ಬೇಕಿದ್ದರೆ ಜೈಲಿಗೆ ಹೋಗ್ತೀನಿ, ಬಂಗಾಳ ಗುಜರಾತ್‌ ಆಗಲು ಬಿಡಲ್ಲ: ದೀದಿ

By Web DeskFirst Published Jun 12, 2019, 8:35 AM IST
Highlights

ಬೇಕಿದ್ದರೆ ಜೈಲಿಗೆ ಹೋಗ್ತೀನಿ, ಬಂಗಾಳ ಗುಜರಾತ್‌ ಆಗಲು ಬಿಡಲ್ಲ: ದೀದಿ| ಧ್ವಂಸಗೊಂಡಿದ್ದ ಸ್ಥಳದಲ್ಲೇ ವಿದ್ಯಾಸಾಗರರ ಪ್ರತಿಮೆ ಅನಾವರಣ| ಬಂಗಾಳ ಆಟದ ಸಾಮಗ್ರಿ ಅಲ್ಲ, ಆಟ ಆಡಲು ಆಗೋದಿಲ್ಲ| ಚುನಾವಣೆ ಬಳಿಕ 10 ಬಲಿ, ಆ ಪೈಕಿ 8 ಜನ ಟಿಎಂಸಿಯವರು

ಕೋಲ್ಕತಾ[ಜೂ.12]: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಲೋಕಸಭೆ ಚುನಾವಣೆ ವೇಳೆ ನಡೆಸಿದ್ದ ರೋಡ್‌ ಶೋ ಸಂದರ್ಭ ಧ್ವಂಸಗೊಂಡಿದ್ದ 19ನೇ ಶತಮಾನದ ಸಮಾಜ ಸುಧಾರಕ ಈಶ್ವರ ಚಂದ್ರ ವಿದ್ಯಾಸಾಗರರ ಪುತ್ಥಳಿಯನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಅನಾವರಣಗೊಳಿಸಿದ್ದಾರೆ.

ವಿದ್ಯಾಸಾಗರರ ಎದೆಮಟ್ಟದ ಪ್ರತಿಮೆಯನ್ನು ಅನಾವರಣಗೊಳಿಸಿ, ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಿ ವಿದ್ಯಾಸಾಗರ ಕಾಲೇಜಿಗೆ ಹಸ್ತಾಂತರಿಸಿದ್ದಾರೆ. ಧ್ವಂಸಗೊಂಡ ಸ್ಥಳದಲ್ಲೇ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ. ಇದೇ ವೇಳೆ ಕಾಲೇಜಿನ ಆವರಣದಲ್ಲಿ 8.5 ಅಡಿ ಎತ್ತರದ ಶ್ವೇತವರ್ಣದ ಫೈಬರ್‌ ಗ್ಲಾಸ್‌ ಪ್ರತಿಮೆಯನ್ನೂ ಉದ್ಘಾಟಿಸಿದ್ದಾರೆ.

ಈ ಸಂದರ್ಭ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮಮತಾ, ಬಂಗಾಳವನ್ನು ಗುಜರಾತ್‌ ಆಗಿ ಪರಿವರ್ತಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಜೈಲಿಗೆ ಹೋಗಲು ಸಿದ್ಧಳಿದ್ದೇನೆ. ಆದರೆ ಬಂಗಾಳವನ್ನು ಗುಜರಾತ್‌ ಆಗಿಸಲು ಬಿಡುವುದಿಲ್ಲ ಎಂದು ಗುಡುಗಿದರು.

