ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್?

By Web DeskFirst Published Oct 3, 2018, 12:33 PM IST
Highlights

ರಾಜ್ಯ ಸರ್ಕಾರ ತನ್ನ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ಒಂದನ್ನು ನೀಡುವ ಸಾಧ್ಯತೆಗಳಿದೆ. ಇನ್ನು ಮುಂದೆ ತನ್ನ ನೌಕರರಿಗೆ ವಾರದ ಕೊನೆಯಲ್ಲಿ 2 ದಿನ ರಜೆ ನೀಡುವ ಬಗ್ಗೆ ಚಿಂತನೆ ನಡೆಸಿದೆ. 

ಬೆಂಗಳೂರು :  ರಾಜ್ಯ ಸರ್ಕಾರ ತನ್ನ ನೌಕರರಿಗೆ ಭರ್ಜರಿ  ಗಿಫ್ಟ್ ನೀಡುತ್ತಿದೆ. ಇನ್ನುಮುಂದೆ ಸರ್ಕಾರಿ ನೌಕರರಿಗೆ 6 ನೇ ವೇತನ ಆಯೋಗದ ಶಿಫಾರಸಿನ ಅನ್ವಯ ವಾರಕ್ಕೆ 5 ದಿನ ಕೆಲಸ ಹಾಗೂ 2 ದಿನ ರಜೆ ನೀಡುವ ಸಾಧ್ಯತೆ ಇದೆ. 

ಈಗಾಗಲೇ 2ನೇ ಶನಿವಾರ ರಜೆ ನೀಡಲಾಗುತ್ತಿದ್ದು, ಅದರ ಜೊತೆಗೆ ನಾಲ್ಕನೇ ಶನಿವಾರವೂ ಕೂಡ ರಜೆ ನೀಡುವ ಸಾಧ್ಯತೆ ಇದೆ.  6ನೇ ವೇತನ ಆಯೋಗದ ಅಂತಿಮ ವರದಿ ಶಿಫಾರಸ್ಸಿಗೆ ಸರ್ಕಾರ ಚಿಂತನೆ ನಡೆಸಿದ್ದು, ಕೆಸಲದ ಅವಧಿ ಹೆಚ್ಚಳ ಮಾಡಿ ವೀಕೆಂಡ್ ರಜೆ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ. 

"

ಇನ್ನು ಮುಂದೆ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಕೆಲಸದ ಅವಧಿಯಲ್ಲಿ ಏರಿಕೆ ಮಾಡುವ ಸಾಧ್ಯತೆ ಇದೆ. ಅಲ್ಲದೇ 15 ದಿನ ಸಾಂದರ್ಭಿಕರ ರಜೆಯನ್ನು ಎಂಟಕ್ಕೆ ಇಳಿಕೆ ಮಾಡುವ ಸಾಧ್ಯತೆಯೂ ಕೂಡ ಹೆಚ್ಚಿದ್ದು, ನಾನಾ ಜಯಂತಿಗಳಿಗೆ ನೀಡುವ ಸರ್ಕಾರಿ ರಜೆಯನ್ನು ಕೂಡ ಕಡಿತ ಮಾಡುವ ಸಾಧ್ಯತೆ ಇದೆ. 

ಈ ಬಗ್ಗೆ ನಾಳೆ  ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.

click me!