ಒಂದು ದೇಶ, ಒಂದೇ ಚುನಾವಣೆ? ಮುಂದಿನ ವರ್ಷ ವಿಧಾನಸಭೆ ಜತೆಗೆ ಲೋಕಸಭೆಗೂ ಚುನಾವಣೆ?

Published : Aug 14, 2017, 02:19 PM ISTUpdated : Apr 11, 2018, 01:06 PM IST
ಒಂದು ದೇಶ, ಒಂದೇ ಚುನಾವಣೆ? ಮುಂದಿನ ವರ್ಷ ವಿಧಾನಸಭೆ ಜತೆಗೆ ಲೋಕಸಭೆಗೂ ಚುನಾವಣೆ?

ಸಾರಾಂಶ

ಮುಂದಿನ ಲೋಕಸಭೆ ಚುನಾವಣೆ ಜತೆಗೇ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನು ನಡೆಸುವ ಬಗ್ಗೆ  ಚರ್ಚೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ 2018ರ ನವೆಂಬರ್‌-ಡಿಸೆಂಬರ್‌ ಹೊತ್ತಿಗೆ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳ ಜತೆಗೆ ಲೋಕಸಭೆ ಚುನಾವಣೆಯನ್ನೂ ಅವಧಿಗೆ ಮೊದಲೇ ನಡೆಸುವ ಬಗ್ಗೆಯೂ ಚಿಂತನೆ ನಡೆದಿದೆ.

ನವದೆಹಲಿ: ಮುಂದಿನ ಲೋಕಸಭೆ ಚುನಾವಣೆ ಜತೆಗೇ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನು ನಡೆಸುವ ಬಗ್ಗೆ  ಚರ್ಚೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ 2018ರ ನವೆಂಬರ್‌-ಡಿಸೆಂಬರ್‌ ಹೊತ್ತಿಗೆ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳ ಜತೆಗೆ ಲೋಕಸಭೆ ಚುನಾವಣೆಯನ್ನೂ ಅವಧಿಗೆ ಮೊದಲೇ ನಡೆಸುವ ಬಗ್ಗೆಯೂ ಚಿಂತನೆ ನಡೆದಿದೆ.

ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನು ಹೇಗೆ ಜತೆಯಾಗಿ ನಡೆಸಬಹುದು ಎಂಬುದರ ಬಗ್ಗೆ ಮಾರ್ಗೋಪಾಯಗಳನ್ನು ಹುಡುಕಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ದೇಶಾದ್ಯಂತ ಎಲ್ಲ ಚುನಾವಣೆಗಳೂ ಏಕಕಾಲಕ್ಕೆ ನಡೆಸುವ ಬಗ್ಗೆ ಪ್ರಸ್ತಾಪಿಸುತ್ತಿದ್ದರು. ದೇಶಾದ್ಯಂತ ನಾನಾ ಚುನಾವಣೆಗಳು ಹಂತ ಹಂತವಾಗಿ ನಡೆಯುತ್ತಿದ್ದರೆ ವರ್ಷವಿಡೀ ಚುನಾವಣೆ ಸಂಬಂಧಿತ ಚಟುವಟಿಕೆಗಳೇ ಆಗಿಬಿಡುತ್ತವೆ. ಆಡಳಿತದತ್ತ ಗಮನ ಹರಿಸಲು ಯಾವ ಸರಕಾರಗಳಿಗೂ ಸಾಧ್ಯವಾಗುವುದಿಲ್ಲ. ಜತೆಗೆ ದೇಶದ ಬೊಕ್ಕಸಕ್ಕೆ ಅನಗತ್ಯವಾದ ಆರ್ಥಿಕ ಹೊರೆಯಾಗುತ್ತದೆ ಎಂಬುದು ಈ ಪ್ರಸ್ತಾವನೆಯ ಹಿಂದಿನ ಉದ್ದೇಶ. ಲೋಕಸಭೆಯ ಮಾಜಿ ಮಹಾ ಕಾರ್ಯದರ್ಶಿ ಸುಭಾಶ್ ಕಶ್ಯಪ್‌ ಮತ್ತು ಇತರ ಕಾರ್ಯದರ್ಶಿಗಳ ಸಮೂಹ ಈ ನಿಟ್ಟಿನಲ್ಲಿ ರಾಜಕೀಯ ಸಾಧ್ಯತೆಗಳ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದಾರೆ.

ಅವಧಿ ಮುಗಿಯುವ ಆರು ತಿಂಗಳ ಮೊದಲೇ ಚುನಾವಣೆ ನಡೆಸಲು ಶಾಸನಾತ್ಮಕ ಅವಕಾಶವಿದೆ. ಅಲ್ಲದೆ ಅದಕ್ಕೆ ಸಂವಿಧಾನ ತಿದ್ದುಪಡಿಯಂತಹ ಸಂಕೀರ್ಣ ಕ್ರಮಗಳ ಅಗತ್ಯವೂ ಇಲ್ಲ. 2019ರ ಏಪ್ರಿಲ್‌ನಲ್ಲಿ ನಡೆಯಬೇಕಿರುವ ಲೋಕಸಭೆ ಚುನಾವಣೆಯನ್ನು ಅವಧಿಗೆ ಮೊದಲೇ ನಡೆಸುವುದರಿಂದ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಿಜೋರಾಂ ವಿಧಾನಸಭೆ ಚುನಾವಣೆಗಳ ಜತೆ ಜೋಡಿಸಬಹುದು.

ಮಿಜೋರಾಂ ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಲ್ಲೂ ಬಿಜೆಪಿ ಸರಕಾರಗಳೇ ಅಧಿಕಾರ ನಡೆಸುತ್ತಿವೆ. ತೆಲಂಗಾಣ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆಗಳಿಗೂ ಅಲ್ಲಿ ಅಧಿಕಾರ ನಡೆಸುತ್ತಿರುವ ಪಕ್ಷಗಳು ಒಪ್ಪಿದರೆ ಅವಧಿಗೆ ಮೊದಲೇ ಚುನಾವಣೆ ನಡೆಸಲು ಸಾಧ್ಯವಿದೆ. ಹೀಗೆ ಮಾಡುವ ಮೂಲಕ ಲೋಕಸಭೆಯ ಜತೆಗೆ ಚುನಾವಣೆ ನಡೆಯುವ ರಾಜ್ಯಗಳ ಸಂಖ್ಯೆಗಳನ್ನೂ ಹೆಚ್ಚಿಸಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