ಗ್ರಹಣದ ಮೂಢನಂಬಿಕೆ ವಿರುದ್ಧ ವಿನೂತನ ಜಾಗೃತಿ

By Web DeskFirst Published Jul 28, 2018, 7:38 AM IST
Highlights

ಗ್ರಹಣದ ಬಗ್ಗೆ ಇರುವ ಮೂಢನಂಬಿಕೆಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕರ್ನಾಟಕ ಸಂಗ್ರಾಮ ಸೇನೆ ಹಾಗೂ ಮಾನವ ಬಂಧುತ್ವ ವೇದಿಕೆ ನೇತೃತ್ವದಲ್ಲಿ  ಊಟ ಸೇವಿಸಲಾಯಿತು. 

ಹುಬ್ಬಳ್ಳಿ : ಖಗ್ರಾಸ ಚಂದ್ರಗ್ರಹಣದ ವೇಳೆ ಸಾಮೂಹಿಕವಾಗಿ ಊಟ ಮಾಡುವ ಮೂಲಕ ಹುಬ್ಬಳ್ಳಿಯಲ್ಲಿ ಮೂಢನಂಬಿಕೆ ವಿರುದ್ಧ ಜಾಗೃತಿ ನಡೆಸಿದರು.

ಹುಬ್ಬಳ್ಳಿಯ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಕರ್ನಾಟಕ ಸಂಗ್ರಾಮ ಸೇನೆ ಹಾಗೂ ಮಾನವ ಬಂಧುತ್ವ ವೇದಿಕೆ ನೇತೃತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸು,  ಗ್ರಹಣದ ವೇಳೆಯೇ ಸಾಮೂಹಿಕ ಊಟ ಮಾಡಿದರು.

ಜೋತಿಷಿಗಳು ಗ್ರಹಣದ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡಿ ಜನರಿಗೆ ಮೋಸ ಮಾಡುತ್ತಾ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಜ್ಯೋತಿಷಿಗಳ ಮಾತು ನಂಬಬೇಡಿ. ಗ್ರಹಣ ಬಗ್ಗೆ ತಪ್ಪು ತಿಳುವಳಿಕೆ ಇಟ್ಟುಕೊಳ್ಳಬೇಡಿ ಎಂದು ಮನವಿ ಮಾಡಿದರು.  ಕನ್ನಡ ಪರ‌ ಸಂಘಟನೆಗಳ ಕಾರ್ಯಕರ್ತರು ೀ ಕಾರ್ಯಕ್ಕೆ ಸಾಥ್ ನೀಡಿದರು.

ಖಡಕ್ ರೊಟ್ಟಿ, ಶೇಂಗಾ ಚಟ್ನಿ, ಜಿಲೇಬಿ, ಶೇಂಗಾ ಹೋಳಿಗೆ, ಅನ್ನ ಸಾಂಬಾರು ಸೇರಿದಂತೆ ಬಗೆ ಬಗೆಯ ತಿನಿಸುಗಳನ್ನು ಮಾಡಿಕೊಂಡು ಬಂದು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಊಟ ಮಾಡಿದರು.

ಸಂಘಟನೆಗಳ ಮುಖಂಡರಾದ ರಮೇಶ ವಡಪಲ್ಲಿ, ರತ್ನಾ ವಡಪಲ್ಲಿ, ಹನುಮಂತಪ್ಪ ಪವಾಡಿ, ಬಸವರಾಜ ಮನ್ನೂರುಮಠ, ಮಾರೇಶ, ಮಂಗಳೇಶ, ಪ್ರಾರ್ಥನಾ ವಡಪಲ್ಲಿ, ಸಂಜೀವ ದುಮಕನಾಳ ಸೇರಿದಂತೆ ಹಲವರು ಈ ವೇಳೆ ಸ್ಥಳದಲ್ಲಿ ಹಾಜರಿದ್ದರು. 

click me!