ಸೆಕ್ಸ್ ದೃಶ್ಯಗಳನ್ನು ಗ್ರಹಿಸದಿದ್ದರೆ ನೀವು ಪ್ರೌಢರಾಗಿಲ್ಲ ಎಂದು ಅರ್ಥ

Published : Jul 20, 2018, 05:20 PM IST
ಸೆಕ್ಸ್ ದೃಶ್ಯಗಳನ್ನು ಗ್ರಹಿಸದಿದ್ದರೆ ನೀವು ಪ್ರೌಢರಾಗಿಲ್ಲ ಎಂದು ಅರ್ಥ

ಸಾರಾಂಶ

ಸ್ಕೇರೆಡ್ ಗೇಮ್ಸ್ ಚಿತ್ರದ ವಿವಾದಿತ ದೃಶ್ಯಗಳ ಬಗ್ಗೆ ನಟಿ ರಾಜಶ್ರೀ ಕೋಪ ಸಿನಿಮಾದಲ್ಲಿನ ಅಭಿನಯ ಪಾತ್ರಕ್ಕಷ್ಟೆ ಸೀಮಿತ

ನವದೆಹಲಿ[ಜು.20]: ಸಿನಿಮಾಗಳ ಸೆಕ್ಸ್ ದೃಶ್ಯಗಳು ಹಾಗೂ ಅದಕ್ಕೆ ಸಂಬಂಧಪಟ್ಟ ಹೇಳಿಕೆಗಳು ಆಗಾಗ ವಿವಾದ ಪಡೆದುಕೊಳ್ಳುತ್ತಿರುತ್ತವೆ. ನಟಿಯೊಬ್ಬಳ ಹೇಳಿಕೆ ಕೂಡ ಅದೇ ಸ್ವರೂಪ ತಾಳಿದೆ.

ಬಾಲಿವುಡ್ ನಟಿ ರಾಜಶ್ರೀ ದೇಶಪಾಂಡೆ ಇತ್ತೀಚಿಗೆ ಬಿಡುಗಡೆಯಾದ ನೆಟ್ ಫ್ಲಿಕ್ಸ್  ವೆಬ್ ಸೀರೀಸ್ ಸ್ಕೇರೆಡ್ ಗೇಮ್ಸ್ ಚಿತ್ರ ಸರಣಿಯಲ್ಲಿ ನಟಿಸಿದ್ದಾರೆ. ಈ ಅಂತರ್ಜಾಲ - 8 ವೆಬ್ ಸರಣಿಯಲ್ಲಿ ರಾಜಶ್ರೀ ಅವರು ಗ್ಯಾಂಗ್ ಸ್ಟಾರ್ ನವಾಝುದ್ದೀನ್ ಸಿದ್ದಿಕಿ  ಪತ್ನಿಯಾಗಿ ಅಭಿನಯಿಸಿದ್ದು ಇದರಲ್ಲಿನ ಕೆಲವು ದೃಶ್ಯಗಳು ವಿವಾದ ಪಡೆದುಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ.

ತಾವು ಅಭಿನಯಿಸಿರುವ ದೃಶ್ಯದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಜಶ್ರೀ, ಸಂಬಂಧಪಟ್ಟ ಸೆಕ್ಸ್ ದೃಶ್ಯಗಳನ್ನು ಪ್ರೇಕ್ಷಕರು ಗ್ರಹಿಸದಿದ್ದರೆ ಅವರು ಪ್ರೌಢರಾಗಿಲ್ಲ ಎಂದು ಅರ್ಥ. ಸೆಕ್ಸ್ ಒಂದು ಸುಂದರವಾದ ವಿಷಯ. ಆದರೆ ಜನರು ಇದರ ಬಗ್ಗೆ ತಪ್ಪಾದ ಅಭಿಪ್ರಾಯವನ್ನೇ ಹೊಂದಿರುತ್ತಾರೆ. ಸಿನಿಮಾದಲ್ಲಿ ನಾನು ನನ್ನ ಗಂಡನನ್ನು ಪ್ರೀತಿಸಿದರೆ ಅದು ಪಾತ್ರದ ವಿಷಯವೇ ಹೊರತು ಮತ್ತೇನಿಲ್ಲ ಎಂದಿದ್ದಾರೆ.

ಕಳೆದ ವರ್ಷ ರಾಜಶ್ರೀ ನಟಿಸಿದ ಸೆಕ್ಸಿ ದುರ್ಗಾ ಎಂಬ ಮಲಯಾಳಿ ಚಿತ್ರದಲ್ಲಿನ ಕೆಲವು ದೃಶ್ಯಗಳು ಹಾಗೂ ಸಂಭಾಷಣೆಗಳು ಕೂಡ ಪ್ರೇಕ್ಷಕರಿಂದ ವಿರೋಧ ವ್ಯಕ್ತವಾಗಿತ್ತು. ನಟಿ ಮಾತ್ರ ತಾವು ಮಾಡಿದ ಪಾತ್ರ ಸರಿ ಎಂದು ಪಾತ್ರಕ್ಕೆ ತಕ್ಕಂತೆ ನಟಿಸಿರುವುದಾಗಿ ಸಮರ್ಥಿಸಿಕೊಂಡಿದ್ದರು. 

 

ಈ ಸುದ್ದಿಯನ್ನು ಓದಿ: ಶೀರೂರು ಶ್ರೀಗಳು ವಿಧಿವಶ : ಕಂಬನಿ ಮಿಡಿಯುತ್ತಿರುವ ಗೋವು, ಸಾಕು ನಾಯಿ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bengaluru: ಲವ್ ಮಾಡು, ಇಲ್ಲಾಂದ್ರೆ ಸಾಯ್ತೀನಿ: ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಕಿರುಕುಳ ಕೊಟ್ಟ ಖತರ್ನಾಕ್ ಲೇಡಿ
ಸರ್ಕಾರಿ ನೇಮಕಾತಿ ವಿಳಂಬ: ಮನನೊಂದು ಧಾರವಾಡ ರೈಲು ಹಳಿಗೆ ಸಿಲುಕಿ ಯುವತಿ ದಾರುಣ ಸಾವು!