ಬಂಗಾಳ ಏನು ಆಟದ ಸಾಮಗ್ರಿಯಲ್ಲ. ಅದನ್ನು ಬಳಸಿ ನೀವು ಆಟ ಆಡಲು ಆಗುವುದಿಲ್ಲ. ನಿಮಗಿಷ್ಟಬಂದಿದ್ದನ್ನೆಲ್ಲಾ ಬಂಗಾಳದಲ್ಲಿ ಮಾಡಲು ಆಗುವುದಿಲ್ಲ. 34 ವರ್ಷಗಳ ಎಡರಂಗದ ಆಳ್ವಿಕೆ ಬಳಿಕ ನಾನು ಅಧಿಕಾರಕ್ಕೆ ಬಂದೆ. ಆದರೆ ಕಾಲ್‌ರ್‍ ಮಾರ್ಕ್ಸ್‌ ಹಾಗೂ ಲೆನಿನ್‌ ಅವರ ಪ್ರತಿಮೆಯನ್ನೇನೂ ಧ್ವಂಸಗೊಳಿಸಿರಲಿಲ್ಲ. ತೃಣಮೂಲ ಕಾಂಗ್ರೆಸ್ಸಿಗರೇ ವಿದ್ಯಾಸಾಗರರ ಪ್ರತಿಮೆ ಧ್ವಂಸ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಇದನ್ನು ಹೇಳಲು ಅವರಿಗೆ ಎಷ್ಟುಧೈರ್ಯವಿರಬೇಕು. ನಮ್ಮ ಕಾರ್ಯಕರ್ತರೇನಾದರೂ ಆ ಕೆಲಸ ಮಾಡಿದ್ದರೆ ಕೆನ್ನೆಗೆ ಬಾರಿಸುತ್ತಿದ್ದೆ ಎಂದು ಅಬ್ಬರಿಸಿದರು.

ಲೋಕಸಭೆ ಚುನಾವಣೆ ಬಳಿಕ ಹಿಂಸಾಚಾರದಲ್ಲಿ 10 ಮಂದಿ ಬಲಿಯಾಗಿದ್ದಾರೆ. ಅದರಲ್ಲಿ 8 ಮಂದಿ ತೃಣಮೂಲ ಹಾಗೂ ಇಬ್ಬರು ಬಿಜೆಪಿ ಕಾರ್ಯಕರ್ತರು. ಎಲ್ಲರಿಗೂ ಪರಿಹಾರ ನೀಡಲು ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡುತ್ತೇನೆ ಎಂದರು.

ಲೋಕಸಭೆ ಚುನಾವಣೆ ಸಂದರ್ಭ ಅಮಿತ್‌ ಶಾ ಅವರು ರೋಡ್‌ ಶೋ ನಡೆಸುವಾಗ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್‌ ನಡುವೆ ಘರ್ಷಣೆ ಉಂಟಾಗಿತ್ತು. ಆ ಸಂದರ್ಭ ವಿದ್ಯಾಸಾಗರರ ಪ್ರತಿಮೆ ಧ್ವಂಸಗೊಂಡಿತ್ತು. ಅದನ್ನು ಬಿಜೆಪಿಯವರೇ ನಾಶಪಡಿಸಿದ್ದಾರೆ ಎಂದು ಮಮತಾ ಆರೋಪಿಸಿದ್ದರೆ, ತೃಣಮೂಲ ಕಾಂಗ್ರೆಸ್‌ ಗೂಂಡಾಗಳು ಆ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ದೂರಿತ್ತು.

ಮಮತಾ ಭಾಷಣದಿಂದ 3 ಬಿಜೆಪಿಗರ ಹತ್ಯೆ: ಮುಕುಲ್‌

ಕೋಲ್ಕತಾ: ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ ಮೂವರು ಬಿಜೆಪಿ ಕಾರ್ಯಕರ್ತರು ಹತ್ಯೆಗೀಡಾಗಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾಡಿದ ಭಾಷಣವೇ ಕಾರಣ. ಅವರ ಭಾಷಣ ಹಿಂಸೆಗೆ ಉತ್ತೇಜನ ನೀಡಿದೆ ಎಂದು ಬಿಜೆಪಿ ನಾಯಕ ಮುಕುಲ್‌ ರಾಯ್‌ ದೂರಿದ್ದಾ

click me!