ಹಾದಿ ತಪ್ಪಿಸುವ ಜಾಹೀರಾತು: ಸೆಲೆಬ್ರಿಟಿಗಳು ಕಟಕಟೆಗೆ!

By Web DeskFirst Published Dec 21, 2018, 11:02 AM IST
Highlights

ಗ್ರಾಹಕ ರಕ್ಷಣಾ ಮಸೂದೆ-2018 ಲೋಕಸಭೆಯಲ್ಲಿ ಅಂಗೀಕಾರ ಪಡೆದಿದ್ದು, ಹಾದಿ ತಪ್ಪಿಸುವ ಜಾಹೀರಾತುಗಳಲ್ಲಿ ಸೆಲೆಬ್ರಿಟಿಗಳು ಕಾಣಿಸಿಕೊಂಡರೆ ಶಿಕ್ಷೆ!

ನವದೆಹಲಿ[ಡಿ.21]: ಗ್ರಾಹಕರನ್ನು ಹಾದಿ ತಪ್ಪಿಸುವ ಜಾಹೀರಾತುಗಳಿಗೆ ಪ್ರಚಾರ ರಾಯಭಾರಿಗಳಾಗಿ ಕಾಣಿಸಿಕೊಳ್ಳುವ ‘ಸೆಲೆಬ್ರಿಟಿ’ಗಳನ್ನು ಶಿಕ್ಷಿಸುವ ಗ್ರಾಹಕ ರಕ್ಷಣಾ ಮಸೂದೆ-2018 ಲೋಕಸಭೆಯಲ್ಲಿ ಗುರುವಾರ ಗದ್ದಲದ ನಡುವೆಯೇ ಅಂಗೀಕಾರಗೊಂಡಿದೆ.

ದಾರಿತಪ್ಪಿಸುವ ಜಾಹೀರಾತುಗಳು ಹಾಗೂ ಆಹಾರ ಕಲಬೆರಕೆ ಮಾಡುವ ಕಂಪನಿಗಳಿಗೆ ಭಾರಿ ದಂಡ ಹಾಗೂ ಕಠಿಣ ಶಿಕ್ಷೆ ವಿಧಿಸುವ ಅಂಶ ಈ ವಿಧೇಯಕದಲ್ಲಿದೆ. ರಾಜ್ಯಸಭೆಯಲ್ಲಿ ಅಂಗೀಕಾರವಾಗುವುದು ಬಾಕಿ ಇದೆ. ಅಲ್ಲಿನ ಪ್ರಕ್ರಿಯೆಯೂ ಪೂರ್ಣಗೊಂಡರೆ 1986 ಗ್ರಾಹಕ ರಕ್ಷಣಾ ಕಾಯ್ದೆ ರದ್ದಾಗಿ, ಹೊಸ ಕಾಯ್ದೆ ಅಸ್ತಿತ್ವಕ್ಕೆ ಬರಲಿದೆ.

ಉತ್ಪನ್ನದ ಗುಣಮಟ್ಟಅಥವಾ ದೋಷಪೂರಿತ ಸೇವೆಗಳಿಂದ ಗ್ರಾಹಕರಿಗೆ ತೊಂದರೆಯಾದರೂ ಕ್ರಮ ಜರುಗಿಸುವ ಅಂಶ ಮಸೂದೆಯಲ್ಲಿದೆ. ಸೆಲೆಬ್ರಿಟಿಗಳು ಹಾದಿತಪ್ಪಿಸುವ ಜಾಹೀರಾತುಗಳಲ್ಲಿ ಕಾಣಿಸಿಕೊಂಡರೆ ಅಥವಾ ಅಂತಹ ಜಾಹೀರಾತುಗಳಿಗೆ ಧ್ವನಿ ನೀಡಿದರೂ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಮಸೂದೆ ಅವಕಾಶ ಕಲ್ಪಿಸುತ್ತದೆ.

