ಇವತ್ತು ಏನು ತಿಂದಿದ್ದೀರಿ?: ರಾಹುಲ್ ವರ್ತನೆಗೆ ಅಸಮಾಧಾನ!

Published : Jul 20, 2018, 07:20 PM IST
ಇವತ್ತು ಏನು ತಿಂದಿದ್ದೀರಿ?: ರಾಹುಲ್ ವರ್ತನೆಗೆ ಅಸಮಾಧಾನ!

ಸಾರಾಂಶ

ಪ್ರಧಾನಿ ಆಲಂಗಿಸಿದ ರಾಹುಲ್ ಗಾಂಧಿ ರಾಹುಲ್ ಗಾಂಧಿ ನಡೆಗೆ ಸದನದ ಆಕ್ಷೇಪ ರಾಹುಲ್ ನಡೆ ಖಂಡಿಸಿದ ಹರ್‌ಸಿಮ್ರತ್‌ ಕೌರ್‌ ಬಾದಲ್ ರಾಹುಲ್ ಕಣ್ಣು ಹೊಡೆದಿದ್ದಕ್ಕೆ ಸ್ಪೀಕರ್ ಗರಂ

ನವದೆಹಲಿ(ಜು.20): ಲೋಕಸಭೆಯಲ್ಲಿ ಇಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತೋರಿದ ವರ್ತನೆಗೆ ಎಲ್ಲೆಡೆ ಟೀಕೆ ಕೇಳಿ ಬಂದಿದೆ. ರಾಹುಲ್ ನಡೆಯನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಮತ್ತು ಸದನದ ಕೆಲ ಸದಸ್ಯರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪ್ಪಿಕೊಂಡ ರಾಹುಲ್ ಗಾಂಧಿ ನಡೆಯನ್ನು ಕೇಂದ್ರ ಸಚಿವೆ ಹರ್‌ಸಿಮ್ರತ್‌ ಕೌರ್‌ ಬಾದಲ್ ಖಂಡಿಸಿದ್ದು, ಇದು ಸಂಸತ್ತೇ ಹೊರತು ಮುನ್ನಾಭಾಯೀ ಚಿತ್ರದ ಸೆಟ್ ಅಲ್ಲ ಎಂದು ಹರಿಹಾಯ್ದಿದ್ದಾರೆ.

ಅಲ್ಲದೇ ತಮ್ಮ ಭಾಷಣದಲ್ಲಿ ರಾಹುಲ್ ಪಂಜಾಬ್ ರಾಜ್ಯದವರು ಯಾವಾಗಕಲೂ ಮಾದಕ ದ್ರವ್ಯದ ನಶೆಯಲ್ಲಿರುತ್ತಾರೆ ಎಂದು ಹೇಳಿದ್ದೂ ಹರ್‌ಸಿಮ್ರತ್‌ ಕೌರ್‌ ಬಾದಲ್ ಅವರನ್ನು ಕೆರಳಿಸಿತು. ಇಂದು ಸದನಕ್ಕೆ ಏನು ತಿಂದು ಬಂದಿದ್ದೀರಿ ರಾಹುಲ್ ಎಂದು ಹರ್‌ಸಿಮ್ರತ್‌ ಕೌರ್ ಆಕ್ರೋಶ ವ್ಯಕ್ತಪಡಿಸಿದರು.

 ಇನ್ನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಲಿಂಗಿಸಿದ ಬಳಿಕ ರಾಹುಲ್ ಕಣ್ಣು ಹೊಡೆದ ವರ್ತನೆಗೆ ಸ್ಪೀಕರ್ ಸುಮಿತ್ರಾ ಮಹಾಜನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಧಾನಿಯವರಿಗೆ ಒಂದು ಗೌರವ ಇರುತ್ತದೆ. ಹೀಗಾಗಿ ಎಲ್ಲಾ ಸಂಸದರು ಸದನದ ನಿಯಗಳನ್ನು ಪಾಲಿಸಬೇಕು ರಾಹುಲ್ ಗಾಂಧಿಯ ವರ್ತನೆ ಸದನಕ್ಕೆ ತಕ್ಕುದಲ್ಲ ಎಂದು ಸ್ಪೀಕರ್ ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗರ್ಭಧರಿಸಿ 9 ತಿಂಗಳು ಪೂರೈಸಿದ ಹಸುವಿಗೆ ಸೀಮಂತ ಮಾಡಿದ ಮಂಡ್ಯ ರೈತ
ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