ಈ ನಾಲ್ವರಲ್ಲಿ ಯಾರಾಗಲಿದ್ದಾರೆ ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ..?

By Web DeskFirst Published Mar 9, 2019, 10:21 AM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ವಿವಿಧ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಜೋರಾಗಿದೆ. ಇತ್ತ ಬಾಗಲಕೋಟೆ ಅಭ್ಯರ್ಥಿ ಆಯ್ಕೆಗೆ ಸಿದ್ದರಾಮಯ್ಯ ಚರ್ಚೆ ನಡೆಸಿ ನಾಲ್ಕು ಸಂಭಾವ್ಯರ ಪಟ್ಟಿ ಸಿದ್ದಪಡಿಸಿದ್ದಾರೆ.

ಬೆಂಗಳೂರು :  ಲೋಕಸಭೆ ಚುನಾವಣೆಗೆ ಬಾಗಲಕೋಟೆ ಅಭ್ಯರ್ಥಿ ಆಯ್ಕೆ ಸಂಬಂಧ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಬಾಗಲಕೋಟೆ ಜಿಲ್ಲಾ ಮುಖಂಡರೊಂದಿಗೆ ಸಭೆ ನಡೆಸಿದ್ದು, ನಾಲ್ಕು ಮಂದಿ ಸಂಭಾವ್ಯರ ಪಟ್ಟಿಸಿದ್ಧಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಅಭಿಪ್ರಾಯ ಕ್ರೋಡೀಕರಿಸಿದ ಬಳಿಕ ವೀಣಾ ಕಾಶಪ್ಪನವರ್‌, ಬಾಯಕ್ಕ ಮೇಟಿ, ಮಹಂತೇಶ್‌ ಉದುಪುಡಿ, ನಂಜಯ್ಯನ ಮಠ ಬಗ್ಗೆ ಹೆಚ್ಚಿನ ನಾಯಕರು ಒಲವು ತೋರಿದ್ದರಿಂದ ಈ ನಾಲ್ಕು ಮಂದಿ ಸಂಭಾವ್ಯರ ಪಟ್ಟಿಸಿದ್ಧಪಡಿಸಿಲಾಗಿದೆ. ಅಂತಿಮವಾಗಿ ಮತ್ತೊಂದು ಸುತ್ತಿನ ಚರ್ಚೆ ನಡೆಸಿ ಮೂವರ ಹೆಸರನ್ನು ಕೆಪಿಸಿಸಿಗೆ ಕಳುಹಿಸಲಾಗುವುದು. ಕೆಪಿಸಿಸಿಯು ಈ ಪಟ್ಟಿಯನ್ನು ದೆಹಲಿಯಲ್ಲಿ ನಡೆಯಲಿರುವ ಚುನಾವಣಾ ಪರಿಶೀಲನಾ ಸಮಿತಿಗೆ ಕಳುಹಿಸಲಿದೆ ಎಂದು ಮೂಲಗಳು ತಿಳಿಸಿವೆ.

ಬಾಗಲಕೋಟೆಯಿಂದ ಕೈ ಅಭ್ಯರ್ಥಿಯಾಗಿ ಸ್ಪರ್ಧಿಸಲು ಹಲವು ಮಂದಿ ಆಕಾಂಕ್ಷಿಗಳು ಲಾಬಿ ನಡೆಸುತ್ತಿದ್ದಾರೆ. ಶುಕ್ರವಾರದ ಸಭೆಯಲ್ಲಿ ಒಟ್ಟು 12 ಮಂದಿ ಆಕಾಂಕ್ಷಿಗಳ ಬಗ್ಗೆ ಗಂಭೀರ ಚರ್ಚೆ ನಡೆಸಲಾಗಿದ್ದು, ಕೊನೆಗೆ 4 ಹೆಸರುಗಳು ಅಂತಿಮಗೊಂಡವೆಂದು ತಿಳಿದುಬಂದಿದೆ.

click me!