ಹಸ್ತಕ್ಷೇಪ ಸಲ್ಲ: ಹೈಕೋರ್ಟ್‌

Published : May 01, 2019, 10:15 AM IST
ಪುದುಚೇರಿ ಸರ್ಕಾರದಲ್ಲಿ  ಕಿರಣ್‌ ಬೇಡಿ ಹಸ್ತಕ್ಷೇಪ ಸಲ್ಲ: ಹೈಕೋರ್ಟ್‌

ಸಾರಾಂಶ

ಪುದುಚೇರಿ ಸರ್ಕಾರದಲ್ಲಿ ಕಿರಣ್‌ ಬೇಡಿ ಹಸ್ತಕ್ಷೇಪ ಮಾಡಂಗಿಲ್ಲ: ಹೈಕೋರ್ಟ್‌ | ಕಿರಣ್‌ ಬೇಡಿ ತರಾಟೆಗೆ ತೆಗೆದುಕೊಂಡ ಮದ್ರಾಸ್‌ ಹೈಕೋರ್ಟ್‌

ನವದೆಹಲಿ (ಮೇ. 01): ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಅವರ ಜೊತೆ ಅಧಿಕಾರ ಕಲಹದಲ್ಲಿ ತೊಡಗಿರುವ ರಾಜ್ಯಪಾಲೆ ಕಿರಣ್‌ ಬೇಡಿ ಅವರನ್ನು ಮದ್ರಾಸ್‌ ಹೈಕೋರ್ಟ್‌ ತರಾಟೆ ತೆಗೆದುಕೊಂಡಿದೆ.

ಸರ್ಕಾರದ ದೈನಂದಿನ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುವ ಅಥವಾ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ ಎಂದು ಸ್ಪಷ್ಟನೆ ನೀಡಿದೆ. ಸಂಪುಟದ ಸದಸ್ಯರು ಇರುವ ಹೊರತಾಗಿಯೂ ಕಿರಣ್‌ ಬೇಡಿ ಅವರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್‌ ಶಾಸಕ ಲಕ್ಷ್ಮೇನಾರಾಯಣ್‌ ಅರ್ಜಿ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರದ ಮಂತ್ರಿಮಂಡಲ ತೆಗೆದುಕೊಂಡ ನಿರ್ಧಾರಕ್ಕೆ ಆಡಳಿತ ವರ್ಗ ಬದ್ಧವಾಗಿರಬೇಕು ಎಂದು ಕೋರ್ಟ್‌ ಹೇಳಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2019ರಲ್ಲಿ 6 ಸಾವಿರಕ್ಕೆ ಕೆಲಸ, ಕೆಪಿಎಸ್ಸಿ ಸದಸ್ಯನಾದ ಬಳಿಕ 100 ಎಕರೆ ಜಮೀನು: ಇದು 'ನುಂಗಪ್ಪ' ಸಾಹುಕಾರ್‌ ಸ್ಟೋರಿ
3700 ಸರ್ಕಾರಿ ಶಾಲೆ, ಕಾಲೇಜಲ್ಲಿ ಸದ್ಯದಲ್ಲೇ ಸ್ಮಾರ್ಟ್‌ ಕ್ಲಾಸ್‌ ಶುರು, ಖಾಸಗಿ ಶಾಲೆಗಳ ಮಾದರಿ ಡಿಜಿಟಲ್‌ ಶಿಕ್ಷಣಕ್ಕೆ ಸರ್ಕಾರ ಸಿದ್ಧತೆ