ಜು.20ರಿಂದ ಅನಿರ್ಧಿಷ್ಟಾವಧಿ ಮುಷ್ಕರ : ಯಾವ ಸೇವೆಯಲ್ಲಿ ವ್ಯತ್ಯಯ..?

By Web DeskFirst Published Jul 18, 2018, 3:17 PM IST
Highlights

ಜುಲೈ 20 ರಿಂದ ದೇಶದಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ.  ಟೋಲ್ ಮುಕ್ತ ಸೇವೆ, ಡೀಸೆಲ್ ದರವನ್ನು ಜಿ.ಎಸ್ .ಟಿ ವ್ಯಾಪ್ತಿಗೆ ತರುವುದು, ಥರ್ಡ್ ಪಾರ್ಟಿ ಪ್ರೀಮಿಯಂ ಇಳಿಕೆ, ಟಿಡಿಎಸ್ ರದ್ದು, ಪ್ರವಾಸಿ ವಾಹನ ಅವಕಾಶಕ್ಕೆ ಆಗ್ರಹಿಸಿ ಪ್ರತಿಭಟನೆಗೆ ಕರೆ ನೀಡಲಾಗಿದೆ. 

ಬೆಂಗಳೂರು :  ಜುಲೈ 20 ರಿಂದ ದೇಶದಾದ್ಯಂತ ಅನಿರ್ದಿಷ್ಟಾವಧಿ ಲಾರಿ ಮುಷ್ಕರಕ್ಕೆ ಕರೆ ನೀಡಲಾಗಿದೆ.  ಟೋಲ್ ಮುಕ್ತ ಸೇವೆ, ಡೀಸೆಲ್ ದರವನ್ನು ಜಿ.ಎಸ್ .ಟಿ ವ್ಯಾಪ್ತಿಗೆ ತರುವುದು, ಥರ್ಡ್ ಪಾರ್ಟಿ ಪ್ರೀಮಿಯಂ ಇಳಿಕೆ, ಟಿಡಿಎಸ್ ರದ್ದು, ಪ್ರವಾಸಿ ವಾಹನ ಅವಕಾಶಕ್ಕೆ ಆಗ್ರಹಿಸಿ ಪ್ರತಿಭಟನೆಗೆ ಕರೆ ನೀಡಲಾಗಿದೆ. 

ಕೇಂದ್ರ ಸರ್ಕಾರದ ಧೋರಣೆ ವಿರೋಧಿಸಿ ಫೆಡರೇಷನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್ ಅಂಡ್ ಏಜೆಂಟ್ಸ್ ಅಸೋಸಿಯೇಷನ್ ಪ್ರತಿಭಟನೆಗೆ ಕರೆ ನೀಡಿದೆ. 

ಇದರಿಂದ ದೇಶದ 90 ಲಕ್ಷ ವಾಹನಗಳು ಸಂಚಾರ ಸ್ಥಗಿತ ಮಾಡಲಿವೆ.  ರಾಜ್ಯದ 6 ಲಕ್ಷ ಲಾರಿಗಳು ಮುಷ್ಕರಕ್ಕೆ ಬೆಂಬಲ ನೀಡಿವೆ. ಇದರಿಂದ ಗ್ಯಾಸ್ ಮತ್ತು ಪೆಟ್ರೋಲ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಖಾಸಗಿ ಬಸ್ , ಕ್ಯಾಬ್ , ಮ್ಯಾಕ್ಸಿ ಕ್ಯಾಬ್ ಗಳು ಈ ಮುಷ್ಕರಕ್ಕೆ ಬೆಂಬಲ ನೀಡಲಿವೆ. ಜುಲೈ 20 ರಿಂದ ಬೆಳಗ್ಗೆ 6 ರಿಂದ ವಾಣಿಜ್ಯ ಸರಕು ಸಾಗಣಿಕೆ ಸಂಪೂರ್ಣ ಸ್ಥಗಿತಗೊಳ್ಳಲಿದೆ.   ಅಗತ್ಯ ವಸ್ತುಗಳ ಸಾಗಣಿಕರ ಹೊರತುಪಡಿಸಿ ಉಳಿದ ಸರಕು ಸೇವೆ ಪೂರ್ಣ ಸ್ಥಗಿತಗೊಳ್ಳಲಿದೆ  ಎಂದು ಸುದ್ದಿಗೋಷ್ಟಿಯಲ್ಲಿ ಲಾರಿ ಮಾಲೀಕ‌ ಸಂಘದ ಅಧ್ಯಕ್ಷ ಜಿ. ಆರ್ . ಷಣ್ಮುಗಪ್ಪ ಹೇಳಿದ್ದಾರೆ.

click me!