ಯುಪಿಯಲ್ಲಿ ಮಾಂಸ ಬರ..!

By Suvarna Web DeskFirst Published Mar 25, 2017, 5:07 PM IST
Highlights

ಕಸಾಯಿಖಾನೆ ಹಾಗೂ ಮಾಂಸದಂಗಡಿ ಬಂದ್ ಮಾಡುವ ಸರ್ಕಾರ ನಿರ್ಧಾರ ವಿರೋಧಿಸಿ ಎಲ್ಲ ಮಾಂಸ ವ್ಯಾಪಾರಿಗಳು ಇಂದಿನಿಂದ ಅನಿರ್ದಿಷ್ಟಾವಧಿಗೆ ಮುಷ್ಕರಕ್ಕೆ ಕರೆ ನೀಡಿದ್ದರಾದರೂ, ಲಖನೌದಲ್ಲಿ ಶೇ.80ರಷ್ಟು ಅಂಗಡಿಗಳು ಶುಕ್ರವಾರವೇ ಬಂದ್ ಆಗಿವೆ.

ಲಖನೌ(ಮಾ.25): ಲೈಸೆನ್ಸ್ ಇಲ್ಲದ ಕಸಾಯಿ ಖಾನೆಗಳು ಹಾಗೂ ಮಾಂಸದ ಮಳಿಗೆಗಳ ಮೇಲೆ ಸರ್ಕಾರ ಕ್ರಮ ಜರುಗಿಸುತ್ತಿರುವುದನ್ನು ವಿರೋಧಿಸಿ ಉತ್ತರಪ್ರದೇಶದ ಮಾಂಸ ವ್ಯಾಪಾರಿಗಳು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಇದರಿಂದಾಗಿ ಲಖನೌ ಸೇರಿದಂತೆ ರಾಜ್ಯದ ಹಲವಾರು ನಗರಗಳಲ್ಲಿ ಮೇಕೆ, ಕೋಳಿ ಮಾಂಸ ಮಾರಾಟವೂ ಸ್ಥಗಿತಗೊಂಡಿದೆ. ಇದರ ಫಲವಾಗಿ ತರಕಾರಿಗಳ ಬೆಲೆ ಗಗನಕ್ಕೇರುವ ಭೀತಿ ಹುಟ್ಟಿಕೊಂಡಿದೆ.

ಕಸಾಯಿಖಾನೆ ಹಾಗೂ ಮಾಂಸದಂಗಡಿ ಬಂದ್ ಮಾಡುವ ಸರ್ಕಾರ ನಿರ್ಧಾರ ವಿರೋಧಿಸಿ ಎಲ್ಲ ಮಾಂಸ ವ್ಯಾಪಾರಿಗಳು ಇಂದಿನಿಂದ ಅನಿರ್ದಿಷ್ಟಾವಧಿಗೆ ಮುಷ್ಕರಕ್ಕೆ ಕರೆ ನೀಡಿದ್ದರಾದರೂ, ಲಖನೌದಲ್ಲಿ ಶೇ.80ರಷ್ಟು ಅಂಗಡಿಗಳು ಶುಕ್ರವಾರವೇ ಬಂದ್ ಆಗಿವೆ. ಹೀಗಾಗಿ ಲಖನೌದಲ್ಲಿ ಮಾಂಸಾಹಾರ ದುರ್ಲಭವಾಗಿದ್ದು, ಎಲ್ಲರೂ ಸಸ್ಯಾಹಾರಕ್ಕೆ ಒಗ್ಗಿಕೊಳ್ಳುವಂತಾಗಿದೆ. ಮಾಂಸಾಹಾರಿ ಹೋಟೆಲ್‌'ಗಳೂ ಈಗ ಸಸ್ಯಾಹಾರಿಯಾಗಿ ಪರಿವರ್ತಿತವಾಗಿವೆ.

ಈ ಹೋರಾಟಕ್ಕೆ ಅಲಹಾಬಾದ್ ಮತ್ತಿರೆಡೆಗಳಿಂದಲೂ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.

click me!