
ಜಲಂಧರ್(ಎ. 23): ಯುವತಿಯೊಬ್ಬಳು ಯುವತಿಯೊಂದಿಗೇ ಮದುವೆಯಾದ ಘಟನೆ ಪಂಜಾಬ್'ನಲ್ಲಿ ನಡೆದಿದೆ. ಅಚ್ಚರಿಪಡಿಸುವ ವಿಚಾರವೆಂದರೆ ಈ ಸಲಿಂಗಿಗಳ ವಿವಾಹ ಎರಡೂ ಕುಟುಂಬಗಳ ಸಮ್ಮತಿಯೊಂದಿಗೆ ನಡೆದಿದೆ. ಈ ಮದುವೆಯಲ್ಲಿ ಗಂಡಾಗಿದ್ದು, ಪಂಜಾಬ್ ಪೊಲೀಸ್'ನಲ್ಲಿ ASI ಆಗಿ ಕಾರ್ಯ ನಿರ್ವಹಿಸುತ್ತಿರುವ ಮಂಜೀತ್ ಎಂಬ ಯುವತಿ. ಅದ್ಧೂರಿಯಾಗಿ ಮದುವೆ ನಡೆಯಿತಾದರೂ ಇವರಿಬ್ಬರ ಪ್ರೇಮದ ವಿಚಾರವಾಗಿ ಪ್ರಶ್ನಿಸಿದವರಿಗೆ ಮಾತ್ರ ಯಾವುದೇ ಉತ್ತರ ಸಿಕ್ಕಿಲ್ಲ.
ದ ಟ್ರಿಬ್ಯೂನ್ ಎಂಬ ವೆಬ್'ಸೈಟ್ ಈ ಸುದ್ದಿಯನ್ನು ಬಿತ್ತರಿಸಿದ್ದು, ಪಂಜಾಬ್'ನಲ್ಲಿ ನಡೆದ ಈ ಅದ್ಧೂರಿ ಮದುವೆಯಲ್ಲಿ ಬಂಧು ಮಿತ್ರರೆಲ್ಲರೂ ಶಾಮೀಲಾಗಿದ್ದರು ಎಂದು ತಿಳಿಸಿದೆ. ಇನ್ನು ಮಂಜೀತ್ ತನ್ನ ಪದವಿ ಮುಗಿಸಿದ ಬಳಿಕ ಪೊಲೀಸ್ ಇಲಾಖೆಗೆ ಸೇರಿದ್ದಳು ಹಾಗೂ ತನ್ನ ಉತ್ತಮ ನಡತೆಯಿಂದ ASI ಹುದ್ದೆಗೆ ಭರ್ತಿ ಪಡೆದಿರುವುದಾಗಿಯೂ ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.