ಪಟ್ಟು ಬಿಡದ ರಾಹುಲ್: ಕಾಂಗ್ರೆಸ್‌ಗೆ ಹಂಗಾಮಿ ಅಧ್ಯಕ್ಷ?

By Web DeskFirst Published Jun 12, 2019, 8:46 AM IST
Highlights

ಕಾಂಗ್ರೆಸ್ಸಿಗೆ ಹಂಗಾಮಿ ಅಧ್ಯಕ್ಷ? ರಾಜೀನಾಮೆ ಪಟ್ಟು ಸಡಿಲಿಸದ ರಾಹುಲ್‌ ಗಾಂಧಿ

ನವದೆಹಲಿ[ಜೂ.12]: ಲೋಕಸಭೆ ಚುನಾವಣೆಯಲ್ಲಿನ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಅಧ್ಯಕ್ಷ ಹುದ್ದೆ ತೊರೆಯಲು ಮುಂದಾಗಿರುವ ರಾಹುಲ್‌ ಗಾಂಧಿ ತಮ್ಮ ನಿರ್ಧಾರವನ್ನು ಬದಲಿಸದೇ ಹೋದಲ್ಲಿ ಹಂಗಾಮಿ ಅಧ್ಯಕ್ಷರೊಬ್ಬರನ್ನು ಕಾಂಗ್ರೆಸ್‌ ಪಕ್ಷ ನೇಮಕ ಮಾಡುವ ಲಕ್ಷಣಗಳು ಕಂಡುಬರುತ್ತಿವೆ.

ಹಿರಿಯ ನಾಯಕರೊಬ್ಬರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ, ಅವರ ನೇತೃತ್ವದಲ್ಲಿ ಹಲವು ನಾಯಕರು ಸಭೆ ಸೇರಿ, ಪಕ್ಷಕ್ಕೆ ಸಂಬಂಧಿಸಿದಂತೆ ಸಾಮೂಹಿಕವಾಗಿ ನಿರ್ಧಾರಗಳನ್ನು ಕೈಗೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರುವ ಅಭಿಪ್ರಾಯ ಪಕ್ಷದಲ್ಲಿ ವ್ಯಕ್ತವಾಗಿದೆ.

ಈ ನಡುವೆ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಗುಲ್ಬರ್ಗ ಲೋಕಸಭಾ ಕ್ಷೇತ್ರದಲ್ಲಿ ಪರಾಭವಗೊಂಡಿರುವ ಹಿನ್ನೆಲೆಯಲ್ಲಿ ತೆರವಾಗಿರುವ ಲೋಕಸಭೆಯಲ್ಲಿನ ಕಾಂಗ್ರೆಸ್‌ ನಾಯಕನ ಸ್ಥಾನವನ್ನು ವಹಿಸಿಕೊಳ್ಳುವಂತೆ ರಾಹುಲ್‌ ಗಾಂಧಿ ಅವರಿಗೆ ಪಕ್ಷದ ನಾಯಕರು ಒತ್ತಡ ಹೇರುತ್ತಿದ್ದಾರೆ. ಜೂ.17ರಿಂದ ಸಂಸತ್‌ ಅಧಿವೇಶನ ಆರಂಭವಾಗುತ್ತಿದೆಯಾದರೂ ಈವರೆಗೆ ಕಾಂಗ್ರೆಸ್‌ ಪಕ್ಷ ಲೋಕಸಭೆಯಲ್ಲಿನ ತನ್ನ ನಾಯಕನನ್ನು ಆಯ್ಕೆ ಮಾಡಿಲ್ಲ.

click me!