ತ್ರಿವಳಿ ತಲಾಖ್'ಅನ್ನು ರದ್ದುಗೊಳಿಸಿದ ಮಧ್ಯ ಪ್ರದೇಶ ಕೋರ್ಟ್

By Suvarna Web DeskFirst Published Apr 23, 2017, 9:32 AM IST
Highlights

ಇಸ್ಲಾಂ ಕಾನೂನು ಹಾಗೂ ನೀತಿ ಸಂಹಿತೆಯ ಪ್ರಕಾರವಾಗಿರುವ ಶರಿಯಾ ಕಾನೂನನ್ನು ಪಾಲಿಸದ ಕಾರಣ ಪತಿ ನೀಡಿರುವ ತ್ರಿವಳಿ ತಲಾಖ್ ಅಸಿಂಧುವಾಗಲಿದ್ದು,ಈ ಕಾರಣದಿಂದ ಕೋರ್ಟ್ ವಿಚ್ಚೇದನವನ್ನು ರದ್ದುಗೊಳಿಸಿದೆ'ಎಂದುಮಹಿಳಾ ಪರ ವಕೀಲರು ತಿಳಿಸಿದ್ದಾರೆ.

ಭೋಪಾಲ್(ಏ.23): ಶರಿಯಾ ಕಾನೂನನ್ನು ಪಾಲಿಸದ ಕಾರಣ ಮಧ್ಯಪ್ರದೇಶದ ಕೌಟುಂಬಿಕ ನ್ಯಾಯಾಲಯ ಯುವಕನೊಬ್ಬ ತನ್ನ ಪತ್ನಿಗೆ ನೀಡಿದ ತ್ರಿವಳಿ ತಲಾಖ್'ಅನ್ನು ರದ್ದುಗೊಳಿಸಿ ವಿಚ್ಚೇದನ ಅನೂರ್ಜಿತವೆಂದು ತಿಳಿಸಿದೆ.

ಇಸ್ಲಾಂ ಕಾನೂನು ಹಾಗೂ ನೀತಿ ಸಂಹಿತೆಯ ಪ್ರಕಾರವಾಗಿರುವ ಶರಿಯಾ ಕಾನೂನನ್ನು ಪಾಲಿಸದ ಕಾರಣ ಪತಿ ನೀಡಿರುವ ತ್ರಿವಳಿ ತಲಾಖ್ ಅಸಿಂಧುವಾಗಲಿದ್ದು,ಈ ಕಾರಣದಿಂದ ಕೋರ್ಟ್ ವಿಚ್ಚೇದನವನ್ನು ರದ್ದುಗೊಳಿಸಿದೆ'ಎಂದು  ಮಹಿಳಾ ಪರ ವಕೀಲರು ತಿಳಿಸಿದ್ದಾರೆ.

ಬೇಸಿಗೆ ರಜೆಯ ನಂತರ ಮುಂದಿನ ತಿಂಗಳು ನಡೆಯುವ ಈ ವಿಚಾರಣೆಯ ಅಂತಿಮ ತೀರ್ಪನ್ನು ಪ್ರಕಟಿಸಲಿದೆ. ಕೋರ್ಟ್'ನ ಈ ಆದೇಶದಿಂದ ಮುಸ್ಲಿಂ ಸಮುದಾಯದಲ್ಲಿ ತ್ರಿವಳಿ ತಲಾಖ್ ಹಾಗೂ ಬಹುಪತ್ನಿತ್ವದ ಬಗ್ಗೆ ಚರ್ಚೆ ಶುರುವಾಗುವ ಸಾಧ್ಯತೆಯಿದೆ.

ಉಜ್ಜನಿಯ ಬೇಗಂಭಾಗ್ ನಿವಾಸಿಯಾದ ಅರ್ಶಿ 2013 ಜನವರಿಯಲ್ಲಿ ತುಷಾಫ್ ಶೇಖ್ ಎಂಬುವವರನ್ನು ವಿವಾಹವಾಗಿದ್ದರು, ಮದುವೆಯಾದ ಕೆಲವು ದಿನಗಳಲ್ಲೇ ಪತ್ನಿ ಹಾಗೂ ಆಕೆಯ ಪೋಷಕರಿಗೆ ಹೆಚ್ಚಿನ ಹಣಕ್ಕೆ ಬೇಡಿಕೆ ನೀಡಿ ದೈಹಿಕವಾಗಿ ಅರ್ಶಿಯನ್ನು ಹಿಂಸಿಸುತ್ತಿದ್ದರು. ಅಕ್ಟೋಬರ್ 9, 2014 ರಂದು ಶೇಖ್ ಕೆಲವು ಮಂದಿಯ ಉಪಸ್ಥಿತಿಯಲ್ಲಿ ಅರ್ಶಿಯವರಿಗೆ ತಲಾಖ್ ಹೇಳಿದ್ದರು. ಈ ಆದೇಶವನ್ನು ತಿರಸ್ಕರಿಸಿ ಅರ್ಶಿ ಕೌಟುಂಬಿಕ ಕೋರ್ಟ್ ಮೋರೆ ಹೋಗಿದ್ದರು.

ಶೇಖ್ ತಲಾಖ್ ಹೇಳುವ ಮುನ್ನ ಶರಿಯಾ ಕಾನೂನಿನ ಪ್ರಕಾರ ಪತ್ನಿಗೆ ನೀಡಬೇಕಾದ ಮೆಹರ್'ಅನ್ನು ನೀಡಿರಲಿಲ್ಲ. ಇವೆಲ್ಲ ವಾದವಿವಾದವನ್ನು ವಿಚಾರಣೆಗೊಳಿಸಿದ ಕೋರ್ಟ್ ತಲಾಖ್'ಅನ್ನು ಅನೂರ್ಜಿತ'ಗೊಳಿಸಿದೆ.

click me!