
ಬೆಂಗಳೂರು[ನ.23] ಹಾಸಸ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ನಾಯಕ, ಶಾಸಕ, ಮಾಜಿ ಮಂತ್ರಿ ಸಿಟಿ ರವಿ ಸ್ಪರ್ಧೆ ಮಾಡುತ್ತಾರೆಯೇ? ಹೀಗೊಂದು ಸುದ್ದಿ ಹಬ್ಬಿದೆ. ಈ ಬಗ್ಗೆ ಸ್ವತಃ ರವಿ ಅವರೇ ಉತ್ತರ ನೀಡಿದ್ದಾರೆ.
ಸದ್ಯಕ್ಕೆ ನಾನು ಶಾಸಕ. ಶಾಸಕನ ಕೆಲಸ ಮಾಡ್ತಿದೀನಿ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಆಲೋಚನೆ ಇಲ್ಲ. ಈ ವಿಚಾರ ನಾನು ಹೊಸದಾಗಿ ಕೇಳ್ತಿದೀನಿ. ಪಕ್ಷ ಏನು ಹೇಳುತ್ತೋ ಕೇಳ್ತೀನಿ ಎಂದಿದ್ದಾರೆ. ಈ ಮೂಲಕ ಸ್ಪರ್ಧೆ ಮಾಡಲು ತಯಾರಿದ್ದೇನೆ ಎಂಬುದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ.
ಈ ಮೂವರಲ್ಲಿ ಒಬ್ಬರು ಬಿಜೆಪಿ ಹೊಸ ರಾಜ್ಯಾಧ್ಯಕ್ಷರು?
ಇನ್ನು ಹಾಸನದಲ್ಲಿ ದೋಸ್ತಿಗಳ ಕಡೆಯಿಂದ ಜೆಡಿಎಸ್ ಸ್ಪರ್ಧೆ ಮಾಡುವುದು ನಿಶ್ಚಿತ. ಮಾಜಿ ಪ್ರಧಾನಿ ದೇವೇಗೌಡರು ತಾವೇ ಸ್ಪರ್ಧೆ ಮಾಡುತ್ತಾರೋ ಅಥವಾ ಮೊಮ್ಮಕಗ ಪ್ರಜ್ವಲ್ ಗೆ ಸ್ಥಾನ ಬಿಟ್ಟು ಕೊಡುತ್ತಾರೋ ಕಾದು ನೋಡಬೇಕಿದೆ. ಒಟ್ಟಿನಲ್ಲಿ ಹಾಸನದಲ್ಲಿ ಜಾತಿ, ಸಮುದಾಯ, ಪಕ್ಷದ ಸಂಘಟನೆ ಎಲ್ಲವನ್ನು ಲೆಕ್ಕ ಹಾಕಿ ಬಿಜೆಪಿ ಸಿಟಿ ರವಿಗೆ ಟಿಕೆಟ್ ನೀಡಿದರೆ ಆಶ್ಚರ್ಯ ಇಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.