KRS ನೀರು ಹರಿಸುವುದು ನಿಲ್ಲಿಸಲು ಸುಪ್ರೀಂ ಮೊರೆ ಹೋದ ತಮಿಳುನಾಡು..?

By Kannadaprabha NewsFirst Published Jul 20, 2018, 3:45 PM IST
Highlights

ಇಷ್ಟು ದಿನಗಳ ಕಾಲ ಕಾವೇರಿ ನೀರಿಗಾಗಿ ಖ್ಯಾತೆ ತೆಗೆಯುತ್ತಿದ್ದ ತಮಿಳುನಾಡು ಇದೀಗ ತಮ್ಮ ರಾಜ್ಯಕ್ಕೆ ಬಿಡುತ್ತಿರುವ ನೀರು ನಿಲ್ಲಿಸಬೇಕು ಎಂದು ಇದೀಗ ಸುಪ್ರೀಂ ಮೊರೆ ಹೋಗಿದೆ. 

ಚೆನ್ನೈ : ಇಷ್ಟು ದಿನ ಕಾವೇರಿ ನೀರು ಬಿಡುವಂತೆ ಕ್ಯಾತೆ ತೆಗೆದು ಕರ್ನಾಟಕವನ್ನು ಪೀಡಿಸುತ್ತಿದ್ದ ತಮಿಳುನಾಡು ಇದೀಗ ಕೆ.ಆರ್.ಎಸ್. ಜಲಾಶಯದಿಂದ ನೀರು ಬಿಡುವುದನ್ನು ನಿಲ್ಲಿಸಲು ಆದೇಶ ನೀಡುವಂತೆ ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಕೆ.ಆರ್.ಎಸ್. ಜಲಾಶಯ ಭರ್ತಿಯಾಗಿ ರುವುದರಿಂದ ಎಲ್ಲಾ ನೀರನ್ನೂ ತಮಿಳುನಾಡಿಗೆ ಬಿಡಲಾಗುತ್ತಿದೆ. 

ಇದರಿಂದ ಮೆಟ್ಟೂರು ಡ್ಯಾಂ ಕೂಡ ತುಂಬಿದೆ. ಡ್ಯಾಮ್ ಪಕ್ಕದಲ್ಲೇ ಸಾವಿರಾರು ಎಕರೆ ಭತ್ತದ ಗದ್ದೆಗಳು ಇರುವುದರಿಂದ ಅವೆಲ್ಲವೂ ಈಗ ಮುಳುಗಡೆ ಯಾಗಲಿದೆ. 

ಹೀಗಾಗಿ ಬೆಳೆಗಳನ್ನು ಉಳಿಸಿಕೆ ಕೊಳ್ಳಲು ಮುಂದಾಗಿರುವ ತಮಿಳುನಾಡು ನೀರು ಬಿಡುವುದನ್ನು ನಿಲ್ಲಿಸುವಂತೆ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಇದು ಸುಪ್ರೀಂಕೋರ್ಟ್ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ.

[ಸುಳ್ಳು ಸುದ್ದಿ]

click me!