
ಮಡಿಕೇರಿ(ಜು.30): ಕರ್ನಾಟಕದ ಸುಂದರ ತಾಣ, ಪ್ರಕೃತಿಯ ರಮ್ಯಚೇತನ ಕರ್ನಾಟಕದ ಪ್ರಸಿದ್ಧ ಪ್ರವಾಸಿತಾಣ ಕೊಡಗಿನಲ್ಲಿ ರಾಪ್ಟಿಂಗ್ ಸದ್ದು ಜೋರಾಗಿದೆ. ಮಳೆಗಾಲದ ಹನಿಗಳ ಕಲರವದ ನಡುವೆ ಹಚ್ಚ ಹಸಿರಿನ ಬೆಟ್ಟ ಗುಡ್ಡದಿಂದ ಕುಡಿರುವ ಪ್ರಕೃತಿಯ ಮಡಿಲಲ್ಲಿ ಪ್ರವಾಸಿಗರು ಫುಲ್ ಎಂಜಾಯ್ ಮಾಡುತ್ತಿದ್ದಾರೆ. ದುಬಾರೆ ಆನೆ ಶಿಬಿರದಲ್ಲೀಗ ಹೊಸ ಲೋಕವೇ ಅನಾವರಣವಾಗಿದೆ.
ಮಳೆಗಾಲ ಶುರುವಾದ್ರೆ ದುಬಾರೆಯಲ್ಲಿ ಹೂಸದೊಂದು ಜಗತ್ತೇ ತೆರೆದುಕೊಳ್ಳುತ್ತೆ. ಪ್ರವಾಸಿಗರೂ ಹಾಗೇನೆ ತಂಡೋಪ ತಂಡವಾಗಿ ಲಗ್ಗೆಯಿಡುತ್ತಾರೆ. ಆದರೂ ಈ ವೀಕೆಂಡ್'ನಲ್ಲಿ ಜನವೋ ಜನ, ರಾಪ್ಟಿಂಗ್, ಬೋಟಿಂಗ್, ನೀರಿನ ಅಲೆಗಳ ಜೊತೆ ಮಸ್ತಿ ಹೀಗೆ ಎಂಜಾಯ್ ಮಾಡುತ್ತಾರೆ.
ನ್ನು ಕಾವೇರಿ ನದಿಯಲ್ಲಿ ರಾಪ್ಟಿಂಗ್ ಮಾಡೋದು ಸುಲಭದ ಮಾತೇನಲ್ಲ, ನದಿ ಹರಿಯುತ್ತಿರೋ ವೇಗವನ್ನೂಮ್ಮೆ ನೋಡಿದರೆ ಎದೆ ನಡುಗಿಬಿಡುತ್ತೆ. ಇದರ ನಡುವೆಯೂ ದೈರ್ಯಮಾಡಿ ಬೋಟ್ ಏರಿ ಹೊರಟರೆ ಜೀವಮಾನದಲ್ಲಿ ಮರೆಯಾಲಾಗದ ಕ್ಷಣಗಳು ನಿಜಕ್ಕೂ ನಮ್ಮದಾಗುತ್ತದೆ.
ಒಟ್ಟಿನಲಿ ಪ್ರಕೃತಿ ಪ್ರಿಯರಿಗೆ ಇದು ಹೇಳಿ ಮಾಡಿಸಿದ ಜಾಗ. ಕೆಲಸದ ಒತ್ತಡದ ನಡುವೆ ಸ್ವಲ್ಪ ಜಾಲಿ ಮಾಡುವರಿಗೆ ಇದು ನಿಜಕ್ಕೂ ಫೇವರಿಟ್ ಸ್ಫಾಟ್. ಮಳೆಗಾಲ ಮುಗಿಯುವ ಮುನ್ನ ಒಂದು ವೀಕೆಂಡ್'ನಲ್ಲಿ ಒಮ್ಮ ಭೇಟಿ ಕೊಟ್ಟು ನೋಡಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.