ಮಸೂದೆ ಕುರಿತು ಮಾತನಾಡಿದ ಗ್ರಾಹಕ ವ್ಯವಹಾರಗಳ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌, ಮೂರು ದಶಕಗಳಿಂದ ಕಾಯ್ದೆಗೆ ತಿದ್ದುಪಡಿ ತಂದಿರಲಿಲ್ಲ. ಗ್ರಾಹಕರ ಹಕ್ಕುಗಳನ್ನು ಬಲಗೊಳಿಸಲು ಬದಲಾವಣೆಯ ಅವಶ್ಯಕತೆ ಇತ್ತು. ಗ್ರಾಹಕರ ಹಕ್ಕುಗಳನ್ನು ಈ ಮಸೂದೆ ಬಲಗೊಳಿಸುವುದಷ್ಟೇ ಅಲ್ಲದೆ, ಸರಕು ಹಾಗೂ ಸೇವೆಯಲ್ಲಿನ ದೋಷಗಳ ಕುರಿತಾದ ಗ್ರಾಹಕರ ದೂರುಗಳ ಇತ್ಯರ್ಥಕ್ಕೆ ವ್ಯವಸ್ಥೆಯೊಂದನ್ನು ಕಲ್ಪಿಸುತ್ತದೆ ಎಂದು ವಿವರಿಸಿದರು. ತಮಿಳುನಾಡು ಸಂಸದರ ಕಾವೇರಿ ಪ್ರತಿಭಟನೆ, ಕಾಂಗ್ರೆಸ್ಸಿಗರ ರಫೇಲ್‌ ಗದ್ದಲದ ನಡುವೆಯೇ ಮಸೂದೆ ಅಂಗೀಕಾರವಾಯಿತು.

ಯಾವ ತಪ್ಪಿಗೆ ಏನು ಶಿಕ್ಷೆ?

- ಗ್ರಾಹಕರ ಹಿತಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಸುಳ್ಳು ಅಥವಾ ದಾರಿ ತಪ್ಪಿಸುವ ಜಾಹೀರಾತು ನೀಡುವ ಉತ್ಪಾದಕ ಅಥವಾ ಸೇವಾದಾರ ಸಂಸ್ಥೆಗಳೀಗೆ ಕನಿಷ್ಠ 2 ವರ್ಷ ಜೈಲು ಶಿಕ್ಷೆ ಹಾಗೂ 10 ಲಕ್ಷ ರು.ವರೆಗೂ ದಂಡ.

- ಒಮ್ಮೆ ಈ ರೀತಿ ತಪ್ಪು ಮಾಡಿ, ಸಿಕ್ಕಿಬಿದ್ದು ಬಳಿಕ ಅದನ್ನೇ ಮುಂದುವರಿಸಿದರೆ 5 ವರ್ಷದವರೆಗೂ ಜೈಲು 50 ಲಕ್ಷ ರು. ದಂಡ

- ಕಲಬೆರಕೆ ವಸ್ತು ಮಾಋುಆಟ ಮಾಡಿದರೆ, ಅದರಿಂದ ಯಾವುದೇ ಹಾನಿಯಾಗದಿದ್ದ ಪಕ್ಷದಲ್ಲೂ ಆರು ತಿಂಗಳು ಜೈಲು 1 ಲಕ್ಷ ರು. ದಂಡ. ಸಣ್ಣಪುಟ್ಟಗಾಯವಾದರೆ 1 ವರ್ಷ ಜೈಲು, 3 ಲಕ್ಷ ರು. ದಂಡ. ಗಂಭೀರ ಗಾಯವಾದರೆ, 7 ವರ್ಷ ಜೈಲು 5 ಲಕ್ಷ ರು. ದಂಡ. ಕಲಬೆರಕೆ ವಸ್ತು ಸೇವಿಸಿ, ವ್ಯಕ್ತಿ ಮೃತನಾದರೆ ಆರೋಪಿಗೆ ಜೀವಾವಧಿವರೆಗೆ ವಿಸ್ತರಿಸಬಹುದಾದ 7 ವರ್ಷ ಜೈಲು 10 ಲಕ್ಷ ರು.ವರೆಗೆ ದಂ.ಡ

click me!