ರಾಷ್ಟ್ರೀಯ ತನಿಖಾ ತಂಡದಲ್ಲಿ ಕನ್ನಡ ಅನುವಾದಕರಿಗೂ ಇದೆ ಉದ್ಯೋಗ

By Suvarna Web DeskFirst Published Jan 29, 2018, 11:18 AM IST
Highlights

ಭಾರತದ ರಾಷ್ಟ್ರೀಯ ತನಿಖಾ ತಂಡದಲ್ಲಿ ಹೊಸ ರೀತಿಯಾದ ಉದ್ಯೋಗ ಸೃಷ್ಟಿಯಾಗುತ್ತಿದೆ.

ನವದೆಹಲಿ : ಭಾರತದ ರಾಷ್ಟ್ರೀಯ ತನಿಖಾ ತಂಡದಲ್ಲಿ ಹೊಸ ರೀತಿಯಾದ ಉದ್ಯೋಗ ಸೃಷ್ಟಿಯಾಗುತ್ತಿದೆ.

ವಿವಿಧ ಭಾಷೆಗಳಿಂದ ಭಾಷಾಂತರಕಾರರ ಅಗತ್ಯ ಎದುರಾಗಿದ್ದು ಈ ನಿಟ್ಟಿನಲ್ಲಿ ಒಟ್ಟು 23 ಭಾರತೀಯ ಭಾಷೆಗಳ ಭಾಷಾಂತರಕಾರರನ್ನು ನೇಮಿಸಿಕೊಳ್ಳಲು ತೀರ್ಮಾನಿಸಿದೆ.

ಬಂಧಿಸಿದಾಗ, ದಾಳಿ ಮಾಡಿದಾಗ ಬಂಧಿತರ ಹಾಗೂ ಕೆಲ ದಾಖಲೆಗಳಲ್ಲಿರುವ ಭಾಷೆಗಳನ್ನು ಅರ್ಥೈಸಿಕೊಳ್ಳಲು ಸಮಸ್ಯೆಯಾಗುತ್ತಿದೆ. ಆದ್ದರಿಂದ ಅಧಿಕಾರಿಗಳು ಭಾಷಾಂತರಕಾರರನ್ನು ನೇಮಿಸಿಕೊಳ್ಳಲು ನಿರ್ಧಾರ ಮಾಡಿದ್ದಾರೆ.

ಇದರಲ್ಲಿ ಪ್ರಮುಖವಾಗಿ ನಮ್ಮ ಕನ್ನಡ ಭಾಷೆಗೂ ಕೂಡ ಆದ್ಯತೆ ನೀಡಲಾಗಿದೆ. ಇನ್ನುಳಿದಂತೆ ಭೋಜ್’ಪುರಿ, ಗುಜರಾತಿ, ಕನ್ನಡ, ಕೊಂಕಣಿ, ಉರ್ದು, ಕಾಶ್ಮೀರಿ ಭಾಷೆಗಳಿಗೂ ಪ್ರಾಮುಖ್ಯತೆ ನೀಡಲಾಗಿದೆ.

ಇಷ್ಟೇ ಅಲ್ಲದೇ 40 ವಿದೇಶಿ ಭಾಷೆಗಳನ್ನು ಬಲ್ಲವರನ್ನು ನೇಮಿಸಿಕೊಳ್ಳುವ ತೀರ್ಮಾನ ಮಾಡಿದೆ, ನಾರ್ವೆಯನ್, ಕಜಕ್, ಫ್ರೆಂಚ್, ಗ್ರೀಕ್, ಪಾಲೊಶ್ ಸೇರಿದಂತೆ ವಿವಿಧ ಭಾಷೆಗಳ ಭಾಷಾಂತರಕಾರರನ್ನು ಎನ್ಐಎ ನೇಮಿಸಿಕೊಳ್ಳಲಿದೆ.

click me!