ಸಂಸ್ಕೃತ ಬಂದರಷ್ಟೇ ಸಂತೆಗೆ ಬನ್ನಿ: ತರಕಾರಿ ಹೆಸರು ತಿಳಿದು ತಿನ್ನಿ!

By Web DeskFirst Published Jun 8, 2019, 6:21 PM IST
Highlights

ಸಂಸ್ಕೃತ ಬಲ್ಲವರಿಗಷ್ಟೇ ಈ ಸಂತೆಗೆ ಪ್ರವೇಶ| ಎಲ್ಲಾ ತರಕಾರಿ ಹೆಸರುಗಳು ಕೇವಲ ಸಂಸ್ಕೃತದಲ್ಲಿ| ಉತ್ತರ ಪ್ರದೇಶ ರಾಜಧಾನಿ ಲಕ್ನೋದಲ್ಲಿರುವ ನಿಶತ್'ಗಂಜ್ ಮಾರುಕಟ್ಟೆ| ಸಂಸ್ಕೃತ ಭಾಷೆಯ ಅಭಿವೃದ್ಧಿಗಾಗಿ ತರಕಾರಿ ಮಾರಾಟಗಾರರಿಂದ ವಿಶಿಷ್ಟ ಪ್ರಯತ್ನ|

ಸಾಂದರ್ಭಿಕ ಚಿತ್ರ

ಲಕ್ನೋ(ಜೂ.08): ಅದು ತರಕಾರಿ ಮಾರುಕಟ್ಟೆ. ಅಲ್ಲಿ ಸಂಸ್ಕೃತದಲ್ಲಿ ಎಲ್ಲಾ ತರಕಾರಿಗಳ ಹೆಸರು ಬರೆಯಲಾಗಿದೆ. ಇಲ್ಲಿ ಎಲ್ಲಾ ವಹಿವಾಟು ಸಂಸ್ಕೃತದಲ್ಲೇ ನಡೆಯುತ್ತದೆ.

ಹೌದು, ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿರುವ ನಿಶತ್'ಗಂಜ್ ತರಕಾರಿ ಮಾರುಕಟ್ಟೆಯಲ್ಲಿ ಎಲ್ಲಾ ತರಕಾರಿ ಹೆಸರುಗಳನ್ನು ಸಂಸ್ಕೃತದಲ್ಲಿ ಬರೆಯಲಾಗಿದೆ.

ಇಲ್ಲಿಗೆ ಬರುವ ಗ್ರಾಹಕರು ಸಂಸ್ಕೃತದಲ್ಲೇ ತರಕಾರಿ ಹೆಸರು ಹೇಳಿ ಕೊಂಡುಕೊಳ್ಳುತ್ತಾರೆ. ಉದಾಹರಣೆಗೆ ಆಲೂಗಡ್ಡೆಗೆ ಆಲೂಕಮ್, ಟೊಮೆಟೋಗೆ ರಕ್ತಫಲಂ, ಹಾಗಲಕಾಯಿಗೆ ಕರ್ವೆಲಾಹ್, ಗಜ್ಜರಿಗೆ ಗುಂಜನಕಮ್ ಹಾಗೂ ಬೆಳ್ಳುಳ್ಳಿಗೆ ಲಶುಮನ್ ಹೀಗೆ ಎಲ್ಲಾ ತರಕಾರಿ ಹೆಸರನ್ನು ಸಂಸ್ಕೃತದಲ್ಲಿ ಬೋರ್ಡ್ ಮೇಲೆ ಬರೆಯಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಮಾರುಕಟ್ಟೆಯ ತರಕಾರಿ ಮಾರಾಟಗಾರ ಸೋನು, ಸಂಸ್ಕೃತ ಭಾಷೆಯನ್ನು ಜನಮಾನಸದಲ್ಲಿ ಜೀವಂತವಾಗಿಡಲು ಮತ್ತು ಭಾಷೆಯ ಬೆಳವಣಿಗೆಗಾಗಿ ತರಕಾರಿ ಹೆಸರುಗಳನ್ನು ಸಂಸ್ಕೃತದಲ್ಲೇ ಬರೆಯಲಾಗಿದೆ ಎನ್ನುತ್ತಾರೆ.
 

click me!