
ಕೊಪ್ಪಳ(ಮೇ.23): ಪ್ರೀತಿ.. ಪ್ರೇಮ...ಮದುವೆ ಅಂತಾ ನಂಬಿಸಿದ. ಕೊನೆಗೆ ಚಟ ತೀರಿದ ಮೇಲೆ ಹೊಸ ರಾಗ ತೆಗೆದ..ಮೋಸದ ಪ್ರೀತಿಯನ್ನೇ ನಿಜ ಅಂತ ನಂಬಿದ ಅಮಾಯಕ ಯುವತಿಯೊಬ್ಬಳು ದಿಕ್ಕೇ ತೋಚದೆ ಕಣ್ಣೀರಲ್ಲಿ ಕೈ ತೊಳೆಯುತ್ತಿದಾಳೆ. ಈ ಕುರಿತು ಒಂದು ರಿರ್ಪೋಟ್ ಇಲ್ಲಿದೆ.
ಈಕೆ ಕೊಪ್ಪಳದ ಮೂಲದ ಯುವತಿ ರಾಜೇಶ್ವರಿ. ಪ್ರೀತಿ ಪ್ರೇಮ ಅಂತ ನಂಬಿ ಮೋಸ ಹೋದ ಅಮಾಯಕಿ.ದುಡಿಯೋಕೆ ಅಂತ ಬಂದ ಈಕೆ ಹುಬ್ಬಳ್ಳಿಯ ಸಂಬಂಧಿಯೊಬ್ಬರ ಮನೆಯಲ್ಲಿ ಆಶ್ರಯ ಪಡೆದಿದ್ದಳು. ವಿದ್ಯಾನಗರದ ಫಾರ್ಮಾಸಿಟಿಕಲ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವಾಗ ಮಂಜುನಾಥ ಕಪಲಿ ಎಂಬ ಯುವಕನೊಂದಿಗೆ ಪ್ರೀತಿ ಹುಟ್ಟಿದೆ.ನಿನ್ನ ಪ್ರೀತಿ, ಮಾಡ್ತೀನಿ, ನಿನಗೊಂದು ಬಾಳು ಕೊಡತೀನಿ ಅಂತ ಬಂದಿದ್ದ ಈ ಕಳ್ಳನ ಮಾತು ನಂಬಿದ ರಾಜೇಶ್ವರಿ ಈಗ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾಳೆ. ಪ್ರೀತಿಸಿದ ಆ ಯುವಕ ಎಲ್ಲಾ ಮುಗಿದ ಮೇಲೆ ನಿನ್ ಮದುವೆಯಾದ್ರೆ ಅಮ್ಮ ಸಾಯ್ತಾಳೆ ಅಂತ ಜ್ಯೋತಿಷಿ ಹೇಳಿದ್ದಾರೆ ಅಂತ ಹೊಸ ರಾಗ ತೆಗೆದಿದ್ದಾನೆ. ಸಾಲದಕ್ಕೆ ನೀನು ಮಾಟ ಮಾಡಿಸಿದೀಯಾ ಅಂತ ಕಥೆ ಕಟ್ಟುತ್ತಿದ್ದಾನೆ.
ಮಂಜುನಾಥನ ಬಣ್ಣದ ಮಾತು ನಂಬಿದ ರಾಜೇಶ್ವರಿಗೆ ತಮ್ಮಿಬ್ಬರದೂ ಟೈಮ್ ಪಾಸ್ ಲವ್ ಅಲ್ಲ, ಮದುವೆಯಾಗೋಣ ಅಂತ ಹೇಳಿ, ಸಂಬಂಧಿಕರ ಮನೆಯಿಂದ ರಾಜೇಶ್ವರಿಯನ್ನ ಕರೆತಂದು ಬೇರೆ ಮನೆ ಮಾಡಿ ಇಟ್ಟಿದ್ದ. ಆ ಮನೆ ಮಾಲೀಕರಿಗೂ ತಾವಿಬ್ಬರು ಮದುವೆಯಾಗ್ತೀವಿ ಅಂತ ಹೇಳಿದ್ದನಂತೆ. ಮೊನ್ನೆ ಮೊನ್ನೆವರೆಗೂ ಚೆನ್ನಾಗಿದ್ದ ಮಂಜುನಾಥ, ಮದುವೆಯಾಗು ಅಂತ ಕೇಳಿದಾಗ ಈಗ್ಯಾಕೇ ಅವಸರ ಅಂತ ಕಾಲ ದೂಡಿದ್ದಾನೆ. ಇನ್ನು ಮಂಜುನಾಥನ ಮನೆಯವರು ಸಹ ನೀನೆ ನಮ್ಮ ಮನೆ ಸೊಸೆ ಅಂತ ಹೇಳ್ತಿದ್ದರಂತೆ.ಆದ್ರೆ ಈಗ ಅವರು ಉಲ್ಟಾ ಹೊಡೆದಿದ್ದಾರೆ. ಮತ್ತೊಬ್ಬರ ಜೊತೆ ಅಫೇರ್ ಇದೆ, ನೀನು ಸರಿಯಿಲ್ಲ ಅಂತ ಆರೋಪಿಸಿ 50 ಸಾವಿರ ಇಲ್ಲ 1 ಲಕ್ಷ ಕೊಡ್ತೀವಿ ಮಂಜುನಾಥನ ಮರೆತುಬಿಡು ಅಂತಿದಾರೆ.
ಪ್ರೀತಿ ಪ್ರೇಮ ಅಂತ ಹೇಳಿ ಜೀವನ ಪೂರ್ತಿಯಾಗಿ ಜೊತೆಯಾಗಿ ಇರ್ತಿನಿ ಆಂತ ಆಸೆ ಹುಟ್ಟಿಸಿದ ಮಂಜುನಾಥ ಈಗ ಕೈಕೊಟ್ಟಿದ್ದಾನೆ. ಅವನಮೋಸದ ಪ್ರೀತಿಯನ್ನೇ ಸತ್ಯ ಅಂತ ನಂಬಿದ ರಾಜೇಶ್ವರಿ ಈಗ ಕಣ್ಣೀರು ಕೈ ತೊಳೆಯುವಂತಾಗಿದೆ. ನ್ಯಾಯ ಕೊಡಿಸಿ ಅಂತ ಅಶೋಕನಗರ ಠಾಣೆ ಮೆಟ್ಟಿಲೇರಿದಾಳೆ.
ವರದಿ: ಗುರುರಾಜ ಹೂಗಾರ್ ಸುವರ್ಣ ನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.