ಮಂಡ್ಯ ಉಪ ಚುನಾವಣೆ: ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ

By Web DeskFirst Published Oct 17, 2018, 3:44 PM IST
Highlights

ಮಂಡ್ಯ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟಗೊಂಡಿದೆ.ಯಾಕೆ? ಏನು? ಇಲ್ಲಿದೆ ವಿವರ

ಮಂಡ್ಯ, [ಅ.17]: ಮಂಡ್ಯ ಲೋಕಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಡಾ. ಸಿದ್ದರಾಮಯ್ಯ ಅವರು ಈಗಾಗಲೇ ನಾಮಪತ್ರ ಸಲ್ಲಿಸಿದ ಬೆನ್ನಲ್ಲಿಯೇ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟಗೊಂಡಿದೆ.

 ಪ್ರತಿ ಚುನಾವಣೆಯಲ್ಲೂ ಹೊಸ ಮುಖಗಳಿಗೆ ಮಣೆ ಹಾಕಲಾಗುತ್ತಿದೆ ಎಂದು ಜಿಲ್ಲಾ ಬಿಜೆಪಿ ಕಾರ್ಯಕರ್ತರು ವರಿಷ್ಠರ ನಿರ್ಧಾರದ ವಿರುದ್ಧ ಸಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಡ್ಯ ಲೋಕಸಭೆ : ಜೆಡಿಎಸ್'ನಿಂದ ಕೊನೆ ಕ್ಷಣದಲ್ಲಿ ಅಭ್ಯರ್ಥಿ ಬದಲು

ಮಂಡ್ಯದಲ್ಲಿ ಬಿಜೆಪಿ ಟಿಕೆಟ್ ಗೆ ಅಡ್ವಾನ್ಸ್ ಬುಕಿಂಗ್ ಇದೆ. ಟಿಕೆಟ್ ಪಡೆಯಲು ದೇವೇಗೌಡರ ಶಿಫಾರಸು ಪತ್ರ ತರಬೇಕು. ಮಂಡ್ಯದಲ್ಲಿ ಬಿಜೆಪಿ ಗೆಲ್ಲಲು ವಿಫಲ ಆಗೋದಕ್ಕೆ ಆರ್.ಅಶೋಕ್ ಮೂಲ ಪುರುಷ. ಜಿಲ್ಲೆಯ ಸ್ವಯಂಘೋಷಿತ ಒಕ್ಕಲಿಗ ನಾಯಕ ಎಂದು ಅಶೋಕ್ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಡ್ಯ ಲೋಕಸಭೆ ಗೆಲ್ಲಲು ಬಿಜೆಪಿ ಸೂಪರ್ ಮಾಸ್ಟರ್ ಪ್ಲಾನ್

ಮಂಡ್ಯದಲ್ಲಿ ಡಾ.ಸಿದ್ದರಾಮಯ್ಯಗೆ ಬಿಜೆಪಿ ಟಿಕೆಟ್ ನೀಡಿದಕ್ಕೆ ಈ ಭಿನ್ನಮತ ಸ್ಫೋಟಗೊಂಡಿದೆ. ಶತಾಗತಾವಾಗಿ ಈ ಬಾರಿ ಮಂಡ್ಯದಲ್ಲಿ ಕೇಸರಿ ಬಾವುಟ ಹಾರಿಸಲು ಹೊರಟ್ಟಿದ್ದ ರಾಜ್ಯ ಬಿಜೆಪಿ  ನಾಯಕರಿಗೆ ಭಿನ್ನಮತ ನುಂಗಲಾಗದ ತುತ್ತಾಗಿ ಪರಿಣಮಿಸಿದೆ. 

ಇದೇ ನವೆಂಬರ್ 3 ರಂದು ಮಂಡ್ಯ ಲೋಕಸಭಾ ಉಪಚುನಾವಣೆಗೆ ಮತದಾನ ನಡೆಯಲಿದ್ದು, ನ.06ರಂದು ಫಲಿತಾಂಶ ಹೊರಬೀಳಲಿದೆ.

click me!