ಮದ್ಯ ನಿಷೇಸಲು ಯೋಗಿಗೆ ಲಾಲು ಪುತ್ರ ಸವಾಲ್

By Suvarna Web deskFirst Published Mar 25, 2017, 4:58 PM IST
Highlights

ಮದ್ಯ ಎಂಬುದು ಅಪಾಯಕಾರಿ. ಆರೋಗ್ಯ ಹಾಗೂ ಸಮಾಜವನ್ನು ಅದು ಮಲಿನಗೊಳಿಸುತ್ತದೆ. ಯೋಗಿ ಅವರೇ ಜನರ ಗಮನವನ್ನು ಬೇರೆಡೆ ಸೆಳೆಯಬೇಡಿ. ಮದ್ಯ ನಿಗ್ರಹ ದಳ ಸ್ಥಾಪಿಸಿ ಎಂದು ಆರ್‌ಜೆಡಿ ಸಂಸ್ಥಾಪಕ ಲಾಲು ಪ್ರಸಾದ್ ಯಾದವ್ ಅವರ ಕಿರಿಯ ಪುತ್ರರೂ ಆಗಿರುವ ತೇಜಸ್ವಿ ಸವಾಲು ಹಾಕಿದ್ದಾರೆ.

ಪಟನಾ(ಮಾ.25): ಅಧಿಕಾರಕ್ಕೇರಿದ ಬಳಿಕ ಕಸಾಯಿಖಾನೆಗಳಿಗೆ ಬೀಗ ಹಾಕಿಸುತ್ತಿರುವ, ಯುವತಿಯರಿಗೆ ಕಿರುಕುಳ ನೀಡುವ ಯುವಕರನ್ನು ನಿಗ್ರಹಿಸಲು ‘ರೋಮಿಯೋ ನಿಗ್ರಹ ದಳ’ ಆರಂಭಿಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥಗೆ ನೆರೆಯ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಸವಾಲು ಹಾಕಿದ್ದಾರೆ. ಉತ್ತರಪ್ರದೇಶದಲ್ಲಿ ಮದ್ಯ ನಿಷೇಧಿಸಿ, ರೋಮಿಯೋ ನಿಗ್ರಹ ದಳದ ಮಾದರಿಯಲ್ಲಿ ಮದ್ಯ ನಿಗ್ರಹ ದಳ ಆರಂಭಿಸುವಂತೆ ಆಗ್ರಹಿಸಿದ್ದಾರೆ.

ಮದ್ಯ ಎಂಬುದು ಅಪಾಯಕಾರಿ. ಆರೋಗ್ಯ ಹಾಗೂ ಸಮಾಜವನ್ನು ಅದು ಮಲಿನಗೊಳಿಸುತ್ತದೆ. ಯೋಗಿ ಅವರೇ ಜನರ ಗಮನವನ್ನು ಬೇರೆಡೆ ಸೆಳೆಯಬೇಡಿ. ಮದ್ಯ ನಿಗ್ರಹ ದಳ ಸ್ಥಾಪಿಸಿ ಎಂದು ಆರ್‌ಜೆಡಿ ಸಂಸ್ಥಾಪಕ ಲಾಲು ಪ್ರಸಾದ್ ಯಾದವ್ ಅವರ ಕಿರಿಯ ಪುತ್ರರೂ ಆಗಿರುವ ತೇಜಸ್ವಿ ಸವಾಲು ಹಾಕಿದ್ದಾರೆ.

ಆದಿತ್ಯನಾಥ ಅವರು ಯೋಗಿಯಾಗಿದ್ದರೆ, ಧರ್ಮದ ಪ್ರಾಮಾಣಿಕ ಪ್ರತಿಪಾದಿಕರು ಆಗಿದ್ದರೆ, ಬಿಹಾರ ರೀತಿ ಉತ್ತರಪ್ರದೇಶದಲ್ಲೂ ಮದ್ಯ ನಿಷೇಸಬೇಕು ಎಂದು ಒತ್ತಾಯಿಸಿದ್ದಾರೆ. ಕಳೆದ ವರ್ಷದ ಏ.5ರಿಂದ ಬಿಹಾರದಲ್ಲಿ ಸಂಪೂರ್ಣ ಪಾನ ನಿಷೇಧ ಜಾರಿಯಲ್ಲಿದೆ.

click me!